23 ವರ್ಷಗಳ ಹಿಂದೆ ಈ ದಿನ ಭಾರತದಲ್ಲಿ ಮೊದಲ ಮೊಬೈಲ್ ಕರೆ ಸ್ವೀಕಾರ!

  

  • Jul 31, 2018, 15:46 PM IST
1 /6

ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಮೊಬೈಲ್ ಕರೆ ಮಾಡಿದ್ದು 23 ವರ್ಷಗಳ ಹಿಂದೆ! 1995 ರಲ್ಲಿ ಆರಂಭವಾದ ಈ ಸೇವೆ ಇಂದು ಕೋಟ್ಯಾಂತರ ಜನರನ್ನು ತಲುಪಿದೆ. ಆದರೆ ಈ ಸೇವೆ ಯಾವಾಗ, ಯಾವ ಕಂಪನಿಯಿಂದ, ಎಲ್ಲಿಂದ ಆರಂಭವಾಯಿತು, ಮೊದಲ ಕರೆ ಯಾವಾಗ, ಯಾರು ಮಾಡಿದರು ಎಂಬುದರ ಬಗ್ಗೆ ನಿಮಗೆ ಮಾಹಿತಿ ಇದೆಯೇ? ಆ ಕಾಲದಲ್ಲಿ ಒಂದು ಕರೆ ಮಾಡಲು ಎಷ್ಟು ಹಣ ನೀಡಬೇಕಿತ್ತು ಎಂಬುದು ನಿಮಗೆ ಗೊತ್ತೇ? ಹಾಗಿದ್ದರೆ ದೇಶದಲ್ಲಿ ಮೊದಲ ಬಾರಿಗೆ ಟೆಲಿಕಾಂ ಸೇವಾ ಪುರೈಕೆದಾರರ ಬಗ್ಗೆ ನಾವು ನಿಮಗೆ ತಿಳಿಸಲಿದ್ದೇವೆ. ಅಷ್ಟೇ ಅಲ್ಲ, ಭಾರತದಲ್ಲಿ ಮೊಬೈಲ್ ಪೋನ್ ಹೇಗೆ ಜನರ ಜೀವನವನ್ನೇ ಬದಲಿಸಿತು ಎಂಬುದರ ಬಗ್ಗೆಯೂ ತಿಳಿಯಿರಿ.  

2 /6

ಭಾರತದಲ್ಲಿ 1995ರಲ್ಲಿ ಮೊಬೈಲ್ ಕ್ರಾಂತಿಯೇ ಆರಂಭವಾಯಿತು. ಅಂದಿನಿಂದ ಇಂದಿನವರೆಗೆ ನೋಡಿದರೆ ಭಾರತ ವಿಶ್ವದ ಎರಡನೇ ಟೆಲಿಕಾಂ ಮಾರ್ಕೆಟ್ ಆಗಿ ಹೊರಹೊಮ್ಮಿದೆ. ಅಲ್ಲದೆ, ಭಾರತದಲ್ಲಿ ಮೊಬೈಲ್ ಫೋನ್ ಬಳಕೆದಾರರ ಸಂಖ್ಯೆಯೂ ಹೆಚ್ಚುತ್ತಿದೆ. 1995ರಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು ಅವರು ಆಗಿನ ಕೇಂದ್ರ ದೂರಸಂಪರ್ಕ ಸಚಿವ ಸುಖರಾಮ್ ಅವರೊಂದಿಗೆ ಮೊದಲ ಬಾರಿ ಮೊಬೈಲ್ ಕರೆ ಮಾಡಿ ಮಾತನಾಡಿದ್ದರು.  

3 /6

1995ರಲ್ಲಿ ಭಾರತದಲ್ಲಿ ಮೊದಲ ಮೊಬೈಲ್ ಕರೆ ಕೋಲ್ಕತ್ತಾದಿಂದ ದೆಹಲಿಗೆ ಮಾಡಲಾಗಿತ್ತು. ಅಂದಿನ ಮುಖ್ಯಮಂತ್ರಿ ಜ್ಯೋತಿ ಬಸು ಅವರು ಕೊಲ್ಕತ್ತಾದ ರಾಯ್ಟರ್ಸ್ ಕಟ್ಟಡದಿಂದ ಕರೆ ಮಾಡಿದ್ದರು. ಭಾರತದ ಮೊದಲ ಮೊಬೈಲ್ ಒಪೆರಾ ಕಂಪೆನಿ ಮೋದಿ ಟೆಲ್ಸ್ಟ್ರಾ ಮತ್ತು ಅದರ ಸೇವೆಯನ್ನು ಮೊಬೈಲ್ ನೆಟ್ ಎಂದು ಕರೆಯಲಾಯಿತು. ಈ ನೆಟ್ವರ್ಕ್ನಲ್ಲಿ ಮೊದಲ ಮೊಬೈಲ್ ಕರೆಯನ್ನು ಮಾಡಲಾಗಿತ್ತು. ಮೋದಿ ಟೆಲ್ಸ್ಟ್ರಾ ಭಾರತದ ಮೋದಿ ಗ್ರೂಪ್ ಮತ್ತು ಆಸ್ಟ್ರೇಲಿಯಾದ ಟೆಲಿಕಾಂ ಕಂಪೆನಿ ಟೆಲ್ಸ್ಟ್ರಾ ನಡುವಿನ ಜಂಟಿ ಉದ್ಯಮವಾಗಿತ್ತು. ದೇಶದಲ್ಲಿ ಸೆಲ್ಯುಲರ್ ಸೇವೆ ಒದಗಿಸಲು ಪರವಾನಗಿ ಪಡೆದ 8 ಕಂಪನಿಗಳಲ್ಲಿ ಈ ಕಂಪನಿಯೂ ಒಂದು.

