Pre Wedding Photoshoot in the mud : ಕೃಷಿಯನ್ನೇ ತಮ್ಮ ಮೂಲ ವೃತ್ತಿಯಾಗಿಸಿಕೊಂಡಿರುವ ಈ ಜೋಡಿ, ಹೊಸ ಜೀವನ ಆರಂಭಿಸಲು ಕೆಸರಿನಲ್ಲಿ ಈ ರೀತಿಯ ಫೋಟೋಶೂಟ್ ಮಾಡಲು ನಿರ್ಧರಿಸಿದ್ದಾರೆ. ಕೃಷಿಯನ್ನು ಉತ್ತೇಜಿಸಲು ಈ ನಿರ್ಧಾರವನ್ನು ತೆಗೆದುಕೊಂಡರು. ಇಬ್ಬರೂ ರೈತ ಕುಟುಂಬದಿಂದ ಬಂದವರು.
Pre Wedding Photoshoot in the mud : ಪ್ರಿ ವೆಡ್ಡಿಂಗ್ ಫೋಟೋಶೂಟ್ನ ಕೆಲವು ಚಿತ್ರಗಳು ಇಂಟರ್ನೆಟ್ ಜಗತ್ತಿನಲ್ಲಿ ತೀವ್ರವಾಗಿ ವೈರಲ್ ಆಗುತ್ತಿವೆ. ಇಬ್ಬರೂ ವಿಭಿನ್ನ ಭಂಗಿಗಳ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಫೋಟೋಶೂಟ್ ನಿಂದ ಫೇಮಸ್ ಆದ ಈ ಜೋಡಿ ಫಿಲಿಪ್ಪೀನ್ಸ್ ನ ಓರ್ಮಾಕ್ ಸಿಟಿ ನಿವಾಸಿಗಳು. ವಾಸ್ತವವಾಗಿ ಜಾನ್ಸಿ ಗುಟೈರೆಜ್ ಮತ್ತು ಇಮೆ ಬೊರಿನಾಗಾ ಕೃಷಿಯನ್ನು ಉತ್ತೇಜಿಸಲು ಈ ನಿರ್ಧಾರವನ್ನು ತೆಗೆದುಕೊಂಡರು. ಇಬ್ಬರೂ ರೈತ ಕುಟುಂಬದಿಂದ ಬಂದವರು. ಬೇಸಾಯ ಅವರ ಹವ್ಯಾಸ. ಅದಕ್ಕಾಗಿಯೇ ಇಬ್ಬರೂ ತಮ್ಮ ಹೊಸ ಜೀವನವನ್ನು ಪ್ರಾರಂಭಿಸಲು ಈ ಥೀಮ್ ಅನ್ನು ಆರಿಸಿಕೊಂಡರು. ಈ ಮೂಲಕ ಇಬ್ಬರೂ ಪ್ರಕೃತಿಯೊಂದಿಗೆ ತಮ್ಮ ಸಂಪರ್ಕವನ್ನು ತೋರಿಸಲು ಪ್ರಯತ್ನಿಸಿದ್ದಾರೆ ಎಂದು ಈ ದಂಪತಿಗಳು ಹೇಳುತ್ತಾರೆ.
24 ವರ್ಷದ ಜಾನ್ಸಿ ಮತ್ತು 21 ವರ್ಷದ ಇಮೆ ಅವರ ಚಿತ್ರಗಳು ಇತರ ಜೋಡಿಗಳ ಮದುವೆಯ ಪೂರ್ವ ಫೋಟೋಶೂಟ್ಗಳಿಗಿಂತ ವಿಭಿನ್ನ ಮತ್ತು ವಿಶೇಷವಾಗಿವೆ. ಏಕೆಂದರೆ ಈ ಥೀಮ್ ಮೂಲಕ ಅವರು ಪ್ರಕೃತಿಯ ಮೇಲಿನ ಪ್ರೀತಿ ಮತ್ತು ಉತ್ಸಾಹವನ್ನು ತೋರಿಸಲು ಪ್ರಯತ್ನಿಸಿದರು.
