PM Kisan: Good News - ವಾರ್ಷಿಕವಾಗಿ 6000 ರೂ. ಬದಲಾಗಿ 36,000 ಲಾಭ ಪಡೆಯಬಹುದು, ಇಲ್ಲಿದೆ ವಿಧಾನ

PM KISAN: ಒಂದು ವೇಳೆ ನೀವು ಕೂಡ ಈ ಯೋಜನೆಯ ಅಡಿ ಸರ್ಕಾರ ನೀಡುತ್ತಿರುವ ರೂ.2000 ಲಾಭ ಪಡೆಯುತ್ತಿದ್ದರೆ, ನಿಮಗೆ ವಾರ್ಷಿಕವಾಗಿ 6000 ರೂ. ಸಿಗುತ್ತವೆ. ಇದರ ಬದಲಾಗಿ ನಿಮಗೆ ರೂ.36000 ಲಭಿಸಲಿದೆ. ಹೇಗೆ ಅಂತಿರಾ? ಬನ್ನಿ ತಿಳಿದುಕೊಳ್ಳೋಣ.

ನವದೆಹಲಿ: PM Kisan Samman Nidhi ಯೋಜನೆಯ ಲಾಭ ಪಡೆಯುವ ಲಾಭಾರ್ಥಿಗಳಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಒಂದು ವೇಳೆ ನೀವೂ ಕೂಡ ಸರ್ಕಾರದ ವತಿಯಿಂದ ನೀಡಲಾಗುವ ರೂ.2000 ಲಾಭ ಪಡೆಯುತ್ತಿದ್ದರೆ, ನೀವು ವಾರ್ಷಿಕವಾಗಿ ರೂ.6000ರ ಬದಲಾಗಿ 36,000 ರೂಗಳ ಲಾಭ ಪಡೆಯಬಹುದು. ಕೇಂದ್ರ ಸರ್ಕಾರ ಶೀಘ್ರದಲ್ಲಿಯೇ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಎಂಟನೆ ಕಂತನ್ನು ಬಿಡುಗಡೆ ಮಾಡಲಿದೆ. ದೇಶದ ಸುಮಾರು 11 ಕೋಟಿಗೂ ಅಧಿಕ ರೈತರಿಗೆ ಈ ಯೋಜನೆಯ ಲಾಭ ತಲುಪುತ್ತಿದೆ. ಹಾಗಾದರೆ ಬನ್ನಿ ಹೇಗೆ ನೀವು ರೂ.36,000 ಲಾಭ ಪಡೆಯಬಹುದು ತಿಳಿದುಕೊಳ್ಳೋಣ.

 

ಇದನ್ನೂ ಓದಿ -  PM Kisan : ರೈತರ ಖಾತೆಗೆ  ₹ 2000 ಜಮಾ! ನಿಮಗೂ ಬರುತ್ತಾ ಇಲ್ಲವೋ ಇಲ್ಲಿ ಪರಿಶೀಲಿಸಿ

 

ಪಿಎಂ ಕಿಸಾನ್ ಸಮ್ಮಾನ್ ನಿಧಿಯ (PM Kisan Samman Nidhi) ಲಾಭಾರ್ಥಿಗಳಿಗೆ ಸರ್ಕಾರ ಕಿಸಾನ್ ಮಾನ್ ಧನ್ ಯೋಜನೆಯ ಸೌಕರ್ಯ ಕೂಡ ಒದಗಿಸುತ್ತದೆ. ಈ ಸೌಕರ್ಯ ಪಡೆಯಲು ನೀವು ನೀಮ್ಮ ಜೇಬಿನಿಂದ ನೈಯಾ ಪೈಸೆ ಕೂಡ ಖರ್ಚು ಮಾಡುವ ಅವಶ್ಯಕತೆ ಇಲ್ಲ ಹಾಗೂ ಯಾವುದೇ ದಾಖಲೆಗಳನ್ನು ಕೂಡ ಒದಗಿಸಬೇಕಾಗಿಲ್ಲ. ಈ ಯೋಜನೆಯ ಅಡಿ ನಿಮಗೆ ಮಾಸಿಕವಾಗಿ ರೂ.3000 ನೀಡಲಾಗುತ್ತದೆ.

