Bikes To Launch In India: ಒಂದೆಡೆ ರಾಯಲ್ ಎನ್ಫೀಲ್ಡ್ ಎರಡು ಹೊಚ್ಚ ಹೊಸ ಬೈಕ್ ಗಳನ್ನು ಬಿಡುಗಡೆ ಮಾಡುತ್ತಿದ್ದರೆ, ಹೊಂಡಾ ಕೂಡ ತನ್ನ ಹೊಸದೊಂದು ಬೈಕ್ ಬಿಡುಗಡೆ ಮಾಡುತ್ತಿದೆ . ಇಲ್ಲಿ ನಾವು ನಿಮಗೆ ಒಟ್ಟು ಐದು ಬೈಕ್ ಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಈ ಬೈಕ್ ಗಳು ಇದೇ ತಿಂಗಳಿನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.
Upcoming Bikes in india: ಮೋಟಾರ್ ಸೈಕಲ್ ಪ್ರಿಯರಿಗೆ ಆಗಸ್ಟ್ ತಿಂಗಳು ತುಂಬಾ ವಿಶೇಷವಾಗಿರಲಿದೆ. ರಾಯಲ್ ಎನ್‌ಫೀಲ್ಡ್‌ನಿಂದ ಹೋಂಡಾವರೆಗೆ, ನಾವು ಈ ತಿಂಗಳು ಬಿಡುಗಡೆಯಾಗುವ ಹೊಸ ಬೈಕ್‌ಗಳ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ರಾಯಲ್ ಎನ್‌ಫೀಲ್ಡ್ ಏಕಕಾಲದಲ್ಲಿ ಎರಡು ಬೈಕ್‌ಗಳನ್ನು ಬಿಡುಗಡೆ ಮಾಡುತ್ತಿದ್ದರೆ, ಹೋಂಡಾ ಕೂಡ ಹೊಸ ಮಾದರಿಯ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಈ ತಿಂಗಳು ಬಿಡುಗಡೆಗಾಗಿ ನೀವು ನಿರೀಕ್ಷಿಸಬಹುದಾದ 5 ಬೈಕ್ ಗಳ ಮಾಹಿತಿ ಇಲ್ಲಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ರಾಯಲ್ ಎನ್ಫೀಲ್ಡ್ ಹಂಟರ್ 350 - ಇದು ಕಂಪನಿಯ ಅತ್ಯಂತ ಅಗ್ಗದ ದರದ ಬೈಕ್ ಆಗುವ ಸಾಧ್ಯತೆ ಇದೆ. ಆಗಸ್ಟ್ 7 ರಂದು e ಬೈಕ್ ಮಾರುಕಟ್ಟೆಯ ಇಲಿಯುವ ನಿರೀಕ್ಷೆ ಇದೆ. ಇದರ ವಿಶೇಷತೆ ಎಂದರೆ, ಇದುವರೆಗೆ ಕಂಪನಿ ಬಿಡುಗಡೆ ಮಾಡಿರುವ ಅತ್ಯಂತ ಹಗುರ ಬೈಕ್ ಇದಾಗಿರಲಿದೆ. ಇದರ ತೂಕ ಕೇವಲ 180 ಕೆ.ಜಿ ಇದೆ ಎನ್ನಲಾಗಿದೆ. ಬೈಕ್ ನಲ್ಲಿ ಜೆ ಸಿರೀಸ್ ಇಂಜಿನ್ ನೀಡಲಾಗುವ ನಿರೀಕ್ಷೆ ಇದ್ದು, ಮೆಟಿಯೋರ್ ಮತ್ತು ಕ್ಲಾಸಿಕ್ 350 ರಲ್ಲಿಯೂ ಕೂಡ ನೀವು ಈ ಇಂಜಿನ್ ಅನ್ನು ಗಮನಿಸಬಹುದು. ಈ ಇಂಜಿನ್ 20.2 ಹೆಚ್ ಪಿ ಪವರ್ ಹಾಗೂ 27 nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಬೈಕ್ ನ ಸಂಭವನೀಯ ಬೆಲೆ ರೋ.1.5 ಲಕ್ಷ ರೂ.ಗಳಿಂದ ರೂ.1.6 ಲಕ್ಷ ಇರುವ ಸಾಧ್ಯತೆ ಇದೆ.
