ಟೊಮ್ಯಾಟೋ ಹಣ್ಣು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಆದರೆ ಕೆಲವು ರೋಗಗಳಲ್ಲಿ, ಟೊಮೆಟೊಗಳನ್ನು ಸೇವಿಸುವುದು ನಿಷಿದ್ಧ.
ಬೆಂಗಳೂರು : ಟೊಮ್ಯಾಟೋವನ್ನು ಬಹುತೇಕ ಎಲ್ಲಾ ಅಡುಗೆಗಳಲ್ಲಿ ಬಳಸಲಾಗುತ್ತದೆ. ಸಾಂಬಾರ್, ಪಲ್ಯ, ಬೆಳಗಿನ ಉಪಹಾರಕ್ಕೆ ಮಾಡುವ ತಿಂಡಿಗಳಲ್ಲಿ ಟೊಮ್ಯಾಟೋ ಹಣ್ಣನ್ನು ಬಳಸಲಾಗುತ್ತದೆ. ಇದರಲ್ಲಿ ರಂಜಕ, ಕ್ಯಾಲ್ಸಿಯಂ, ವಿಟಮಿನ್ಗಳು ಮತ್ತು ಆ್ಯಂಟಿ ಆಕ್ಸಿಡೆಂಟ್ಗಳಂತಹ ಪೋಷಕಾಂಶಗಳಿದ್ದು, ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಟೊಮ್ಯಾಟೋ ಹಣ್ಣು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಆದರೆ ಕೆಲವು ರೋಗಗಳಲ್ಲಿ, ಟೊಮೆಟೊಗಳನ್ನು ಸೇವಿಸುವುದು ನಿಷಿದ್ಧ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು ಟೊಮ್ಯಾಟೋವನ್ನು ಸೇವಿಸಿದರೆ ಆರೋಗ್ಯದ ಮೇಲೆ ಮ್ಕೆತ್ತ ಪರಿಣಾಮ ಬೀರುತ್ತದೆ. ಟೊಮ್ಯಾಟೋದಲ್ಲಿ ಆಕ್ಸಲೇಟ್ ಇದ್ದು ಇದು ಕಲ್ಲುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕಿಡ್ನಿ ಸ್ಟೋನ್ ನಲ್ಲಿ ಟೊಮ್ಯಾಟೋ ತಿನ್ನುವುದರಿಂದ ಸಮಸ್ಯೆ ಹೆಚ್ಚಾಗಬಹುದು.
ಅತಿಸಾರವಿದ್ದಾಗ ಟೊಮ್ಯಾಟೋ ಹಣ್ಣಿನಿಂದ ಸಾಧ್ಯವಾದಷ್ಟು ದೂರವಿರಬೇಕು. ಇದರಲ್ಲಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾಗಳಿದ್ದು, ಅತಿಸಾರದ ಸಮಸ್ಯೆಯನ್ನು ಹೆಚ್ಚಿಸಬಹುದು.
ಕೀಲು ನೋವಿನ ಸಮಸ್ಯೆಯಿಂದ ಬಳಲುತ್ತಿರುವವರು ಟೊಮ್ಯಾಟೋಗಳನ್ನು ತಿನ್ನುವುದರಿಂದ ಸಮಸ್ಯೆ ಹೆಚ್ಚಾಗುವ ಅಪಾಯವಿರುತ್ತದೆ. ಕೀಲು ನೋವಿನ ಸಮಸ್ಯೆ ಇರುವವರು ಟೊಮ್ಯಾಟೋವನ್ನು ಅತಿಯಾಗಿ ಸೇವಿಸುವುದನ್ನು ನಿಲ್ಲಿಸಬೇಕು.
ಟೊಮ್ಯಾಟೋ ತಿನ್ನುವುದರಿಂದ ಕೆಲವರಿಗೆ ಅಲರ್ಜಿ ಸಮಸ್ಯೆಗಳು ಉಂಟಾಗಬಹುದು. ಟೊಮ್ಯಾಟೋ ಚರ್ಮದ ಅಲರ್ಜಿಯನ್ನು ಉಂಟುಮಾಡಬಹುದು. ತ್ವಚೆಯ ಅಲರ್ಜಿಯ ಸಮಸ್ಯೆ ಇದ್ದವರು ಕೂಡಾ ಟೊಮ್ಯಾಟೋಗಳನ್ನು ತಿನ್ನಬಾರದು.
ಟೊಮೆಟೊ ತಿನ್ನುವುದರಿಂದ ಗ್ಯಾಸ್ ಮತ್ತು ಅಸಿಡಿಟಿ ಸಮಸ್ಯೆ ಹೆಚ್ಚಾಗಬಹುದು. ಟೊಮೇಟೊ ತಿನ್ನುವುದರಿಂದ ಹೊಟ್ಟೆ ನೋವಿನ ಸಮಸ್ಯೆಯೂ ಹೆಚ್ಚಾಗಬಹುದು. (ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿದುವುದಿಲ್ಲ)