Shukra Rashi Parivartan: ದ್ವಾದಶ ರಾಶಿಗಳ ಮೇಲೆ ಶುಕ್ರನ ರಾಶಿ ಪರಿವರ್ತನೆಯ ಪರಿಣಾಮ ಹೇಗಿರಲಿದೆ!

                           

ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಸಂಪತ್ತು ಮತ್ತು ಸಂತೋಷವನ್ನು ಬಯಸುತ್ತಾನೆ. ಜೀವನದ ಈ ಅಂಶಗಳು ಶುಕ್ರ ಗ್ರಹದೊಂದಿಗೆ (Venus Planet)  ಸಂಬಂಧ ಹೊಂದಿವೆ. ಜಾತಕದಲ್ಲಿ ಶುಕ್ರನ ಸ್ಥಾನ ಮತ್ತು ಶುಕ್ರನ ರಾಶಿ ಪರಿವರ್ತನೆ (Shukra Rashi Parivartan) ಎಲ್ಲಾ ದ್ವಾದಶ ರಾಶಿಗಳ ಆರ್ಥಿಕ ಮತ್ತು ವೈವಾಹಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಜುಲೈ 17 ರಂದು ಶುಕ್ರ ಸಿಂಹ ರಾಶಿಗೆ ಪ್ರವೇಶಿಸಲಿದ್ದು, ಆಗಸ್ಟ್ 11 ರವರೆಗೆ ಇದೇ ರಾಶಿಯಲ್ಲಿ ಉಳಿಯಲಿದ್ದಾನೆ. ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಈ ಬದಲಾವಣೆಯ ಪರಿಣಾಮವನ್ನು ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /12

ಈ ರಾಶಿಚಕ್ರದ ಜನರಿಗೆ ಶುಕ್ರನ ರಾಶಿ ಪರಿವರ್ತನೆಯು ಶುಭವೆಂದು ಸಾಬೀತುಪಡಿಸುತ್ತದೆ. ಆರ್ಥಿಕ ತೊಂದರೆಗಳು ಕೊನೆಗೊಳ್ಳುತ್ತವೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವ ಯೋಗವಿದೆ.

2 /12

ಭೂ-ಆಸ್ತಿ ವಿಷಯಗಳು ಇತ್ಯರ್ಥಗೊಳ್ಳುತ್ತವೆ. ನೀವು ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು. ನಿಮ್ಮ ಕಣ್ಣಿನ ಬಗ್ಗೆ ಎಚ್ಚರವಹಿಸಿ. ಶುಕ್ರವಾರ ಬಿಳಿ ಸಿಹಿತಿಂಡಿ ಅಥವಾ ಅಕ್ಕಿ ದಾನ ಮಾಡಿ.

3 /12

ಮಿಥುನ ರಾಶಿಯವರಿಗೆ ಇದು ಸಾಮಾನ್ಯ ಸಮಯವಗೈತ್ತುದೆ. ನಿಮ್ಮ ವೆಚ್ಚ ಹೆಚ್ಚಾಗುತ್ತದೆ. ಕೆಲಸದ ಸ್ಥಳದಲ್ಲಿ, ಅದೃಷ್ಟದ ಬದಲು ಕಠಿಣ ಪರಿಶ್ರಮವನ್ನು ಅವಲಂಬಿಸಿ. ಕುಟುಂಬ ಸದಸ್ಯರೊಂದಿಗೆ ಸಂಬಂಧ ಉತ್ತಮವಾಗಿರುತ್ತದೆ.

4 /12

ಈ ರಾಶಿಚಕ್ರದ ಜನರಿಗೆ ಈ ಸಮಯ ಶುಭವಾಗಿದೆ. ಭೂ-ಆಸ್ತಿಯ ಲಾಭ ಇರುತ್ತದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. ಹೂಡಿಕೆಯ ಮೇಲೆ ಉತ್ತಮ ಫಲಿತಾಂಶಗಳನ್ನು ಪಡೆಯುವ ಯೋಗವಿದೆ. ಇದನ್ನೂ ಓದಿ- Sun Transit 2021: ನಾಳೆ ಕರ್ಕ ರಾಶಿಗೆ ಸೂರ್ಯ ಪ್ರವೇಶ, ಸೂರ್ಯನ ಗೋಚರದ ವಿಶೇಷತೆ ಇಲ್ಲಿದೆ