2. 2022 ವರ್ಷದ ರಾಯಲ್ ಎನ್ಫೀಲ್ಡ್ ಬುಲೆಟ್ 350 - ಕಂಪನಿಯು ತನ್ನ ಬುಲೆಟ್ 350 ಅನ್ನು ಈ ತಿಂಗಳು ಹೊಸ ಅವತಾರದಲ್ಲಿ ಬಿಡುಗಡೆ ಮಾಡಲಿದೆ ಎಂಬ ವರದಿಗಳಿವೆ. ಬುಲೆಟ್ 350 ಪ್ರಸ್ತುತ ಕಂಪನಿಯ ಪ್ರವೇಶ ಮಟ್ಟದ ಬೈಕ್ ಆಗಿದೆ. ಟ್ರಿಪ್ಪರ್ ನ್ಯಾವಿಗೇಶನ್‌ನಂತಹ ವೈಶಿಷ್ಟ್ಯಗಳನ್ನು ಜೆ-ಪ್ಲಾಟ್‌ಫಾರ್ಮ್ ಎಂಜಿನ್‌ನೊಂದಿಗೆ ನೆಕ್ಸ್ಟ್ ಜೇನ್ ಬುಲೆಟ್ 350 ನಲ್ಲಿ ನೀವು ಕಾಣಬಹುದು. ಇದರ ಬೆಲೆ ಸುಮಾರು 1.7 ಲಕ್ಷ ರೂಪಾಯಿ ಇರುವ ಸಾಧ್ಯತೆ ಇದೆ.
3. ಅಪ್ಡೇಟೆಡ್ ಹೀರೋ ಎಕ್ಸ್ ಪಲ್ಸ್ 200 ಟಿ - Hero ಕೂಡ ತನ್ನ Xpulse 200T ಅನ್ನು ನವೀಕರಿಸಬಹುದು. 4V ಎಂಜಿನ್‌ಗೆ ಬೆಂಬಲದೊಂದಿಗೆ ಈ ಹೊಸ ಮಾದರಿ ಬಿಡುಗಡೆಯಾಗುವ ನಿರೀಕ್ಷೆ ಇದೆ. 200T ಕಂಪನಿಯ ಆಫ್ ರೋಡರ್ ಆಗಿದ್ದು, ಇದು 17-ಇಂಚಿನ ಮಿಶ್ರಲೋಹದ ಚಕ್ರಗಳನ್ನು ಹೊಂದಿದೆ. ಫೋರ್ಕ್ ಗೈಟರ್‌ಗಳು, ಮರುಸ್ಥಾಪಿತ ಹೆಡ್‌ಲ್ಯಾಂಪ್ ಮತ್ತು ಹೊಸ ಬಣ್ಣದ ಸ್ಕೀಮ್‌ನಂತಹ ಬದಲಾವಣೆಗಳನ್ನು ನವೀಕರಿಸಿದ ಆವೃತ್ತಿಯಲ್ಲಿ ಇರುವ ಸಾಧ್ಯತೆ ಇದೆ. ಹೊಸ ಮಾದರಿಯ ಬೆಲೆ 1.24 ಲಕ್ಷ ರೂ.ಇರಬಹುದು.
4. ಹೊಸ ಹೊಂಡಾ ಬಿಗ್ ವಿಂಗ್ ಮಾಡೆಲ್ - ಹೋಂಡಾ ತನ್ನ ಬಿಗ್ವಿಂಗ್ ಶ್ರೇಣಿಯಲ್ಲಿ ಹೊಸ ಮಾದರಿಯನ್ನು ಪರಿಚಯಿಸುವ ಸಾಧತೆ ಇದೆ. ಇದರ ಬಿಡುಗಡೆ ಆಗಸ್ಟ್ 8 ರಂದು ನಡೆಯಲಿದೆ. ಸದ್ಯಕ್ಕೆ ಬೈಕ್‌ನ ಹೆಸರು ಅಥವಾ ವೈಶಿಷ್ಟ್ಯಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದು ಹೋಂಡಾ CB500X ನ ನವೀಕರಿಸಿದ ಅವತಾರ ಇರುವ ನಿರೀಕ್ಷೆ ಇದೆ.
5. ಹಾರ್ಲೆ ಡೇವಿಡ್ ಸನ್ ನೈಟ್ ಸ್ಟರ್ - ಹಾರ್ಲೆ-ಡೇವಿಡ್ಸನ್ ಕಳೆದ ವರ್ಷ ಸ್ಪೋರ್ಟ್‌ಸ್ಟರ್ ಎಸ್ ಬೈಕ್ ಅನ್ನು ಪರಿಚಯಿಸಿತ್ತು. ಈ ವರ್ಷ ಕಂಪನಿಯು ನೈಟ್‌ಸ್ಟರ್ ಮಾದರಿಯನ್ನು ಪರಿಚಯಿಸುವ ಸಾಧ್ಯತೆ ಇದೆ. ಈ ಬೈಕ್‌ನಲ್ಲಿ 89HP ಮತ್ತು 96Nm ಟಾರ್ಕ್‌ನೊಂದಿಗೆ 975 cc ಎಂಜಿನ್ ಅನ್ನು ಕಂಪನಿ ನೀಡಬಹುದು.