financial assistance to pregnant: ಗರ್ಭಿಣಿಯರು ಮತ್ತು ನವಜಾತ ಶಿಶುವಿನ ಪೋಷಣೆಗೆ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು, ಅಂತೆಯೇ ಹೆರಿಗೆಯ ಸಮಯದಲ್ಲಿ ಸಾವುಗಳನ್ನು ತಡೆಗಟ್ಟಲು ಡಾ.ಮುತ್ತುಲಕ್ಷ್ಮಿ ರೆಡ್ಡಿ ಮಾತೃತ್ವ ಆರ್ಥಿಕ ಸಹಾಯ ಯೋಜನೆಯನ್ನು ಪರಿಚಯಿಸಲಾಯಿತು. ಇದು, ಹೆರಿಗೆಯ ಸಮಯದಲ್ಲಿ ಗರ್ಭಿಣಿ ಮಹಿಳೆಯರಿಗೆ ತುಂಬಾ ಸಹಾಯ ಮಾಡುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಗರ್ಭಿಣಿಯರು ಮತ್ತು ನವಜಾತ ಶಿಶುವಿನ ಪೋಷಣೆಗೆ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು, ಅಂತೆಯೇ ಹೆರಿಗೆಯ ಸಮಯದಲ್ಲಿ ಸಾವುಗಳನ್ನು ತಡೆಗಟ್ಟಲು ಡಾ.ಮುತ್ತುಲಕ್ಷ್ಮಿ ರೆಡ್ಡಿ ಮಾತೃತ್ವ ಆರ್ಥಿಕ ಸಹಾಯ ಯೋಜನೆಯನ್ನು ಪರಿಚಯಿಸಲಾಯಿತು. ಇದು, ಹೆರಿಗೆಯ ಸಮಯದಲ್ಲಿ ಗರ್ಭಿಣಿ ಮಹಿಳೆಯರಿಗೆ ತುಂಬಾ ಸಹಾಯ ಮಾಡುತ್ತದೆ.
ಬಡತನ ರೇಖೆಗಿಂತ ಕೆಳಗಿರುವ ಜನರ ಕಲ್ಯಾಣಕ್ಕಾಗಿ ಯೋಜನೆಗಳನ್ನು ತರುವಲ್ಲಿ ತಮಿಳುನಾಡು ಯಾವಾಗಲೂ ಮುಂಚೂಣಿಯಲ್ಲಿರುವ ರಾಜ್ಯವಾಗಿದೆ. ಆ ಮೂಲಕ ಗರ್ಭಿಣಿಯರಿಗೆ ಹೆರಿಗೆ ಅವಧಿಯಲ್ಲಿ ಆಗುವ ಆದಾಯದ ನಷ್ಟವನ್ನು ಸರಿದೂಗಿಸಲು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿರುವಂತೆ ನೋಡಿಕೊಳ್ಳಲು ಡಾ.ಮುತ್ತುಲಕ್ಷ್ಮಿ ರೆಡ್ಡಿ ಮಾತೃತ್ವ ಸವಲತ್ತು ಯೋಜನೆಯನ್ನು 2006 ರಿಂದ ಜಾರಿಗೊಳಿಸಲಾಗಿದೆ.
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಿಂದ ಅನುದಾನಿತವಾಗಿರುವ ಈ ಯೋಜನೆಯು ಈ ವರ್ಷ ಏಪ್ರಿಲ್ 1 ರಿಂದ ಕೆಲವು ಬದಲಾವಣೆಗಳಿಗೆ ಒಳಗಾಗಿದೆ.
ಇದಕ್ಕೂ ಮುನ್ನ ಗರ್ಭಿಣಿಯರಿಗೆ 5 ಕಂತುಗಳಲ್ಲಿ ರೂ.14 ಸಾವಿರ ಧನಸಹಾಯ ನೀಡಲಾಗಿದ್ದು, ಕಳೆದ ಏ. 1ರಿಂದ ಮೂರು ಕಂತುಗಳಲ್ಲಿ ಪಾವತಿಸಲಾಗುವುದು ಎಂದು ಘೋಷಿಸಿದ್ದಾರೆ.
