ಕಾನ್ಸ್ ಚಲನಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಪ್ರಿಯಾಂಕಾ ಚೋಪ್ರಾ ಎಂಟ್ರಿ ಆಗುತ್ತಿದ್ದಂತೆಯೇ ಎಲ್ಲರಿಗೂ ಕೈ ಮುಗಿದು ನಮಸ್ಕರಿಸಿದರು.
ನವದೆಹಲಿ: ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಈಗ ವಿಶ್ವಾದ್ಯಂತ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಮೆಟ್ ಗಾಲಾದಲ್ಲಿ ವಿಚಿತ್ರವಾಗಿ ಕಾಣಿಸಿಕೊಂಡಿದ್ದ ಪ್ರಿಯಾಂಕಾ ಚೋಪ್ರಾ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದು ಎಲ್ಲರಿಗೂ ಗೊತ್ತೆ ಇದೆ. ಆದರೀಗ ತಾವು ವಿದೇಶಿ ಸೊಸೆಯಾದರೂ ಸಹ ತಮ್ಮ ಹೃದಯ ಇಂದಿಗೂ ಹಿಂದೂಸ್ತಾನಿ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಫ್ರಾನ್ಸ್ನಲ್ಲಿ ನಡೆಯುತ್ತಿರುವ ಕಾನ್ಸ್ ಚಲನಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಪ್ರಿಯಾಂಕಾ ಚೋಪ್ರಾ ಎಂಟ್ರಿ ಆಗುತ್ತಿದ್ದಂತೆಯೇ ಎಲ್ಲರಿಗೂ ಕೈ ಮುಗಿದು ನಮಸ್ಕರಿಸಿದರು. ರೆಡ್ ಕಾರ್ಪೆಟ್ ನಲ್ಲಿ ಮೊದಲ ಬಾರಿ ಭಾಗವಹಿಸಿದ ಪ್ರಿಯಾಂಕಾ ಬೋಲ್ಡ್ ಬ್ಲಾಕ್ ಕಲರ್ ಡ್ರೆಸ್ ತೊಟ್ಟು ಎಲ್ಲರ ಗಮನ ಸೆಳೆದರು. ರೋಬೆಟರೇ ಕೇವಾಲಿ ವಿನ್ಯಾಸ ಮಾಡಿರುವ ಈ ಶೈನಿ ಬ್ಲಾಕ್ ಮತ್ತು ಮರೂನ್ ಬಣ್ಣದ ಹೈ ಸ್ಲಿಟ್ ಗೌನ್ ನಲ್ಲಿ ಸುಂದರವಾಗಿ ಕಾಣುತ್ತಿದ್ದ ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ, ಸಿಲ್ವರ್ ಬಣ್ಣದ ಕಿವಿಯೋಲೆಗಳನ್ನು ಧರಿಸಿದ್ದ ಪ್ರಿಯಾಂಕಾ ಓಪನ್ ಹೇರ್ ನಲ್ಲಿ ಗ್ಲಾಮರಸ್ ಆಗಿ ಕಾಣುತ್ತಿದ್ದರು. ಆ ಸಂದರ್ಭದ ಒಂದು ಝಲಕ್ ನೀವೂ ನೋಡಿ...
(ಫೋಟೋ ಕೃಪೆ: IANS)
(ಫೋಟೋ ಕೃಪೆ: IANS)
(ಫೋಟೋ ಕೃಪೆ: IANS)
(ಫೋಟೋ ಕೃಪೆ: IANS)
(ಫೋಟೋ ಕೃಪೆ: IANS)
(ಫೋಟೋ ಕೃಪೆ: IANS)
(ಫೋಟೋ ಕೃಪೆ: IANS)
(ಫೋಟೋ ಕೃಪೆ: PTI)