Seetha Raama Kannada serial Sihi: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಾಕಷ್ಟು ಜನಪ್ರಿಯ ಧಾರವಾಹಿಗಳಲ್ಲಿ ಸೀತಾ ರಾಮ ಕೂಡ ಒಂದು.. ಈ ಸಿರೀಯಲ್ನಲ್ಲಿ ಕಿರುತೆರೆಯ ಫೇಮಸ್ ನಟಿ ವೈಷ್ಣವಿ ಗೌಡ ಹಾಗೂ ನಟ ಗಗನ್ ಚಿನ್ನಪ್ಪ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ಇದರಲ್ಲಿ ಇನ್ನೊಂದು ಅತೀ ಮುಖ್ಯ ಪಾತ್ರವೆಂದರೇ ಅದು ಸಿಹಿ ಪಾತ್ರ.. ಇದೀಗ ಈ ಪಾತ್ರಧಾರಿ ನಿಜ ಜೀವನದ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ತಿಳಿಯೋಣ..
ಜೀ ಕನ್ನಡ ವಾಹಿನಿಯಲ್ಲಿ ಸಾಕಷ್ಟು ಜನಪ್ರಿಯ ಧಾರವಾಹಿಗಳು ಪ್ರಸಾರವಾಗುತ್ತಿವೆ.. ಅವುಗಳ ಪೈಕಿ ಸೀತಾ ರಾಮ ಕೂಡ ಒಂದು.. ಈ ಸಿರೀಯಲ್ ಸದ್ಯ ಕಿರುತೆರೆ ಪ್ರೇಕ್ಷಕರ ನೆಚ್ಚಿನದ್ದಾಗಿದೆ ಎಂದರೇ ತಪ್ಪಾಗುವುದಿಲ್ಲ..
ಸೀತಾ ರಾಮ ಸಿರೀಯಲ್ನಲ್ಲಿ ಖ್ಯಾತ ಕಿರುತೆರೆ ನಟಿ ವೈಷ್ಣವಿ ಗೌಡ ಹಾಗೂ ನಟ ಗಗನ್ ಚಿನ್ನಪ್ಪ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.. ಇದರಲ್ಲಿ ಬರುವ ಇನ್ನೊಂದು ಅತೀ ಪ್ರಾಮುಖ್ಯತೆ ಹೊಂದಿದ ಪಾತ್ರವೆಂದರೇ ಅದು ಸಿಹಿ..
ಹೌದು ಸಿಹಿ ಸೀತಾ ರಾಮ ಸಿರೀಯಲ್ನ ಆಧಾರ ಸ್ತಂಭ.. ಈ ಮುದ್ದು ಗೊಂಬೆಯ ಮಾತು ಕೇಳಲೆಂದೆ ಹಲವರು ಈ ಧಾರವಾಹಿ ನೋಡುತ್ತಿದ್ದಾರೆ.. ಅಷ್ಟು ಕ್ಯೂಟ್ ಆಗಿ ಮೂಡಿ ಬರುತ್ತಿರುವ ಪಾತ್ರ ಅದು.. ಹಾಗಾದ್ರೆ ಆ ಪಾತ್ರದಲ್ಲಿ ನಟಿಸುತ್ತಿರುವ ಪಾತ್ರಧಾರಿಯ ನಿಜವಾದ ತಾಯಿ ಯಾರು? ಆ ಮಗುವಿನ ನಿಜ ಜೀವನ ಹೇಗಿದೆ ಎನ್ನುವುದನ್ನು ಇದೀಗ ತಿಳಿಯೋಣ..
ಸಿಹಿಯ ನಿಜವಾದ ಹೆಸರು ರಿತು ಸಿಂಗ್.. ಮೂಲತಃ ನೇಪಾಳಿಯವರು.. ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಈ ಮಗು ತಾಯಿ ಪ್ರೀತಿಯನ್ನು ಮಾತ್ರ ಕಂಡಿದೆ.. ಈ ಮಗುವಿನ ತಾಯಿ ಬೆಂಗಳೂರಿನಲ್ಲಿ ಮನೆ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ..
ಸ್ಕ್ರೀನ್ ಮೇಲೆ ಕಾಣುವಂತೆ ಸಿಹಿಯ ಜೀವನ ಕಹಿಯಿಂದಲೇ ಕೂಡಿದೆ.. ಅಪ್ಪನ ಪ್ರೀತಿಯನ್ನೇ ನೋಡದ ಕಂದ ತೆರೆ ಮೇಲೆ ನಗುತ್ತಾ ಎಲ್ಲರನ್ನು ನಗಿಸುತ್ತಾ ಕಿರುತೆರೆ ಲೋಕದಲ್ಲಿ ಮಿಂಚುತ್ತಿದೆ..