ಇದರಡಿ ಗರ್ಭ ಧರಿಸಿದ 4ನೇ ತಿಂಗಳಲ್ಲಿ 6 ಸಾವಿರ ರೂ. ಮುಂದೆ ಮಗು ಹುಟ್ಟಿದ 4ನೇ ತಿಂಗಳಲ್ಲಿ 6 ಸಾವಿರ ನೀಡಲಾಗುತ್ತದೆ. ಮಗು ಜನಿಸಿದ 9ನೇ ತಿಂಗಳಲ್ಲಿ ಮೂರು ಕಂತುಗಳಲ್ಲಿ 2 ಸಾವಿರ ನೀಡಲಾಗುತ್ತದೆ. ಹೀಗಾಗಿ ಒಟ್ಟು 14 ಸಾವಿರ ರೂ. ಖಾತೆ ಸೇರಲಿದೆ
ತಮಿಳುನಾಡು ಸರ್ಕಾರದ ಪೌಷ್ಠಿಕ ನಿಧಿಯನ್ನು ನಗದು ರೂಪದಲ್ಲಿ ನೀಡುವುದರ ಜೊತೆಗೆ ಗರ್ಭಿಣಿಯಾದ 3 ಮತ್ತು 6ನೇ ತಿಂಗಳಲ್ಲಿ ತಲಾ 2 ಸಾವಿರ ರೂ. ನೀಡಲಾಗುತ್ತದೆ. ಈ ಮೂಲಕ ಈ ಯೋಜನೆಯಡಿ ಗರ್ಭಿಣಿ ಮಹಿಳೆಗೆ ಒಟ್ಟು 18 ಸಾವಿರ ರೂ. ಲಭಿಸುತ್ತದೆ.
ಮಹಿಳೆಯರು ಗರ್ಭಿಣಿಯಾದ 12 ವಾರದೊಳಗೆ ಗ್ರಾಮೀಣ ಮತ್ತು ನಗರ ಆರೋಗ್ಯ ಕೇಂದ್ರದ ಶುಶ್ರೂಷಕರಲ್ಲಿ ಆಧಾರ್ ಕಾರ್ಡ್ ತೋರಿಸಿ ಆರ್ಸಿಎಚ್ ಸಂಖ್ಯೆ ಪಡೆಯಬೇಕು. ಇಲ್ಲದಿದ್ದರೆ, ಬುಕಿಂಗ್ ಅನ್ನು ಕನಿಷ್ಠ 12 ವಾರಗಳಲ್ಲಿ ಮಾಡಬೇಕು.
ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಗರ್ಭಿಣಿಯರು ಮಾತ್ರ ಈ ಯೋಜನೆಯನ್ನು ಪಡೆಯಬಹುದು. ಗರ್ಭಿಣಿ ಮಹಿಳೆಗೆ ಕಡ್ಡಾಯ 19 ವರ್ಷ ವಯಸ್ಸಾಗಿರಬೇಕು. ಮೊದಲ ಎರಡು ಹೆರಿಗೆಗೆ ಮಾತ್ರ ಹಣಕಾಸಿನ ನೆರವು ನೀಡಲಾಗುತ್ತದೆ. ನಂತರದ ಹೆರಿಗೆಗೆ ಷರತ್ತಿನ ಹೆಸರಿನಲ್ಲಿ ಆರ್ಥಿಕ ನೆರವು ನೀಡಲಾಗುವುದು ಎಂಬ ಮಾಹಿತಿಯೂ ಲಭ್ಯವಾಗಿದೆ. ಇದಕ್ಕಾಗಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು ಮತ್ತು ದಾದಿಯರನ್ನು ಸಂಪರ್ಕಿಸಿ.