ವೈದಿಕ ಜ್ಯೋತಿಷ್ಯದಲ್ಲಿ, ಶನಿ ದೇವರು ವಯಸ್ಸು, ಹೋರಾಟ, ರೋಗ, ನೋವು, ವಿಜ್ಞಾನ, ತಂತ್ರಜ್ಞಾನ, ಕಬ್ಬಿಣ, ಖನಿಜ ಸಂಪತ್ತು, ತೈಲ, ಕಾರ್ಮಿಕ ಇತ್ಯಾದಿಗಳ ಅಂಶವೆಂದು ಪರಿಗಣಿಸಲಾಗಿದೆ.
ಬೆಂಗಳೂರು : ಶನಿ ದೇವರನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ನಾವು ಏನು ಮಾಡುತ್ತೇವೆಯೋ ಅದಕ್ಕೆ ತಕ್ಕಂತೆ ಆತನು ನಮಗೆ ಪ್ರತಿಫಲವನ್ನು ಕೊಡುತ್ತಾನೆ. ಶನಿಯು ಅತ್ಯಂತ ಪ್ರಮುಖ ಗ್ರಹವಾಗಿದೆ. ಆದ್ದರಿಂದಲೇ ಶನಿಯ ಸ್ಥಾನದ ಸಣ್ಣ ಬದಲಾವಣೆಯೂ ಎಲ್ಲಾ ರಾಶಿಗಳಲ್ಲಿ ದೊಡ್ಡ ಬದಲಾವಣೆಯನ್ನು ಉಂಟುಮಾಡುತ್ತದೆ. ಜೂನ್ 17, 2023 ರಿಂದ, ಶನಿಯು ತನ್ನದೇ ಆದ ಕುಂಭ ರಾಶಿಯಲ್ಲಿ ವಕ್ರ ಅಥವಾ ಹಿಮ್ಮುಖ ಸ್ಥಿತಿಯಲ್ಲಿದ್ದಾನೆ. ಅದರಲ್ಲೂ ಆಗಸ್ಟ್ 29 ರಿಂದ ಅಂದರೆ ನಿನ್ನೆಯಿಂದ ಹೆಚ್ಚು ಶಕ್ತಿ ಶಾಲಿಯಾಗಿದ್ದಾನೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಅಧಿಪತಿ ಶನಿ: ಅತ್ಯಂತ ಪ್ರಮುಖ ಗ್ರಹ ಶನಿಯು ಪ್ರತಿ ರಾಶಿಯಲ್ಲಿ ದೀರ್ಘಕಾಲ ಉಳಿಯುತ್ತಾನೆ ಈ ಮೂಲಕ ಹೆಚ್ಚಿನ ಪ್ರಭಾವವನ್ನು ಬೀರುತ್ತಾನೆ.
ಹೆಚ್ಚಿನ ಪರಿಣಾಮ: ಶನಿಯು ಎಲ್ಲಾ ಗ್ರಹಗಳಲ್ಲಿ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಆದ್ದರಿಂದ, ರಾಶಿಯ ಮೇಲೆ ಅವನ ಪ್ರಭಾವವು ಇತರ ಗ್ರಹಗಳಿಗಿಂತ ಹೆಚ್ಚು.
ಹೆಚ್ಚು ಶಕ್ತಿಶಾಲಿಯಾಗುವನು : ಜೂನ್ 17, 2023 ರಿಂದ, ಶನಿಯು ತನ್ನದೇ ಆದ ಕುಂಭ ರಾಶಿಯಲ್ಲಿ ವಕ್ರ ಸ್ಥಿತಿಯಲ್ಲಿದ್ದಾನೆ. ನಿನ್ನೆಯಿಂದ ಶನಿಯು ಹೆಚ್ಚು ಬಲದೊಂದಿಗೆ ಓಡಾಡುತ್ತಿದ್ದಾನೆ.
