ಡಯಾಬಿಟೀಸ್ ಇದ್ದಾಗ ಕಾಣಿಸಿಕೊಳ್ಳುತ್ತದೆ ಹೊಟ್ಟೆಗೆ ಸಂಬಂಧಿಸಿದ ಈ ಸಮಸ್ಯೆಗಳು

ಮಧುಮೇಹವು ಕರುಳಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ, ಇದು ನರಗಳ ಕಾರ್ಯ, ಪಾದಗಳು, ಚರ್ಮ ಮತ್ತು ಮೆದುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
 

ಬೆಂಗಳೂರು : ಮಧುಮೇಹವು ದೇಹದ ಅನೇಕ ಭಾಗಗಳ ಮೇಲೆ ಏಕಕಾಲದಲ್ಲಿ ಪರಿಣಾಮ ಬೀರುತ್ತವೆ. ಉದಾಹರಣೆಗೆ, ಮಧುಮೇಹವು ಕರುಳಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ, ಇದು ನರಗಳ ಕಾರ್ಯ, ಪಾದಗಳು, ಚರ್ಮ ಮತ್ತು ಮೆದುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಇದು ಹೊಟ್ಟೆಯ ಮೇಲೆ ಪರಿಣಾಮ ಬೀರುತ್ತದೆ. ಹೌದು, ಮಧುಮೇಹ ರೋಗಿಗಳಿಗೆ ಜೀರ್ಣಕಾರಿ ಸಮಸ್ಯೆಗಳು ಹೆಚ್ಚು ಪರಿಣಾಮ ಬೀರುತ್ತವೆ. ಇದಲ್ಲದೆ, ಇದು ಯಕೃತ್ತು, ಮೂತ್ರಪಿಂಡ ಮತ್ತು ಮೇದೋಜ್ಜೀರಕ ಗ್ರಂಥಿಯ ಸಮಸ್ಯೆಗಳನ್ನು  ಕೂಡಾ ಉಂಟು ಮಾಡುತ್ತದೆ. 

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

1 /4

ಗ್ಯಾಸ್ಟ್ರೋಪರೆಸಿಸ್ ಎನ್ನುವುದು ಹೊಟ್ಟೆಯಲ್ಲಿರುವ ಸ್ನಾಯುಗಳ ಸಾಮಾನ್ಯ ಚಲನೆಯ ಮೇಲೆ ಪರಿಣಾಮ ಬೀರುವ ಸ್ಥಿತಿಯಾಗಿದೆ. ಹೊಟ್ಟೆಯ ಸ್ನಾಯುಗಳು ಬಲವಾಗಿದ್ದಾಗ, ಅವು ಸಂಕೋಚನಗಳನ್ನು ಉತ್ಪಾದಿಸುವ ಮೂಲಕ ಆಹಾರವನ್ನು ಮುಂದಕ್ಕೆ ಚಲಿಸುತ್ತವೆ. ಆದರೆ  ಗ್ಯಾಸ್ಟ್ರೋಪರೆಸಿಸ್ ಹೊಂದಿದ್ದರೆ, ನಿಮ್ಮ ಹೊಟ್ಟೆಯ ಚಲನೆಯು ನಿಧಾನಗೊಳ್ಳುತ್ತದೆ ಅಥವಾ ಕೆಲಸ ಮಾಡುವುದಿಲ್ಲ, ಇದರಿಂದಾಗಿ ನಿಮ್ಮ ಹೊಟ್ಟೆ ಸರಿಯಾಗಿ ಖಾಲಿಯಾಗುವುದಿಲ್ಲ. ಇದು ಸಕ್ಕರೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಜೊತೆಗೆ, ಇದು ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತದೆ. ವಾಕರಿಕೆ, ವಾಂತಿ ಮತ್ತು ಹೊಟ್ಟೆ ನೋವನ್ನು ಉಂಟುಮಾಡಬಹುದು.   

