ಹೃದಯಾಘಾತವಾಗುವ ಒಂದು ವಾರಕ್ಕೂ ಮುನ್ನ ಈ 5 ಲಕ್ಷಣಗಳು ಕಾಣಿಸಿಕೊಳ್ಳುತ್ತವೆ..! ನಿರ್ಲಕ್ಷಿಸಿದರೇ ಅಪಾಯ ಕಟ್ಟಿಟ್ಟ ಬುತ್ತಿ!!

heart Attack Symtoms: ಕೊರೊನಾ ನಂತರ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವವರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಹೃದ್ರೋಗಗಳನ್ನು ಮೊದಲೇ ಪತ್ತೆ ಹಚ್ಚಿದರೆ ಜೀವ ಉಳಿಸಬಹುದು ಎನ್ನುತ್ತಾರೆ ತಜ್ಞರು. 
 

1 /6

ಈ ಹೃದಯಾಘಾತಕ್ಕು ಮುನ್ನ ದೇಹವು ಈ ಬಗ್ಗೆ ನಮ್ಮನ್ನು ಎಚ್ಚರಿಸುತ್ತದೆ. ಇವುಗಳ ಆಧಾರದಲ್ಲಿ ಜಾಗರೂಕರಾಗಿದ್ದರೆ ಸಮಸ್ಯೆಯಿಂದ ಹೊರಬರಬಹುದು. ಹೃದಯಾಘಾತವಾಗುವ ಒಂದು ವಾರದ ಮೊದಲು ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎನ್ನುತ್ತಾರೆ ತಜ್ಞರು.   

2 /6

 ಹೃದಯಾಘಾತವಾಗುವ ಒಂದು ವಾರ ಮೊದಲು ಎದೆನೋವು ಬರುತ್ತದೆ. ಆದರೆ ಸಾಮಾನ್ಯವಾಗಿ ಅಸಿಡಿಟಿಯಂತಹ ಸಮಸ್ಯೆಗಳು ಬಂದಾಗ ಎದೆನೋವು ಸಹ ಹೆಚ್ಚಾಗುತ್ತದೆ.. ಆದರೆ ಹೃದಯಾಘಾತದ ಸಮಯದಲ್ಲಿ ಬರುವ ಎದೆ ನೋವು ತುಂಬಾ ಅಸಹನೀಯವಾಗಿಸುತ್ತದೆ.   

3 /6

 ಹೃದಯಾಘಾತಕ್ಕೆ ಮುನ್ನ ಕಂಡುಬರುವ ಲಕ್ಷಣಗಳಲ್ಲಿ ಭುಜ ಮತ್ತು ತೋಳುಗಳಲ್ಲಿ ನೋವು ಕೂಡ ಕಾಣಿಸಬಹುದು ಎನ್ನುತ್ತಾರೆ ತಜ್ಞರು. ಎಡ ಭುಜದ ಮೇಲ್ಭಾಗದಲ್ಲಿ ತೀವ್ರವಾದ ನೋವು ಕಂಡುಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ ಮತ್ತು ಸಂಬಂಧಿತ ಪರೀಕ್ಷೆಗಳಿಗೆ ಒಳಗಾಗಬೇಕು ಎಂದು ತಜ್ಞರು ಹೇಳುತ್ತಾರೆ.  

4 /6

 ಕೆಲವು ಸಂದರ್ಭಗಳಲ್ಲಿ ಅಂಗೈ ಹಾಗೂ ಕೈಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಅಸಹನೀಯ ನೋವು ಒಂದು ವಾರಕ್ಕಿಂತ ಹೆಚ್ಚು ಕಾಲ ಇದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಸಂಬಂಧಿತ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಉತ್ತಮ.  

5 /6

 ಹೃದಯಾಘಾತಕ್ಕೂ ಬೆನ್ನು ನೋವಿಗೂ ಸಂಬಂಧವಿದೆ ಎನ್ನುತ್ತಾರೆ ತಜ್ಞರು. ಯಾವುದೇ ಶ್ರಮವಿಲ್ಲದೇ ಬೆನ್ನು ನೋವಿನಿಂದ ಬಳಲುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು.  

6 /6

 ದವಡೆಯಲ್ಲಿ ನೋವು ಹೃದಯಾಘಾತಕ್ಕೆ ಮುಂಚಿತವಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ. ವಿಶೇಷವಾಗಿ ಎಡ ದವಡೆಯಲ್ಲಿ ಹಠಾತ್ ನೋವು ಕಂಡುಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಸಂಬಂಧಿತ ಪರೀಕ್ಷೆಗಳಿಗೆ ಒಳಗಾಗಲು ತಜ್ಞರು ಸಲಹೆ ನೀಡುತ್ತಾರೆ.