ಈ ರಾಶಿಯವರ ಬದುಕನ್ನು ಬಂಗಾರವಾಗಿಸುವುದು ಬೆಳ್ಳಿ ! ಆದರೆ ಈ ರಾಶಿಯವರಿಗೆ ಮಾತ್ರ ಅಶುಭ

ಕೆಲವರಿಗೆ ಚಿನ್ನ ಅದೃಷ್ಟವಾದರೆ ಇನು ಕೆಲವರಿಗೆ ಬೆಳ್ಳಿ. ಕೆಲವರು ಬೆಳ್ಳಿ ಧರಿಸಲೇ ಬಾರದು. ಆದರೆ ಇನ್ನು ಕೆಲವರ ಬದುಕನ್ನು ಬೆಳ್ಳಿಯೇ ಬಂಗಾರವಾಗಿಸುತ್ತದೆ.

ಬೆಂಗಳೂರು : ಶಾಸ್ತ್ರಗಳ ಪ್ರಕಾರ, ಗ್ರಹಗಳು ಎಲ್ಲಾ ಲೋಹಗಳ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತವೆ. ಪ್ರತಿ ರಾಶಿಗೆ ಅನುಗುಣವಾಗಿ ಲೋಹಗಳನ್ನು ಕೂಡಾ ಹೇಳಲಾಗಿದೆ. ಕೆಲವರಿಗೆ ಚಿನ್ನ ಅದೃಷ್ಟವಾದರೆ ಇನು ಕೆಲವರಿಗೆ ಬೆಳ್ಳಿ. ಕೆಲವರು ಬೆಳ್ಳಿ ಧರಿಸಲೇ ಬಾರದು. ಆದರೆ ಇನ್ನು ಕೆಲವರ ಬದುಕನ್ನು ಬೆಳ್ಳಿಯೇ ಬಂಗಾರವಾಗಿಸುತ್ತದೆ. ಹಾಗಿದ್ದರೆ ಬೆಳ್ಳಿ ಯಾರಿಗೆ ಶುಭ ಯಾರಿಗೆ ಅಶುಭ ನೋಡೋಣ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

1 /5

ಸಿಂಹ ರಾಶಿಯ ಅಧಿಪತಿ ಸೂರ್ಯ. ಸೂರ್ಯ ಬಿಸಿ ಗ್ರಹವಾಗಿದ್ದು, ಚಂದ್ರ  ತಣ್ಣನೆಯ ಸ್ವಭಾವ ಹೊಂದಿರುತ್ತಾನೆ. ಹಾಗಾಗಿ ಈ ರಾಶಿಯವರು ಬೆಳ್ಳಿ ಧರಿಸಬಾರದು. ಈ ರಾಶಿಯವರು ಬೆಳ್ಳಿ ಆಭರಣ ಧರಿಸಿದರೆ ಕೆಲಸ ಕೈಗೂಡುವುದಿಲ್ಲ. ಮಾತ್ರವಲ್ಲ ಆರ್ಥಿಕ ಸಮಸ್ಯೆ ತಲೆದೋರುತ್ತದೆ. 

2 /5

ಧನು ರಾಶಿಯವರ ಅಧಿಪತಿ ಗುರು. ಗುರುವಿನ ಲೋಹ ಚಿನ್ನ. ಹಾಗಾಗಿ ಧನು ರಾಶಿಯವರು ಬೆಳ್ಳಿ ಧರಿಸಬಾರದು. ಒಂದು ವೇಳೆ ಧನು ರಾಶಿಯವರು ಬೆಳ್ಳಿ ಧರಿಸಿದರೆ ಅವಘಡವಾಗುವ ಸಾಧ್ಯತೆ ಇರುತ್ತದೆ. 

3 /5

ಮೇಷ ರಾಶಿಯವರ ಅಧಿಪತಿ ಮಂಗಳ. ಈ ರಾಶಿಯವರು ಬೆಳ್ಳಿ ಧರಿಸಿದರೆ ಹಣಕಾಸಿನ ಸಮಸ್ಯೆ ಎದುರಾಗುತ್ತದೆ. ಮೇಷ ರಾಶಿಯವರು ಬೆಳ್ಳಿ ಧರಿಸಿದರೆ ಒಂದರ ಹಿಂದೆ ಒಂದರಂತೆ ಆರ್ಥಿಕ ಸಮಸ್ಯೆ ಎದುರಿಸಬೇಕಾಗುತ್ತದೆ. 

4 /5

ಕಟಕ, ವೃಶ್ಚಿಕ, ಮೀನ ರಾಶಿಯವರಿಗೆ ಬೆಳ್ಳಿ ಶುಭ. ಈ ರಾಶಿಯನ್ನು ಜಲತತ್ವ ರಾಶಿ ಎನ್ನಲಾಗುತ್ತದೆ. ಬೆಳ್ಳಿ ಕೂಡಾ ಜಲ ತತ್ವ. 

5 /5

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.