4 /6

ಮೊಬೈಲ್ ಸೇವೆ ಭಾರತದಲ್ಲಿ ಹೆಚ್ಚು ಜನರನ್ನು ತಲುಪಲು ಸಾಕಷ್ಟು ಸಮಯವನ್ನೇ ತೆಗೆದುಕೊಂಡಿತು. ಅದಕ್ಕೆ ಕಾರಣ ದುಬಾರಿ ಕರೆ ದರ. ಆರಂಭದಲ್ಲಿ ಹೊರಹೋಗುವ ಕರೆಗಳಿಗೆ ಒಂದು ನಿಮಿಷಕ್ಕೆ 16 ರೂ.ಗಳನ್ನೂ ವಿಧಿಸಲಾಗುತ್ತಿತ್ತು. ಒಳಬರುವ ಕರೆಗಳಿಗೂ ಸಹ ಹಣ ತೆರಬೇಕಾಗಿತ್ತು. ಸಂಚಾರಿ ದೂರವಾಣಿ ಸೇವೆಯನ್ನು ಪ್ರಾರಂಭಿಸಿದ 5 ವರ್ಷಗಳ ನಂತರ ಮೊಬೈಲ್ ಚಂದಾದಾರರ ಸಂಖ್ಯೆಯು 5 ಮಿಲಿಯನ್ ತಲುಪಿತು. 

5 /6

ನಂತರದ 10 ವರ್ಷಗಳಲ್ಲಿ, ಮೊಬೈಲ್ ಚಂದಾದಾರರ ಸಂಖ್ಯೆ 687.71 ಮಿಲಿಯನ್ಗೆ ಏರಿಕೆಯಾಗಿದೆ. 1995 ರಲ್ಲಿ, ಸ್ವಾತಂತ್ರ್ಯ ದಿನದಂದು ಭಾರತದ ಜನರಿಗೆ ಇಂಟರ್ನೆಟ್ ಸಂಪರ್ಕ ಸೇವೆಯನ್ನು ವಿದೇಶ್ ಸಂಚಾರ್ ನಿಗಮ್ ಲಿಮಿಟೆಡ್ ಒದಗಿಸಿತು. ಕಂಪೆನಿಯು ದೇಶದಲ್ಲಿ ಗೇಟ್ವೇ ಇಂಟರ್ನೆಟ್ ಆಕ್ಸಿಸ್ ಸೇವೆಯ ಪ್ರಾರಂಭವನ್ನು ಪ್ರಾರಂಭಿಸಿತು. ಆರಂಭದಲ್ಲಿ ಈ ಸೇವೆಯನ್ನು ನಾಲ್ಕು ಮೆಟ್ರೊ ನಗರಗಳಲ್ಲಿ ಮಾತ್ರ ಒದಗಿಸಲಾಯಿತು. 

6 /6

ಲೀಸ್ಡ್ ಲೈನ್ಸ್ ಅಥವಾ ಡಯಲ್-ಅಪ್ ಸೌಲಭ್ಯಗಳೊಂದಿಗೆ ದೂರಸಂಪರ್ಕ ಇಲಾಖೆಯ ಇ-ನೆಟ್ 'ನಿಂದಾಗಿ ಜನರು ಅಂತರ್ಜಾಲವನ್ನು ಬಳಸುತ್ತಿದ್ದರು. ಆ ಸಮಯದಲ್ಲಿ 250 ಗಂಟೆಗಳ ಅಂತರ್ಜಾಲ ಬಳಕೆಗೆ 5 ಸಾವಿರ ರೂ.ಗಳನ್ನು ನೀಡಬೇಕಾಗಿತ್ತು. ಇನ್ನು, ಕಾರ್ಪೋರೇಟ್ ಕ್ಷೇತ್ರಗಳಲ್ಲಿ ಅಂತರ್ಜಾಲ ಬಳಕೆಗೆ 15,000 ರೂ. ಶುಲ್ಕ ತೆರಬೇಕಾಗಿತ್ತು. TRAI ಪ್ರಕಾರ, 2010ರ ವೇಳೆಗೆ 635 ದಶಲಕ್ಷ ಮೊಬೈಲ್ ಫೋನ್ಗಳು ಮತ್ತು ನಿಸ್ತಂತು ಸಂಖ್ಯೆ(Wireless Number) ಸೇವೆಗಳಿಗೆ ಚಂದಾದಾರರಿದ್ದರು. ಆದರೆ ಈಗ ಮೊಬೈಲ್ನ ಪ್ರವೃತ್ತಿ ಬದಲಾಗಿದೆ. ಈಗ ಮೊಬೈಲ್ ಅನ್ನು ನಿರಂತರವಾಗಿ ಬಳಸುವ ಗ್ರಾಹಕರು ಹೆಚ್ಚುತ್ತಿದ್ದಾರೆ. 2000ದ ನಂತರ ಮೊಬೈಲ್ ಫೋನ್ ಚಂದಾದಾರರ ಸಂಖ್ಯೆ ವೇಗವಾಗಿ ಹೆಚ್ಚಾಗಿದೆ. ಪ್ರಸ್ತುತ ದೇಶದಲ್ಲಿ 100 ದಶಲಕ್ಷಕ್ಕೂ ಹೆಚ್ಚು ಜನ ಮೊಬೈಲ್ ಸೇವೆಯನ್ನು ಬಳಸುತ್ತಿದ್ದಾರೆ.