 

ಇದನ್ನೂ ಓದಿ-7th pay Commission: ಕೇಂದ್ರ ನೌಕರರ DA ಶೇ. 28 ರವರೆಗೆ ಏರಿಕೆ, ಜುಲೈ 1 ರಿಂದ ಹೆಚ್ಚಳವಾಗಲಿದೆ ನೌಕರರ ಸಂಬಳ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

1. ಕೆಸಿಸಿ ಲಾಭ ಕೂಡ ಸಿಗುತ್ತದೆ - ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭ ಪಡೆಯುತ್ತಿರುವ ಇಲ್ಲ ರೈತರಿಗೆ ಮೋದಿ ಸರ್ಕಾರದ ಕಿಸಾನ್ ಮಾನ್ ಧನ್ ಯೋಜನೆಯ ಲಾಭ ಕೂಡ ಸಿಗುತ್ತದೆ. ಪಿಎಂ ಕಿಸಾನ್ ಲಾಭಾರ್ಥಿಗಳಿಗೆ ಕೇಂದ್ರ ಸರ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ್ ಹಾಗೂ ಪಿಎಂ ಕಿಸಾನ್ ಮಾನ್ ಧನ್ ಯೋಜನೆಯ ಲಾಭ ಕೂಡ ನೀಡುತ್ತದೆ.

2 /4

2. ಹೆಚ್ಚುವರಿ ದಾಖಲೆ ಸಲ್ಲಿಸಬೇಕಾದ ಅವಶ್ಯಕತೆ ಇಲ್ಲ- ಕೇಂದ್ರ ಸರ್ಕಾರದ ವತಿಯಿಂದ ಸಣ್ಣ ಹಿಡುವಳಿದಾರರು ಹಾಗೂ ಗಡಿಭಾಗದ ರೈತರಿಗೆ ಪೆನ್ಷನ್ ಯೋಜನೆ ನಡೆಸಲಾಗುತ್ತದೆ. ಇದರಲ್ಲಿ 60 ವರ್ಷ ವಯಸ್ಸಿನ ಬಳಿಕ ನಿಮಗೆ ತಿಂಗಳಿಗೆ ರೂ.3000 ನೀಡಲಾಗುತ್ತದೆ. ಒಂದು ವೇಳೆ ನೀವೂ ಕೂಡ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಲಾಭ ಪಡೆಯುತ್ತಿದ್ದರೆ, ಈ ಯೋಜನೆಯ ಲಾಭ ಪಡೆಯಲು ನಿಮಗೆ ಹೆಚ್ಚುವರಿ ದಾಖಲೆಗಳು ನೀಡಬೇಕಾದ ಅವಶ್ಯಕತೆ ಇಲ್ಲ.  

