ಅಧಿಕ ಕೊಲೆಸ್ಟ್ರಾಲ್‌ನಿಂದ ಕೈಯಲ್ಲಿ ಕಾಣಿಸಿಕೊಳ್ಳುತ್ತದೆ ಈ ಸಮಸ್ಯೆ.! ನಿರ್ಲಕ್ಷಿಸಿದರೆ ಪ್ರಾಣಕ್ಕೆ ತರುತ್ತದೆ ಕುತ್ತು

ಕೊಲೆಸ್ಟ್ರಾಲ್ ಮಟ್ಟವು ಅಪಾಯವನ್ನು ಮೀರಿದೆಯೇ ಎಂದು ತಿಳಿಯುವುದು ಹೇಗೆ ಎನ್ನುವುದನ್ನು ತಿಳಿಯೋಣ.  

ಬೆಂಗಳೂರು : ಕೆಟ್ಟ ಜೀವನಶೈಲಿ ಮತ್ತು ಒತ್ತಡದ ಜೀವನಶೈಲಿಯಿಂದ ಜನರ ಆಹಾರ ಪದ್ಧತಿ ದಿನೇ ದಿನೇ ಹದಗೆಡುತ್ತಿದೆ. ಇದರಿಂದಾಗಿ ಜನರು ನಿರಂತರವಾಗಿ ಹೊಸ ಹೊಸ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಆಹಾರ ಮತ್ತು ಪಾನೀಯಕ್ಕೆ ಸಂಬಂಧಿಸಿದ ತಪ್ಪುಗಳಾದರೆ ಅಧಿಕ ರಕ್ತದೊತ್ತಡ ಮತ್ತು ಹೃದಯ ಕಾಯಿಲೆಗಳ ಅಪಾಯವನ್ನು ಹೆಚ್ಚುತ್ತದೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಇದು ಹೆಚ್ಚಿಸುತ್ತದೆ. ಇದರಿಂದ ಅನೇಕ ರೋಗಗಳು ಬರಬಹುದು. ಹಾಗಾದರೆ ಕೊಲೆಸ್ಟ್ರಾಲ್ ಮಟ್ಟವು ಅಪಾಯವನ್ನು ಮೀರಿದೆಯೇ ಎಂದು ತಿಳಿಯುವುದು ಹೇಗೆ ಎನ್ನುವುದನ್ನು ತಿಳಿಯೋಣ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

1 /5

ಅಧಿಕ ಕೊಲೆಸ್ಟ್ರಾಲ್ ಮಟ್ಟವು ರಕ್ತನಾಳಗಳನ್ನು ನಿರ್ಬಂಧಿಸುವ ಕೆಲಸ ಮಾಡುತ್ತದೆ. ಹೀಗಾದಾಗ ಹೃದಯ ಸೇರಿದಂತೆ ಇಡೀ ದೇಹದಲ್ಲಿ ರಕ್ತ ಪೂರೈಕೆ ಸರಿಯಾಗಿ ಆಗುವುದಿಲ್ಲ. ಈ ಕಾರಣದಿಂದಾಗಿ, ಅಧಿಕ ಬಿಪಿ ಮಧುಮೇಹ ಮತ್ತು  ಹೃದ್ರೋಗದ  ಅಪಾಯ ಹೆಚ್ಚಾಗುತ್ತದೆ. 

2 /5

ಹೆಚ್ಚು ಕರಿದ ಆಹಾರವನ್ನು ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಅಪಾಯ  ಹೆಚ್ಚುತ್ತದೆ. ಏಕೆಂದರೆ ಮಾರುಕಟ್ಟೆಯಲ್ಲಿ ಮಾರಾಟವಾಗುವ ಹೆಚ್ಚಿನ ಆಹಾರಗಳು ಎಣ್ಣೆಯುಕ್ತವಾಗಿರುತ್ತವೆ. ಈ ಎಣ್ಣೆಗಳಲ್ಲಿ ಸ್ಯಾಚುರೇಟೆಡ್ ಕೊಬ್ಬಿನಂಶ ಹೆಚ್ಚಿರುತ್ತದೆ. ಇದು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಉಂಟುಮಾಡುತ್ತದೆ. ದೇಹದಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಇದೆಯೇ ಎನ್ನುವುದನ್ನು ಪತ್ತೆಹಚ್ಚಲು ಲಿಪಿಡ್ ಪ್ರೊಫೈಲ್ ಪರೀಕ್ಷೆಯನ್ನು ಮಾಡಲಾಗುತ್ತದೆ.   

3 /5

ಅಧಿಕ ಕೊಲೆಸ್ಟ್ರಾಲ್‌ನಿಂದಕೈಯಲ್ಲಿ ತೀವ್ರವಾದ ನೋವು ಾಗಿ, ಹೃದಯವು ರಕ್ತವನ್ನು ಸರಿಯಾಗಿ ಪಂಪ್ ಮಾಡಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ ಕೈಯಲ್ಲಿ ರಕ್ತ ಪೂರೈಕೆಯು ಕಡಿಮೆಯಾಗುತ್ತದೆ. ಇದರಿಂದಾಗಿ ಕೈಯಲ್ಲಿ ನೋವು ಪ್ರಾರಂಭವಾಗುತ್ತದೆ. ಕೈಯಲ್ಲಿ ತೀವ್ರವಾದ ನೋವು  ಕಾಣಿಸಿಕೊಂಡರೆ ಅದನ್ನು ನಿರ್ಲಕ್ಷಿಸಬೇಡಿ.  

4 /5

ಕೈಯ ರಕ್ತನಾಳಗಳಲ್ಲಿ ರಕ್ತದ ಪೂರೈಕೆ ಕಡಿಮೆಯಾಗುವ ಕಾರಣ, ನೋವಿನ ಜೊತೆಗೆ ಕೈ ಆಗಾಗ ಮರಗಟ್ಟಿದಂತೆ ಆಗುತ್ತದೆ.  ಹೀಗಾಗುತ್ತಿದ್ದರೆ, ತಕ್ಷಣ ಎಚ್ಚೆತ್ತುಕೊಳ್ಳಬೇಕು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಪರೀಕ್ಷಿಸಬೇಕು.

5 /5

ಕೈಯಲ್ಲಿ ರಕ್ತ ಪೂರೈಕೆ ಸರಿಯಾಗಿ ಆಗುತ್ತಿದ್ದರೆ, ಉಗುರುಗಳ ಬಣ್ಣವು ತಿಳಿ ಕೆಂಪು ಅಥವಾ ಗುಲಾಬಿ ಬಣ್ಣದ್ದಾಗಿರುತ್ತದೆ. ಆದರೆ ಕೊಲೆಸ್ಟ್ರಾಲ್ ಮಟ್ಟ  ಹೆಚ್ಚಾದಾಗ ಉಗುರುಗಳ ಜೊತೆಗೆ ಚರ್ಮದ ಬಣ್ಣವೂ ಬದಲಾಗಲು  ಆರಂಭವಾಗುತ್ತದೆ. ಉಗುರುಗಳ ಬಣ್ಣವೂ ಬದಲಾಗುತ್ತಿದ್ದರೆ ಅದನ್ನು ಎಂದಿಗೂ ನಿರ್ಲಕ್ಷಿಸಬೇಡಿ.