Anchor Anushree Marriage: ಆಂಕರ್ ಅನುಶ್ರೀ ಮದುವೆ ಆಗಲು ರೆಡಿಯಾಗಿದ್ದಾಗಿ ತಿಳಿಸಿದ್ದಾರೆ. ಈ ಬೆನ್ನಲ್ಲೇ ಅನುಶ್ರೀ ನಿಜವಾದ ವಯಸ್ಸು ಎಷ್ಟು, ಯಾವ ವಯಸ್ಸಿನಲ್ಲಿ ಮದುವೆಯಾಗುತ್ತಿದ್ದಾರೆ ಎಂಬ ಕುತೂಹಲ ಜನರಲ್ಲಿ ಹೆಚ್ಚಾಗಿದೆ. ಇದಕ್ಕೆ ಉತ್ತರ ಇಲ್ಲಿದೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕನ್ನಡ ಕಿರುತೆರೆಯ ನಂಬರ್ ಒನ್ ನಿರೂಪಕಿ ಅನುಶ್ರೀ. ಇವರ ಮದುವೆ ಮಾರ್ಚ್ನಲ್ಲಿ ನಡೆಯಲಿದೆ ಎಂದು ಹೇಳಿದ ವಿಡಿಯೋವೊಂದು ವೈರಲ್ ಆಗಿತ್ತು. ಫೇಮಸ್ ನಿರೂಪಕಿ, ಸ್ಯಾಂಡಲ್ವುಡ್ ನಟಿ ಅನುಶ್ರೀ ಮದುವೆ ವಿಚಾರ ಸದಾ ಸುದ್ದಿಯಲ್ಲಿರುತ್ತದೆ.
ನಟಿ ಅನುಶ್ರೀ ಪಟ ಪಟ ಅರಳು ಹುರಿದಂತೆ ಮಾತನಾಡಿ ಜನರ ಮನಗೆದ್ದವರು. ಇವರ ಮಾತೇ ಆಸ್ತಿ. ಅನುಶ್ರೀ ಮದುವೆಯಾಗಲು ಒಪ್ಪಿಕೊಂಡಿದ್ದಾರೆ ಎಂಬ ವಿಚಾರ ಎಲ್ಲೆಡೆ ಹರಿದಾಡುತ್ತಿದೆ. ಅನುಶ್ರೀ ಇತ್ತೀಚೆಗೆ ಚಾಟ್ ಶೋನಲ್ಲಿ ತಮ್ಮ ಮದುವೆ ಫಿಕ್ಸ್ ಆಗುತ್ತಿದೆ ಎಂದು ಹೇಳಿದ್ದರು.
ಅನುಶ್ರೀ ಮದುವೆ ಯಾರೊಂದಿಗೆ ಫಿಕ್ಸ್ಆಗುತ್ತಿದೆ ಎಂಬ ಸಂಗತಿ ಎಲ್ಲರನ್ನು ಕಾಡುತ್ತಿದೆ. ಅಮ್ಮ ಒಪ್ಪುವ ಹುಡುಗನನ್ನು ಮದುವೆ ಆಗ್ತೀನಿ ಎಂದು ಅನುಶ್ರೀ ಹೇಳಿದ್ದರು, ಈ ಹಿನ್ನೆಲೆ ಅವರ ಮನೆಯವರೇ ಹುಡುಗನನ್ನು ಹುಡುಕಿರಬಹುದು ಎನ್ನಲಾಗಿದೆ.
ಮದುವೆಗೆ ಸಜ್ಜಾಗಿರುವ ಅನುಶ್ರೀ ರಿಯಲ್ ವಯಸ್ಸಿನ ಬಗ್ಗೆ ಅನೇಕ ಚರ್ಚೆಗಳು ನಡೆದಿವೆ. ಅನುಶ್ರೀ ಯಾವ ವಯಸ್ಸಿಗೆ ಮದುವೆ ಆಗಲಿದ್ದಾರೆ ಎಂದು ಜನರು ಹುಡುಕುತ್ತಿದ್ದಾರೆ. ಈ ಹಿಂದೆ ಅನೇಕ ಬಾರಿ ಅನುಶ್ರೀ ಮದುವೆಯಾದಂತೆ ಬಿಂಬಿಸುವ ಫೋಟೋಗಳು ವೈರಲ್ ಆಗಿದ್ದು, ಎಲ್ಲಕ್ಕೂ ಈಗ ಫುಲ್ ಸ್ಟಾಪ್ ಸಿಗಲಿದೆ.
ಅನುಶ್ರೀ 25 ಜನವರಿ 1988 ರಲ್ಲಿ ಜನಿಸಿದರು ಎನ್ನಲಾಗುತ್ತದೆ. ಆ ಪ್ರಕಾರ ಅನುಶ್ರೀ ನಿಜವಾದ ವಯಸ್ಸು 36 ವರ್ಷ. 36 ನೇ ವಯಸ್ಸಿನಲ್ಲಿ ನಿರೂಪಕಿ ಅನುಶ್ರೀ ಮದುವೆಗೆ ಒಪ್ಪಿ ಸೂಚಿಸಿದ್ದಾರೆ.
ನಿರೂಪಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅನುಶ್ರೀ ನಟಿಯಾಗಿಯೂ ಪ್ರತಿಭೆಯನ್ನು ತೋರಿದ್ದಾರೆ. ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರೂಪಕರಲ್ಲಿ ಒಬ್ಬರಾಗಿರುವ ಅನುಶ್ರೀ ಮದುವೆ ಆಗಲು ರೆಡಿಯಾಗಿದ್ದು ಅವರ ಅಭಿಮಾನಗಳ ಸಂತಸಕ್ಕೆ ಕಾರಣವಾಗಿದೆ.