2 /4

ಆಸಿಡ್ ರಿಫ್ಲಕ್ಸ್ ಸಮಸ್ಯೆಯಲ್ಲಿ, ಹೊಟ್ಟೆಯಲ್ಲಿರುವ ಹೈಡ್ರೋಕ್ಲೋರಿಕ್ ಆಮ್ಲವು ನಿಯಮಿತವಾಗಿ ಖಾಲಿಯಾಗುವುದಿಲ್ಲ. ಪದೇ ಪದೇ ಬಾಯಿಗೆ ಬರುತ್ತದೆ. ಇದು ನಿಮ್ಮ ಅನ್ನನಾಳವನ್ನು ಹಾನಿಗೊಳಿಸುತ್ತದೆ ಮತ್ತು ಇದು ಆಸಿಡ್ ರಿಫ್ಲಕ್ಸ್‌ಗೆ ಕಾರಣವಾಗಬಹುದು. ಇದರಿಂದ ಹೊಟ್ಟೆಯಲ್ಲಿ ಅಸಿಡಿಟಿ ಮತ್ತು ಗ್ಯಾಸ್ ಸಮಸ್ಯೆ ಉಳಿಯುತ್ತದೆ. ಇದರ ಜೊತೆಗೆ, ಇದು ಹೈಪರ್ಗ್ಲೈಸೀಮಿಯಾ, ಎದೆ ನೋವು  ಮುಂತಾದ ಸಮಸ್ಯೆಗಳನ್ನು ಉಂಟುಮಾಡಬಹುದು. 

3 /4

ಮಧುಮೇಹ ಹೊಂದಿರುವ ರೋಗಿಗಳು ಹೆಚ್ಚಾಗಿ ಮಲಬದ್ಧತೆಯ ಸಮಸ್ಯೆಯನ್ನು ಹೊಂದಿರುತ್ತಾರೆ. ಮಧುಮೇಹವು ಚಯಾಪಚಯವನ್ನು ನಿಧಾನಗೊಳಿಸುತ್ತದೆ ಮತ್ತು ಕರುಳಿನ ಚಲನೆಯ ಮೇಲೆ ಸಹ ಪರಿಣಾಮ ಬೀರುತ್ತದೆ. ಇದರಿಂದ ಕರುಳಿನ ಚಲನೆ ಕಷ್ಟವಾಗುತ್ತದೆ ಮತ್ತು ಮಲಬದ್ಧತೆಯ ಸಮಸ್ಯೆ ಇರುತ್ತದೆ. 

4 /4

ಡಯಾಬಿಟಿಕ್ ಎಂಟರೊನ್ಯೂರೋಪತಿ ಕರುಳಿನಲ್ಲಿರುವ ನರಗಳಿಗೆ ಹಾನಿಯನ್ನುಂಟುಮಾಡುತ್ತದೆ. ಇದು ಮಲಬದ್ಧತೆ ಮತ್ತು ಅತಿಸಾರದಂತಹ IBS ನ ವಿಶಿಷ್ಟ ಲಕ್ಷಣಗಳನ್ನು  ಹೊಂದಿರುತ್ತದೆ. ರಕ್ತದಲ್ಲಿನ ಗ್ಲೂಕೋಸ್‌ನ ಮಟ್ಟವು ವಿಪರೀತವಾದಾಗ, ಗ್ಲೂಕೋಸ್ ರಕ್ತನಾಳಗಳಲ್ಲಿ ಸಂಗ್ರಹವಾಗುತ್ತದೆ ಮತ್ತು ಈ ಜೀವಕೋಶಗಳೊಳಗೆ ಕರಗುವ ಸಿರಪ್‌ನಂತೆ ಆಗುತ್ತದೆ. ಇದು ದೀರ್ಘಕಾಲ ಉಳಿದಾಗ  ನರಗಳು ಸಾಯಲು ಪ್ರಾರಂಭಿಸುತ್ತವೆ ಮತ್ತು ಹೊಟ್ಟೆ ನೋವು, ಅಜೀರ್ಣದಂಥಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.