ಈ ಪ್ರೀ ವೆಡ್ಡಿಂಗ್ ಫೋಟೋಶೂಟ್ ಅನ್ನು ಇಮೆ ಕುಟುಂಬದ ಭತ್ತದ ಗದ್ದೆಯಲ್ಲಿ ಮಾಡಲಾಗಿದೆ.
ಪ್ರಿ ವೆಡ್ಡಿಂಗ್ ಶೂಟ್ ಬಗ್ಗೆ ಕೇಳಿದಾಗ, ದಂಪತಿಗಳು ತಾವು ರೈತರ ಕುಟುಂಬದಲ್ಲಿ ಬೆಳೆದಿದ್ದೇವೆ, ಅದಕ್ಕಾಗಿಯೇ ಕುಟುಂಬದ ವೃತ್ತಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಿ ವೆಡ್ಡಿಂಗ್ ಶೂಟ್ಗೆ ಥೀಮ್ ಅನ್ನು ಅಂತಿಮಗೊಳಿಸಿದ್ದೇವೆ ಎಂದು ಹೇಳಿದರು.
ಫಿಲಿಪೈನ್ಸ್ನ ಸರ್ಕಾರಿ ಶಾಲೆಯ ಶಿಕ್ಷಕಿ ಇಮೆ, ನಾನು ಕೃಷಿಯನ್ನು ಉದ್ಯೋಗ ಅಥವಾ ವೃತ್ತಿಯಾಗಿ ತೋರಿಸಲು ಪ್ರಯತ್ನಿಸುತ್ತಿದ್ದೇನೆ, ಅದಕ್ಕೆ ಅರ್ಹವಾದ ಕ್ರೆಡಿಟ್ ನೀಡಬೇಕು. ರೈತರಿಗೆ ಕೃತಜ್ಞತೆ ಸಲ್ಲಿಸಬೇಕು ಎಂದಿದ್ದಾರೆ.
ಕೆಸರಿನಲ್ಲಿ ನಡೆಯುವುದು ಮತ್ತು ಅಲ್ಲಿ ಕೆಲಸ ಮಾಡುವುದು ಎಷ್ಟು ಕಷ್ಟ ಎಂದು ಇಡೀ ಜಗತ್ತು ನೋಡಬೇಕು ಮತ್ತು ಅನುಭವಿಸಬೇಕು ಎಂದು ಇಮೆ ತನ್ನ ಸಂದರ್ಶನದಲ್ಲಿ ಹೇಳಿದ್ದಾರೆ.
ಬೇಸಿಗೆಯ ಸುಡು ಬಿಸಿಲಲ್ಲಿ ಬೇಸಾಯ ಮಾಡುವುದು ಎಷ್ಟು ಕಷ್ಟ ಎಂಬುದನ್ನೂ ಜನರಿಗೆ ವಿವರಿಸಲು ಬಯಸಿರುವುದಾಗಿ ಈ ದಂಪತಿ ತಿಳಿಸಿದ್ದಾರೆ.
ಇಷ್ಟೆಲ್ಲ ಇದ್ದರೂ ನಮ್ಮ ರೈತರು ಯಾವುದೇ ದೂರುಗಳಿಲ್ಲದೆ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಇದೇ ನಮ್ಮ ಫೋಟೋಶೂಟ್ಗೆ ಸ್ಪೂರ್ತಿಯಾಯಿತು ಎಂದಿದ್ದಾರೆ.
ಈ ಜೋಡಿಯ ಚಿತ್ರಗಳನ್ನು ಜನರು ಇಷ್ಟಪಡುತ್ತಿದ್ದಾರೆ ಏಕೆಂದರೆ ಈ ಮೂಲಕ ಅವರು ಪ್ರಕೃತಿಯ ಮೇಲಿನ ಪ್ರೀತಿಯನ್ನು ತೋರಿಸಲು ಪ್ರಯತ್ನಿಸಿದ್ದಾರೆ.