Asia Cup 2023, Team India enters Final: ಏಷ್ಯಾ ಕಪ್ 2023 ರಲ್ಲಿ ಮಂಗಳವಾರ, ಸೂಪರ್-4 ಪಂದ್ಯದಲ್ಲಿ ಭಾರತವು ಶ್ರೀಲಂಕಾವನ್ನು 41 ರನ್’ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಭಾರತಕ್ಕೆ ಗೆಲುವು ದಾಖಲಿಸುವುದು ಅಷ್ಟು ಸುಲಭವಾಗಿರಲಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಶ್ರೀಲಂಕಾವನ್ನು ಸೋಲಿಸುವ ಮೂಲಕ ಭಾರತ 11ನೇ ಬಾರಿ ಏಷ್ಯಾಕಪ್’ನಲ್ಲಿ ಫೈನಲ್ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಭಾರತಕ್ಕೆ ಗೆಲುವು ದಾಖಲಿಸುವುದು ಅಷ್ಟು ಸುಲಭವಾಗಿರಲಿಲ್ಲ. ಆದರೆ 5 ತಿರುವುಗಳು ಟೀಂ ಇಂಡಿಯಾಗೆ ಗೆಲುವು ತಂದುಕೊಟ್ಟಿತ್ತು. ಇಲ್ಲದಿದ್ದರೆ, ಈ ವೇಳೆಗೆ ಶ್ರೀಲಂಕಾ ಗೆಲುವಿನತ್ತ ಮುಖಮಾಡುತ್ತಿತ್ತೇನೋ…
ಈ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ರೋಹಿತ್ ಶರ್ಮಾ 48 ಎಸೆತಗಳಲ್ಲಿ 53 ರನ್ ಗಳಿಸಿದ್ದರು. ರೋಹಿತ್ ಶರ್ಮಾ ಅವರ ಸ್ಫೋಟಕ ಇನ್ನಿಂಗ್ಸ್’ನಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್‌ಗಳು ಸೇರಿದ್ದವು. ನಿಜವಾದ ಅರ್ಥದಲ್ಲಿ ಹೇಳಬೇಕೆಂದರೆ, ರೋಹಿತ್ ಶರ್ಮಾ ಒಂದು ಪ್ರಮುಖ ಕ್ಷಣದಲ್ಲಿ ಈ ಅರ್ಧಶತಕವನ್ನು ಗಳಿಸುವ ಮೂಲಕ ಟೀಮ್ ಇಂಡಿಯಾದ ಗೆಲುವಿನ ಅಡಿಪಾಯವನ್ನು ಹಾಕಿದರು. ಒಂದು ವೇಳೆ ಇತರರಂತೆ ರೋಹಿತ್ ಶರ್ಮಾ ಬೇಗ ಔಟಾಗಿದ್ದರೆ ಭಾರತದ ಇನ್ನಿಂಗ್ಸ್ 150 ರನ್’ಗಳಿಗೆ ಕುಸಿಯಬಹುದಿತ್ತು.
ಟೀಂ ಇಂಡಿಯಾ ತನ್ನ ಇನ್ನಿಂಗ್ಸ್’ನಲ್ಲಿ 91 ರನ್ ಕಲೆ ಹಾಕಿದ್ದಾಗ 3 ವಿಕೆಟ್’ಗಳನ್ನು ಕಳೆದುಕೊಂಡಿತ್ತು. ಆ ನಿರ್ಣಾಯಕ ಕ್ಷಣದಲ್ಲಿ ಕೆಎಲ್ ರಾಹುಲ್ ಮತ್ತು ಇಶಾನ್ ಕಿಶನ್ ನಾಲ್ಕನೇ ವಿಕೆಟ್’ಗೆ 63 ರನ್‌ಗಳ ಪ್ರಮುಖ ಜೊತೆಯಾಟವನ್ನು ಆಡಿದರು. ಪಾಕಿಸ್ತಾನ ವಿರುದ್ಧ ಅಜೇಯ ಶತಕ ಸಿಡಿಸಿದ ಕೆಎಲ್ ರಾಹುಲ್ (39) ಮತ್ತು ಇಶಾನ್ ಕಿಶನ್ (33) ಶ್ರೀಲಂಕಾ ವಿರುದ್ಧ ನಾಲ್ಕನೇ ವಿಕೆಟ್’ಗೆ 89 ಎಸೆತಗಳಲ್ಲಿ 63 ರನ್’ಗಳ ಜೊತೆಯಾಟ ಆಡುವ ಮೂಲಕ ಪಂದ್ಯದಲ್ಲಿ ಪುನರಾಗಮನಕ್ಕೆ ಪ್ರಯತ್ನಿಸಿದರು.
ಕೆಳ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್ ಅವರ ಸ್ಫೋಟಕ ಬ್ಯಾಟಿಂಗ್ ಕೂಡ ಟೀಂ ಇಂಡಿಯಾ ಗೆಲುವಿನಲ್ಲಿ ದೊಡ್ಡ ತಿರುವು ನೀಡಿತು. ಅಕ್ಷರ್ ಪಟೇಲ್ 36 ಎಸೆತಗಳಲ್ಲಿ 26 ರನ್’ಗಳ ಮಹತ್ವದ ಇನಿಂಗ್ಸ್ ಆಡಿದರು. ಈ ಅವಧಿಯಲ್ಲಿ 1 ಸಿಕ್ಸರ್ ಬಾರಿಸಿದ್ದು, ಅಂತಿಮವಾಗಿ ಭಾರತದ ಸ್ಕೋರ್’ನ್ನು 213 ರನ್ ಗಳಿಗೆ ಕೊಂಡೊಯ್ದರು.
ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಅವರ ಬೌಲಿಂಗ್ ಟೀಮ್ ಇಂಡಿಯಾದ ಗೆಲುವಿಗೆ ತಂದುಕೊಡುವುದರಲ್ಲಿ ಪಾತ್ರವಹಿಸಿತು. ಬುಮ್ರಾ 2 ಮತ್ತು ಜಡೇಜಾ ತಲಾ 2 ವಿಕೆಟ್ ಕಬಳಿಸಿದ್ದರು.
ಕುಲದೀಪ್ ಯಾದವ್ ಶ್ರೀಲಂಕಾ ವಿರುದ್ಧ ಬೌಲಿಂಗ್ ಮಾಡಿ 9.3 ಓವರ್ ಗಳಲ್ಲಿ 43 ರನ್ ನೀಡಿ 4 ವಿಕೆಟ್ ಪಡೆದರು. ಕುಲದೀಪ್ ಯಾದವ್ ಅವರ ಈ ಕೊಡುಗೆ ಇಲ್ಲದಿದ್ದರೆ, ಭಾರತ ಗೆಲ್ಲಲು ಸಾಧ್ಯವೇ ಇರಲಿಲ್ಲ.