Actress Radhika Kumaraswamy : ಸ್ಯಾಂಡಲ್ವುಡ್ ಸ್ವೀಟಿ ನಟಿ ರಾಧಿಕಾ ಕುಮಾರಸ್ವಾಮಿ 14ನೇ ವಯಸ್ಸಿನಲ್ಲೇ ಮೊದಲ ಮದುವೆಯಾದರು. ಆದರೆ ಅದು ಬಹುಕಾಲ ಉಳಿಯಲಿಲ್ಲ, ಬಳಿಕ ಸಿಎಂ ಒಬ್ಬರ ಎರಡನೇ ಪತ್ನಿಯಾದರು. ಆ ಸಂಬಂಧವೂ ಮುರಿದುಬಿದ್ದಿತು. ನಟಿ ರಾಧಿಕಾ ಮೊದಲ ಪತಿ ಇವರೇ ನೋಡಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಸ್ಯಾಂಡಲ್ವುಡ್ ಸ್ವೀಟಿ ನಟಿ ರಾಧಿಕಾ ಕುಮಾರಸ್ವಾಮಿ 14ನೇ ವಯಸ್ಸಿನಲ್ಲೇ ಮೊದಲ ಮದುವೆಯಾದರು. ಆದರೆ ಅದು ಬಹುಕಾಲ ಉಳಿಯಲಿಲ್ಲ, ಬಳಿಕ ಸಿಎಂ ಒಬ್ಬರ ಎರಡನೇ ಪತ್ನಿಯಾದರು. ಆ ಸಂಬಂಧವೂ ಮುರಿದುಬಿದ್ದಿತು. ನಟಿ ರಾಧಿಕಾ ಮೊದಲ ಪತಿ ಇವರೇ ನೋಡಿ...
ಚಂದನವನದ ಖ್ಯಾತ ತಾರೆ ನಟಿ ರಾಧಿಕಾ ಕುಮಾರಸ್ವಾಮಿ ಅವರ ಮೊದಲ ಪತಿ ಎಚ್ಡಿ ಕುಮಾರಸ್ವಾಮಿ ಅವರಲ್ಲ. ಈ ವಿಚಾರ ಅನೇಕರಿಗೆ ತಿಳಿದಿಲ್ಲ. ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿದ್ದ ರಾಧಿಕಾ ಮೊದಲ ಪತಿಯ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ.
ನಟಿ ರಾಧಿಕಾ 14 ನೇ ವಯಸ್ಸಿನಲ್ಲಿಯೇ ಮೊದಲ ಮದುವೆ ನಡೆಯಿತು. ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ 26 ನವೆಂಬರ್ 2000ದಲ್ಲಿ ರಾಧಿಕಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು ಎನ್ನಲಾಗುತ್ತದೆ.
ತುಳು ಮೂಲದ ರತನ್ ಕುಮಾರ್ ಎಂಬವರೊಂದಿಗೆ ರಾಧಿಕಾ ಮೊದಲ ಮದುವೆ ನಡೆಯಿತು ಎನ್ನಲಾಗುತ್ತದೆ. ಆದರೆ ಆಗಿನ್ನೂ ರಾಧಿಕಾ ನಟಿಯಾಗಿರಲಿಲ್ಲ. ಮದುವೆ ಬಳಿಕ ಒಂದೂವರೆ ವರ್ಷದಲ್ಲೇ ರಾಧಿಕಾ ಅವರ ಮೊದಲ ಪತಿ ರತನ್ ಕುಮಾರ್ ಅಪಘಾತದಲ್ಲಿ ನಿಧನರಾದರು ಎಂದು ಹೇಳಲಾಗುತ್ತದೆ.
ಪತಿಯ ಅಗಲಿಕೆ ಬಳಿಕ ಅತ್ತೆ ಮನೆಯಲ್ಲಿ ಸಾಕಷ್ಟು ಹಿಂಸೆಯನ್ನು ರಾಧಿಕಾ ಅನುಭವಿಸಿದ್ದಾರಂತೆ. ಈ ನೋವಿನಿಂದಲೇ ಸಾಧನೆ ಮಾಡಬೇಕೆಂದು ಹಠ ಹಿಡಿದು ಸಿನಿಮಾರಂಗಕ್ಕೆ ಬಂದರಂತೆ.
ಸೃಜನ್ ಲೋಕೇಶ್ ಅವರ 'ನೀಲ ಮೇಘ ಶ್ಯಾಮ' ಸಿನಿಮಾದಲ್ಲಿ ನಟಿ ರಾಧಿಕಾ ಮೊದಲ ಬಾರಿಗೆ ಕಾಣಿಸಿಕೊಂಡರು. ಅಲ್ಲಿಂದ ಅವರ ಬಣ್ಣದ ಲೋಕದ ಪಯಣ ಶುರುವಾಯಿತು. ನಟ ವಿಜಯರಾಘವೇಂದ್ರ ನಟನೆಯ 'ನಿನಗಾಗಿ' ಸಿನಿಮಾ ಮೂಲಕ ರಾಧಿಕಾ ಹಿಟ್ ಪಡೆದರು.
ನಿರ್ಮಾಪಕರಾಗಿರುವ ರಾಜ್ಯದ ಮಾಜಿ ಸಿಎಂ ಒಬ್ಬರ ಜೊತೆ ನಟಿ ರಾಧಿಕಾ ಪ್ರೀತಿಯಲ್ಲಿ ಬಿದ್ದರು. ಬಳಿಕ ಅವರ ಜೊತೆ ಎರಡನೇ ಮದುವೆಯಾದರು. ಈ ಮದುವೆ ಕೂಡ ಬಹುಕಾಲ ಉಳಿಯಲಿಲ್ಲ. ಇಬ್ಬರೂ ಸಂಬಂಧವನ್ನು ಮುರಿದುಕೊಂಡರು.
ನಟಿ ರಾಧಿಕಾ ಅಣ್ಣ ತಂಗಿ, ತವರಿಗೆ ಬಾ ತಂಗಿ ಸಿನಿಮಾಗಳಲ್ಲಿ ಶಿವರಾಜ್ಕುಮಾರ್ ಜೊತೆ ನಟಿಸಿ ಸೂಪರ್ ಹಿಟ್ ಪಡೆದರು. ದರ್ಶನ್, ಉಪೇಂದ್ರ ಹೀಗೆ ಕನ್ನಡದ ಸ್ಟಾರ್ ನಟರ ಜೊತೆ ರಾಧಿಕಾ ಸಿನಿಮಾ ಮಾಡಿದ್ದಾರೆ.
ತೆಲುಗು ಚಿತ್ರಗಳಲ್ಲಿಯೂ ನಟಿ ರಾಧಿಕಾ ಕುಮಾರಸ್ವಾಮಿ ಅಭಿನಯಿಸಿದ್ದಾರೆ. ಇಂದು ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ, ನಿರ್ಮಾಪಕಿಯಾಗಿ ಸಕ್ರಿಯರಾಗಿದ್ದಾರೆ.