3 /4

3. ವಾರ್ಷಿಕವಾಗಿ ರೂ.36,000 ಪಡೆಯುವುದು ಹೇಗೆ? - ಒಂದು ವೇಳೆ ನೀವು ಕೂಡ ಪಿಎಂ ಕಿಸಾನ್ ಮಾನ್ ಧನ್ ಯೋಜನೆಯ ಲಾಭ ಪಡೆಯಲು ಬಯಸುತ್ತಿದ್ದರೆ, ನಿಮಗೆ ಪಿಎಂ ಕಿಸಾನ್ ಯೋಜನೆಯಿಂದ ಬಂದ ಲಾಭವನ್ನು ನೇರವಾಗಿ ಪಿಎಂ ಕಿಸಾನ್ ಮಾನ್ ಧನ್ ಗೆ ಕೊಡುಗೆಯಾಗಿ ನೀಡುವ ಆಯ್ಕೆಯನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ಇದೆ. ಅಂದರೆ ಪಿಎಂ ಕಿಸಾನ್ ನಿಂದ ಬಂದ ರೂ.6000 ರೂಗಳಲ್ಲಿ ಪಿಎಂ ಕಿಸಾನ್ ಮಾನ್ ಧನ್ ಯೋಜನೆಯ ನಿಮ್ಮ ಕೊಡುಗೆ ಕಡಿತವಾಗಲಿದೆ ಹಾಗೂ ಇದಕ್ಕಾಗಿ ನೀವು ಯಾವುದೇ ರೀತಿಯ ಹೆಚ್ಚುವರಿ ಕೊಡುಗೆ ನೀಡಬೇಕಾದ ಅವಶ್ಯಕತೆ ಇಲ್ಲ. ಇದಲ್ಲದೆ ಪ್ರಿಮಿಯಂ ಕಡಿತದ ಬಳಿಕ ಉಳಿಯುವ ಹೆಚ್ಚುವರಿ ಮೊತ್ತ ನಿಮ್ಮ ಖಾತೆಗೆ ವರ್ಗಾವಣೆಯಾಗಲಿದೆ. ಇದರಿಂದ ರೈತರಿಗೆ ವಾರ್ಷಿಕವಾಗಿ ರೂ.36 000 ರೂ ಕೂಡ ಸಿಗಲಿದೆ ಮತ್ತು ಮುಂದಿನ ಮೂರು ಕಂತುಗಳು ಕೂಡ ಸಿಗಲಿವೆ. ಒಂದು ವೇಳೆ ನೀವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭಾರ್ಥಿಗಳಿಲ್ಲದಿದ್ದರೂ ಕೂಡ ಪಿಎಂ ಕಿಸಾನ್ ಮಾನ್ ಧನ್ ಯೋಜನೆಯ ಲಾಭ ಪಡೆದುಕೊಳ್ಳಬಹುದು. 

4 /4

4. ಯಾರು ಈ ಯೋಜನೆಯ ಲಾಭ ಪಡೆಯಬಹುದು - >>ಕಿಸಾನ್ ಮಾನ್ ಧನ್ ಯೋಜನೆಯ ಲಾಭ 18 ರಿಂದ 40 ವರ್ಷ ಒಳಗಿನ ಯಾವುದೇ ರೈತ ಇದರ ಲಾಭ ಪಡೆಯಬಹುದು. >>ಇದಕ್ಕಾಗಿ ನಿಮ್ಮ ಬಳಿ ಗರಿಷ್ಟ ಅಂದರೆ 2 ಹೆಕ್ಟೇರ್ ಹಿಡುವಳಿ ಭೂಮಿ ಇರಬೇಕು. >>ಇದಕ್ಕಾಗಿ ನೀವು 20 ವರ್ಷಗಳವರೆಗೆ ಹಾಗೂ ಗರಿಷ್ಟ 40 ವರ್ಷಗಳವರೆಗೆ ರೂ.55 ರಿಂದ ರೂ.200 ರೂ. ಮಾಸಿಕ ಕೊಡುಗೆ ಪಾವತಿಸಬೇಕು. ಈ ಮೊತ್ತ ರೈತನ ವಯಸ್ಸನ್ನು ಆಧರಿಸಿದೆ. >>ಒಂದು ವೇಳೆ 30ನೆ ವಯಸ್ಸಿನಲ್ಲಿ ನೀವು ಈ ಯೋಜನೆಗೆ ಸೇರಿಕೊಂಡರೆ ನೀವು ಮಾಸಿಕ ರೂ.110 ಕೊಡುಗೆ ನೀಡಬೇಕು. >>ಒಂದು ವೇಳೆ 40ನೆ ವಯಸ್ಸಯಾನಲ್ಲಿ ನೀವು ಈ ಯೋಜನೆಗೆ ಸೇರಿದರೆ, ತಿಂಗಳಿಗೆ ನೀವು 200 ರೂ.ಕೊಡುಗೆ ಪಾವತಿಸಬೇಕು.