Viral Photos: ಒಂದು ಕೈಯಲ್ಲಿ ವಧು, ಇನ್ನೊಂದು ಕೈಯಲ್ಲಿ ಕೊಡೆ.. ಸುರಿಯುವ ಮಳೆಯಲ್ಲಿ ಸಪ್ತಪದಿ ತುಳಿದ ವರ!

Viral Photos: ಯಾವಾಗ ಯಾರ ಮದುವೆಗೆ ಮಳೆ ಅಡ್ಡಿಯಾಗುತ್ತದೆಯೋ, ಆಗ ವಧುವರರ ಕುಟುಂಬಸ್ಥರು ತುಂಬಾ ನೊಂದುಕೊಳ್ಳುತ್ತಾರೆ. ಮಳೆಯಿಂದಾಗಿ ಅನೇಕ ಕೆಲಸಗಳು ವಿಳಂಬವಾಗುತ್ತವೆ ಮತ್ತು ಸಂಬಂಧಿಕರು ಸಿಲುಕಿಕೊಳ್ಳುತ್ತಾರೆ. ಕಾರ್ಯಕ್ರಮವೂ ತಡವಾಗಿ ಆರಂಭವಾಗುತ್ತದೆ.

Viral Photos: ವಧು-ವರರಲ್ಲಿ ಮದುವೆಯ ಸಂಭ್ರಮ ಅಷ್ಟಿಷ್ಟು ಇದ್ದರೆ ಯಾವ ತೊಂದರೆಗೂ ತಲೆಕೆಡಿಸಿಕೊಳ್ಳುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ದಂಪತಿಗಳು ಮಳೆಯಲ್ಲಿ ಒದ್ದೆಯಾಗುತ್ತಲೇ ಮದುವೆಗೆ ಸಿದ್ಧರಾದ ದೃಶ್ಯ ಎಲ್ಲೆಡೆ ವೈರಲ್‌ ಆಗ್ತಿದೆ. ಮದುವೆಗೆ ಸಂಬಂಧಿಸಿದ ಫೊಟೋಗಳಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಫೋಟೋದಲ್ಲಿ ಮದುವೆ ಮಂಟಪದ ಸುತ್ತಲೂ ನೀರಿದೆ.   

2 /5

ಜೋರು ಮಳೆಯಾಗುತ್ತಿದೆ. ಆದರೂ ವಧು-ವರರು ಮದುವೆಯಾಗಲು ಎಷ್ಟು ಉತ್ಸುಕರಾಗಿದ್ದಾರೆಂದರೆ, ಜೋರು ಮಳೆಯಲ್ಲೂ ಇಬ್ಬರೂ ನಿರಾತಂಕವಾಗಿ ಏಳು ಸುತ್ತು ಹಾಕುತ್ತಿರುವುದು ಕಂಡುಬಂದಿದೆ.  

3 /5

ಬಾಲಘಾಟ್ ಜಿಲ್ಲೆಯ ಕುಮ್ಹಾರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮದುವೆ ಮೆರವಣಿಗೆಯೊಂದಿಗೆ ಛೋಟಿ ಕುಮ್ಹಾರಿ ಗ್ರಾಮ ತಲುಪಿದ ಮದುಮಗ, ವಾತಾವರಣ ಬದಲಾಗುತ್ತಿದ್ದಂತೆ ತಡರಾತ್ರಿವರೆಗೂ ಮಳೆ ಸುರಿಯಿತು.  

4 /5

ಅದೇ ಸಮಯಕ್ಕೆ ರಾತ್ರಿ 12 ಗಂಟೆ ಸುಮಾರಿಗೆ ವಧು-ವರರ ಸಪ್ತಪದಿಯ ಶುಭ ಮುಹೂರ್ತ ಇತ್ತು. ಅದಕ್ಕಾಗಿಯೇ ವರನು ಒಂದು ಕೈಯಲ್ಲಿ ಕೊಡೆ ಹಿಡಿದು ಇನ್ನೊಂದು ಕೈಯಲ್ಲಿ ವಧುವಿನ ಕೈಯನ್ನು ಹಿಡಿದು ಮಂಟಪದಲ್ಲಿ ಏಳು ಸುತ್ತು ಹಾಕಿದನು.   

5 /5

ವಧು ಮುಂದೆ ನಡೆಯುತ್ತಿದ್ದರೆ, ವರನು ಹಿಂದೆ ನಡೆಯುತ್ತಿದ್ದಾನೆ. ಎಲ್ಲೆಂದರಲ್ಲಿ ನೀರು ಬೀಳುತ್ತಿದ್ದರೂ ಮದುವೆ ನಿಲ್ಲಲಿಲ್ಲ. ವಧು ಮತ್ತು ವರನ ಈ ಫೋಟೋಗಳು ಎಲ್ಲೆಡೆ ವೈರಲ್‌ ಆಗುತ್ತಿವೆ.