ರಾಶಿಗಳ ಮೇಲೆ ಪ್ರಭಾವ: ಶನಿಯ ಬಲವು ಹೆಚ್ಚಾದಂತೆ, ಎಲ್ಲಾ ರಾಶಿಗಳ ಜೀವನದ ಮೇಲೆ ಅದರ ಪ್ರಭಾವವು ಹೆಚ್ಚಾಗುತ್ತದೆ. ಶಕ್ತಿಶಾಲಿ ಶನಿಯು 4 ರಾಶಿಯವರಿಗೆ ಹೆಚ್ಚು ಶುಭ ಫಲ ಕರುಣಿಸಲಿದ್ದಾನೆ. ಈ ರಾಶಿಯವರು ಶನಿಯ ಕೃಪೆಯಿಂದ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗುತ್ತಾರೆ.
ವೃಷಭ ರಾಶಿ : ಶನಿಯ ಪ್ರಭಾವದಿಂದ ವೃಷಭ ರಾಶಿಯವರಿಗೆ ಜೀವನದಲ್ಲಿ ಶುಭ ದಿನಗಳು ಆರಂಭವಾಗಲಿವೆ. ಎಲ್ಲಾ ಕೆಲಸಗಳಲ್ಲಿ ಅದೃಷ್ಟ ಇವರ ಪರವಾಗಿಯೇ ಇರುತ್ತದೆ. ನೀವು ಕೆಲಸದಲ್ಲಿರಲಿ ಅಥವಾ ವ್ಯವಹಾರದಲ್ಲಿರಲಿ, ಯಶಸ್ಸು ನಿಮ್ಮದೇ. ಒಂದರ ಹಿಂದೆ ಒಂದರಂತೆ ಹಲವು ಶುಭ ಸುದ್ದಿಗಳು ತೇಲಿ ಬರಲಿವೆ.
ಮಿಥುನ ರಾಶಿ : ಮಿಥುನ ರಾಶಿಯವರ ಮೇಲೆ ಶನಿದೇವರ ಕೃಪಾ ಕಟಾಕ್ಷ ಹರಿಯುತ್ತಿದೆ. ಆರೋಗ್ಯ ಉತ್ತಮವಾಗಿರುತ್ತದೆ. ನಿಮ್ಮ ಸಂಬಂಧಗಳು ಉತ್ತಮವಾಗಿರುತ್ತವೆ. ಶೀಘ್ರದಲ್ಲೇ ದೊಡ್ಡ ಯಶಸ್ಸನ್ನು ಸಾಧಿಸುವಿರಿ. ಆರ್ಥಿಕ ಸ್ಥಿತಿ ಸುಧಾರಿಸಲಿದೆ.
ಕರ್ಕಾಟಕ ರಾಶಿ : ಶನಿಯ ವಕ್ರ ನಡೆ ಕರ್ಕ ರಾಶಿಯವರ ಜೀವನದಲ್ಲಿ ಉತ್ತಮ ಆರಂಭವನ್ನು ನೀಡುತ್ತದೆ. ವ್ಯಾಪಾರದಲ್ಲಿ ಪ್ರಗತಿಯಾಗುವುದು. ಮುನ್ನಡೆಯುವ ಹಾದಿ ಸುಗಮವಾಗಿರಲಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ.
ತುಲಾ ರಾಶಿ : ಶನಿಯ ಸಂಚಾರವು ತುಲಾ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ವಿವಾದಾತ್ಮಕ ವಿಷಯದಲ್ಲೂ ನೀವು ಗೆಲ್ಲುತ್ತೀರಿ. ಶತ್ರುಗಳಿಗೆ ಸೋಲಾಗುವುದು. ಇಲ್ಲಿಯವರೆಗೆ ಕಾಡುತ್ತಿದ್ದ ಆರೋಗ್ಯ ಸಮಸ್ಯೆಯಿಂದ ಮುಕ್ತಿ ಸಿಗುವುದು.