5 /12

ಶುಕ್ರ ಗ್ರಹವು ಸಿಂಹ ರಾಶಿಗೆ ಪ್ರವೇಶಿಸುತ್ತಿರುವುದರಿಂದ ಈ ರಾಶಿಯ ಜನರ ಮೇಲೆ ರಾಶಿಚಕ್ರದ ಬದಲಾವಣೆಯ ಪರಿಣಾಮವು ಗರಿಷ್ಠವಾಗಿರುತ್ತದೆ. ಆದಾಗ್ಯೂ, ಬದಲಾವಣೆ ನಿಮಗೆ ತುಂಬಾ ಒಳ್ಳೆಯ ಸಮಯವಾಗಿದೆ. ಐಷಾರಾಮಿಯಾಗಿ ಖರ್ಚು ಮಾಡುತ್ತೀರಿ. ಹಣದ-ಲಾಭ ಇರುತ್ತದೆ. ಸಂಗಾತಿಯೊಂದಿಗಿನ ಪ್ರೀತಿ ಹೆಚ್ಚಾಗುತ್ತದೆ.

6 /12

ಈ ಸಮಯ ನಿಮಗೆ ಸಾಧಾರಣವಾಗಿರುತ್ತದೆ. ಹಣದ ಖರ್ಚು ಮತ್ತು ಲಾಭದ ನಡುವೆ ಬಹುತೇಕ ಸಮತೋಲನ ಇರುತ್ತದೆ. ಕುಟುಂಬ ಮತ್ತು ಆರೋಗ್ಯದ ಬಗ್ಗೆ ಗಮನ ಕೊಡಿ.

7 /12

ಈ ರಾಶಿಚಕ್ರದ ಅಧಿಪತಿ ಶುಕ್ರನಾಗಿರುವುದರಿಂದ ಶುಕ್ರನ ರಾಶಿ ಬದಲಾವಣೆಯು (Shukra Rashi Parivartan) ಈ ರಾಶಿಚಕ್ರದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಇದು ನಿಮಗೆ ಬಹಳ ಒಳ್ಳೆಯ ಸಮಯವಾಗಿದ್ದು ಸಂಪತ್ತಿನ ಲಾಭ ಇರುತ್ತದೆ. ಕೆಲಸದಲ್ಲಿ ಕೂಡ ಯಶಸ್ಸು ಇರುತ್ತದೆ.  

8 /12

ಈ ಸಮಯದಲ್ಲಿ ಈ ರಾಶಿಚಕ್ರದ ಜನರು ಯಶಸ್ಸನ್ನು ಪಡೆಯುತ್ತಾರೆ. ಆದರೆ ಉದ್ಯೋಗಸ್ಥರು ಕಚೇರಿಯ ರಾಜಕಾರಣದಿಂದ ದೂರವಿರಬೇಕು. ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಇದನ್ನೂ ಓದಿ- Mangal Rashi Parivartan: ಮಂಗಳನ ರಾಶಿ ಪರಿವರ್ತನೆ ಯಾವ ರಾಶಿಗೆ ಏನು ಫಲ

9 /12

ಶುಕ್ರನ ರಾಶಿ ಪರಿವರ್ತನೆಯಿಂದ ಈ ರಾಶಿಯವರ ವೈವಾಹಿಕ ಜೀವನವು ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಕೂಡ ಈ ಸಮಯ ಬಹಳ ಉತ್ತಮವಾಗಿದೆ. 

10 /12

ಮಕರ ರಾಶಿಯವರಿಗೆ ಪೂರ್ವಜರ ಆಸ್ತಿಯಿಂದ ಲಾಭ ಇರುತ್ತದೆ. ಹಣಕ್ಕೆ ಸಂಬಂಧಿಸಿದ ಕೆಲಸಗಳನ್ನು ಬುದ್ಧಿವಂತಿಕೆಯಿಂದ ನಿಭಾಯಿಸಿ. ಕೆಲಸದಲ್ಲಿ ಕಷ್ಟಪಟ್ಟು ಕೆಲಸ ಮಾಡಿ. ನಿಮ್ಮ ಭಾಷಣವನ್ನು ನಿಯಂತ್ರಿಸಿ ಮತ್ತು ವಾದಗಳನ್ನು ತಪ್ಪಿಸಿ.

11 /12

ಹಣದ ಸ್ಥಾನವು ಬಲವಾಗಿರುತ್ತದೆ. ಪಾಲುದಾರಿಕೆ ಕೆಲಸಗಳಲ್ಲಿ ಪ್ರಯೋಜನಗಳಿವೆ. ನೀವು ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗಬಹುದು ಅಥವಾ ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಬಹುದು.

12 /12

ಯೋಚಿಸಿ ಹಣ ಖರ್ಚು ಮಾಡುವುದು ಒಳ್ಳೆಯದು. ಇದರೊಂದಿಗೆ ಆರೋಗ್ಯ ಮತ್ತು ಕುಟುಂಬ ಜೀವನದ ಬಗ್ಗೆ ಗಮನ ಕೊಡಿ. (ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. ಝೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.)