Saturn transit 2023: ಶನಿ ದೇವರನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಮನುಷ್ಯರ ಕರ್ಮಕ್ಕನುಗುಣವಾಗಿ ಫಲವನ್ನು ಕೊಡುತ್ತಾನೆ. ಶನಿಯ ಕೋಪದ ಅಂಶವು ನಮ್ಮನ್ನು ಅನೇಕ ರೀತಿಯ ತೊಂದರೆಗಳಿಗೆ ಸಿಲುಕಿಸುತ್ತದೆ. ಅವನು ನಮಗೆ ದುಃಖವನ್ನು ಕೊಟ್ಟರೆ ಅದರಿಂದ ಚೇತರಿಸಿಕೊಳ್ಳುವುದು ಮನುಷ್ಯನ ಶಕ್ತಿಗೆ ಮೀರಿದೆ. ಹಾಗೆಯೇ ಆತನ ಕೃಪೆ ನಮ್ಮ ಮೇಲೆ ಬಿದ್ದರೆ ಬಡವನೂ ರಾಜನಾಗಬಹುದು. ಆಗ ನಾವು ಜೀವನದಲ್ಲಿ ಗರಿಷ್ಠ ಪ್ರಗತಿಯನ್ನು ಸಾಧಿಸುವುದನ್ನು ಯಾರೂ ತಡೆಯಲಾರರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಶನಿ ವಕ್ರ ಸಂಚಾರ: ಪ್ರಸ್ತುತ ಶನಿಯು ತನ್ನದೇ ಆದ ಕುಂಭ ರಾಶಿಯಲ್ಲಿ ವಕ್ರ ಸ್ಥಾನದಲ್ಲಿದ್ದಾನೆ. ವಕ್ರ ಶನಿಯ ಪ್ರಭಾವವನ್ನು ಎಲ್ಲಾ ರಾಶಿಗಳ ಜೀವನದಲ್ಲಿ ಕಾಣಬಹುದು. ಆದರೆ, ಶನಿಯ ಈ ಚಲನೆಯು 3 ರಾಶಿಯವರಿಗೆ ಅಧಿಕ ಲಾಭವನ್ನು ನೀಡುತ್ತದೆ.
ವೃಷಭ ರಾಶಿ: ಶನಿಗ್ರಹದ ಹಿಮ್ಮುಖ ಚಲನೆ ವೃಷಭ ರಾಶಿಯವರಿಗೆ ಹೊಸ ಜೀವನ ಆರಂಭಿಸಿದಂತೆ. ಎಲ್ಲಾ ಪ್ರಯತ್ನಗಳಲ್ಲಿ ಉತ್ತಮ ಯಶಸ್ಸು. ಉದ್ಯೋಗಾಕಾಂಕ್ಷಿಗಳಿಗೆ ಈಗ ಖಂಡಿತ ಕೆಲಸ ಸಿಗುತ್ತದೆ. ಈಗಾಗಲೇ ಉದ್ಯೋಗದಲ್ಲಿರುವವರಿಗೆ ವೇತನ ಹೆಚ್ಚಳ ಮತ್ತು ಬಡ್ತಿ ದೊರೆಯುವ ಸಾಧ್ಯತೆ ಇದೆ. ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ.
ತುಲಾ ರಾಶಿ: ಶನಿಯ ವಕ್ರ ಸ್ಥಾನವು ತುಲಾ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಮಕ್ಕಳ ಮೂಲಕ ಶುಭ ಸಮಾಚಾರ ಸಿಗಲಿದೆ. ಜೀವನದಲ್ಲಿ ಸಂತೋಷಗಳು ಹೆಚ್ಚಾಗುತ್ತವೆ. ಹೊಸ ಆಸ್ತಿ ಖರೀದಿ ಯೋಗವಿದೆ. ಕೈಗೊಂಡ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು.
ಮಕರ ರಾಶಿ: ಈ ಅವಧಿಯಲ್ಲಿ ಶನಿಯ ಹಿಮ್ಮುಖ ಚಲನೆಯಿಂದಾಗಿ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಅನಿರೀಕ್ಷಿತ ಸ್ಥಳಗಳಿಂದ ಹಣ ಬರಲಿದೆ. ಹಣದ ಕೊರತೆ ಇರುವುದಿಲ್ಲ. ಹೂಡಿಕೆ ಮಾಡಲು ಇದು ಉತ್ತಮ ಸಮಯ. ಈಗ ಮಾಡುವ ಹೂಡಿಕೆಯು ಭವಿಷ್ಯದಲ್ಲಿ ಉತ್ತಮ ಲಾಭವನ್ನು ನೀಡುತ್ತದೆ.
ಶನಿ ದೇವರನ್ನು ಮೆಚ್ಚಿಸಲು ಹೀಗೆ ಮಾಡಿ: ಶನಿ ದೇವ ನಿಸ್ವಾರ್ಥವಾಗಿ ಸಹಾಯ ಮಾಡುವವರನ್ನು ಇಷ್ಟಪಡುತ್ತಾನೆ. ಆತನು ಅವರ ಮೇಲೆ ಕೃಪೆಯನ್ನು ಸುರಿಸುತ್ತಾನೆ. ಹೀಗಾಗಿ ಅಗತ್ಯವಿರುವವರಿಗೆ ಸಹಾಯ ಮಾಡಿ. ಶನಿ ಸ್ತೋತ್ರಗಳನ್ನು ಪಠಿಸಿ ಅವರ ಅನುಗ್ರಹವನ್ನು ಪಡೆಯಬಹುದು.