ಯಾವ ಪಥ್ಯವೂ ಬೇಡ.. ಈ ಹಣ್ಣಿನ ಜ್ಯೂಸ್‌ ಕುಡಿದ್ರೆ ಸಾಕು ಸಂಪೂರ್ಣ ನಿಯಂತ್ರಣದಲ್ಲಿರುತ್ತೆ ಬ್ಲಡ್ ಶುಗರ್! ಮತ್ತೆ ಯಾವತ್ತೂ ಹೆಚ್ಚಾಗಲ್ಲ..

pomegranate Juice for Blood Sugar Control: ಇತ್ತೀಚಿನ ದಿನಗಳಲ್ಲಿ ಮಧುಮೇಹ ಸಾಮಾನ್ಯವಾಗಿದೆ. ಅನಿಯಮಿತ ಆಹಾರ ಪದ್ಧತಿ ಮತ್ತು ಜಡ ಜೀವನಶೈಲಿಯಿಂದ ಈ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ವಯಸ್ಸಿನ ಭೇದವಿಲ್ಲದೆ ಎಲ್ಲರಿಗೂ ಬಾದಿಸುತ್ತಿದೆ.. 

1 /6

ನಮ್ಮ ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾದರೆ ಮಧುಮೇಹ ಅಥವಾ ಶುಗರ್ ಕಾಯಿಲೆ ಬರುತ್ತದೆ. ಈ ರೋಗಕ್ಕೆ ನಿಖರವಾದ ಔಷಧಿಯಿಲ್ಲ.. ಇದನ್ನು ನಿಯಂತ್ರಿಸಬಹುದು ಆದರೇ ಸಂಪೂರ್ಣವಾಗಿ ವಾಸಿಮಾಡಲಾಗುವುದಿಲ್ಲ.. ಹಾಗಾದ್ರೆ ಈ ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸುವುದು ಹೇಗೆ?   

2 /6

ದಾಳಿಂಬೆ ರಸವು ಕೇವಲ 3 ಗಂಟೆಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ದಾಳಿಂಬೆ ಜ್ಯೂಸ್ ನಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಾಗಿದೆ.. ಇದು ಗ್ರೀನ್‌ ಟೀಗಿಂತ ಮೂರು ಪಟ್ಟು ಹೆಚ್ಚು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಈ ಉತ್ಕರ್ಷಣ ನಿರೋಧಕಗಳು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ..  

3 /6

ದಾಳಿಂಬೆ ರಸವು ಮಧುಮೇಹ ರೋಗಿಗಳಲ್ಲಿ ಇನ್ಸುಲಿನ್ ಪ್ರತಿರೋಧದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ. ಸ್ನಾಯುಗಳು ಮತ್ತು ಯಕೃತ್ತಿನ ಜೀವಕೋಶಗಳು ಇನ್ಸುಲಿನ್‌ಗೆ ಪ್ರತಿಕ್ರಿಯಿಸದಿದ್ದಾಗ ಮತ್ತು ರಕ್ತದಿಂದ ಗ್ಲೂಕೋಸ್ ಅನ್ನು ಸುಲಭವಾಗಿ ತೆಗೆದುಕೊಳ್ಳಲು ಸಾಧ್ಯವಾಗದಿದ್ದಾಗ ಇನ್ಸುಲಿನ್ ಪ್ರತಿರೋಧವು ಸಂಭವಿಸುತ್ತದೆ. ಆ ವೇಳೆ ರಕ್ತದಲ್ಲಿನ ಗ್ಲೂಕೋಸ್‌ನ ಹೆಚ್ಚಿನ ಮಟ್ಟವು ಮಾರಕವಾಗಬಹುದು.    

4 /6

ದಿನಕ್ಕೆ ಒಂದು ಲೋಟ ದಾಳಿಂಬೆ ಜ್ಯೂಸ್ ಕುಡಿಯುವುದು ಒಳ್ಳೆಯದು. ಪ್ರಸ್ತುತ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ದಾಳಿಂಬೆ ಜ್ಯೂಸ್‌ಗಳು ಲಭ್ಯವಿವೆ. ಮಾರುಕಟ್ಟೆಯಲ್ಲಿ ಈ ಜ್ಯೂಸ್ ಖರೀದಿಸುವ ಮುನ್ನ ಕಲಬೆರಕೆ ಇಲ್ಲದ ಜ್ಯೂಸ್ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಆದರೆ ಈ ಜ್ಯೂಸ್ ಕುಡಿಯುವ ಮೊದಲು, ವೈದ್ಯರನ್ನು ಸಂಪರ್ಕಿಸಲು ಮರೆಯದಿರಿ.  

5 /6

ಅಧ್ಯಯನದ ಪ್ರಕಾರ, ದಾಳಿಂಬೆ ರಸವನ್ನು ಸೇವಿಸುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. ಈ ಅಧ್ಯಯನದಲ್ಲಿ, 12 ಗಂಟೆಗಳ ಕಾಲ ಉಪವಾಸ ಮಾಡಿದ 85 ಮಧುಮೇಹ ರೋಗಿಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದೆ.   

6 /6

1.5 ಮಿಲಿ ದಾಳಿಂಬೆ ರಸವನ್ನು ಸೇವಿಸಿದ ಮೂರು ಗಂಟೆಗಳ ನಂತರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಯಿತು. ಮೂರು ಗಂಟೆಗಳ ನಂತರ ತೆಗೆದುಕೊಂಡ ಮಾದರಿಗಳಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ಕಡಿಮೆಯಾಗಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.