ಈ ರಾಶಿಯ ಹೆಣ್ಣು ಮಕ್ಕಳು ತಮ್ಮ ಪತಿಯ ಪಾಲಿಗೆ ಅದೃಷ್ಟವನ್ನೇ ಹೊತ್ತು ತರುತ್ತಾರೆ. ಅವರನ್ನು ಮದುವೆಯಾದ ನಂತರ ಗಂಡನ ಜೀವನವೇ ಬದಲಾಗುತ್ತದೆ.
ಬೆಂಗಳೂರು : ಹುಟ್ಟಿದ ಸಮಯ ದಿನಕ್ಕೆ ಅನುಗುಣವಾಗಿ ನಕ್ಷತ್ರ, ರಾಶಿ ನಿರ್ಧಾರವಾಗುತ್ತದೆ. ರಾಶಿ ನಕ್ಷತ್ರಕ್ಕೆ ಅನುಗುಣವಾಗಿ ಶುಭ ಅಶುಭ ಫಲಗಳು ಗೋಚರಿಸುತ್ತವೆ. ಅದೃಷ್ಟ ದುರಾದೃಷ್ಟಗಳು ಕೂಡಾ ಇದೇ ಆಧಾರದ ಮೇಲೆ ಕೈ ಹಿಡಿಯುತ್ತದೆ. ಕೆಲವು ರಾಶಿಯ ಹೆಣ್ಣು ಮಕ್ಕಳು ಅದೃಷ್ಟದಾತೆಯರಾಗಿರುತ್ತಾರೆ. ಅವರನ್ನು ಮದುವೆಯಾದ ನಂತರ ಅವರ ಗಂಡನ ಜೀವನವೇ ಬದಲಾಗುತ್ತದೆ. ಈ ರಾಶಿಯ ಹೆಣ್ಣು ಮಕ್ಕಳು ತಮ್ಮ ಪತಿಯ ಪಾಲಿಗೆ ಅದೃಷ್ಟವನ್ನೇ ಹೊತ್ತು ತರುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಮೀನ ರಾಶಿ : ಮೀನ ರಾಶಿಯ ಹೆಣ್ಣು ಮಕ್ಕಳು ತುಂಬಾ ಅದೃಷ್ಟವಂತರು. ಈ ರಾಶಿಯವರು ಪ್ರಾಮಾಣಿಕರಾಗಿದ್ದು, ಬುದ್ಧಿವಂತರಾಗಿರುತ್ತಾರೆ. ಇವರು ಶ್ರಮಪಟ್ಟು ಕೆಲಸ ಮಾಡುತ್ತಾರೆ. ಈ ರಾಶಿಯಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಪತಿಯ ಪಾಲಿಗೆ ಅದೃಷ್ಟದಾತೆಯರಾಗಿರುತ್ತಾರೆ. ಮೀನ ರಾಶಿಯ ಹುಡುಗಿಯನ್ನು ಮದುವೆಯಾಗುವ ಹುಡುಗನ ಜೀವನ ವಿವಾಹವಾಗುತ್ತಿದ್ದಂತೆಯೇ ಬದಲಾಗಿ ಬಿಡುತ್ತದೆ. ಆ ವ್ಯಕ್ತಿಯು ಜೀವನದಲ್ಲಿ ವೇಗವಾಗಿ ಯಶಸ್ವಿಯಾಗುತ್ತಾನೆ.
ಕನ್ಯಾ ರಾಶಿ : ಕನ್ಯಾ ರಾಶಿಯ ಹೆಣ್ಣು ಮಕ್ಕಳು ತುಂಬಾ ಬುದ್ಧಿವಂತರು ಮತ್ತು ಪ್ರಬುದ್ಧರಾಗಿರುತ್ತಾರೆ. ಅವರು ಏನೇ ಕೆಲಸ ಮಾಡಬೇಕಾದರೂ ಬಹಳ ಎಚ್ಚರಿಕೆಯಿಂದ ಮಾಡುತ್ತಾರೆ. ಮಾತ್ರವಲ್ಲ ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ. ಸ್ವಭಾವತಃ ತುಂಬಾ ಪ್ರೀತಿ ಮತ್ತು ಕಾಳಜಿಯುಳ್ಳವರು. ಕನ್ಯಾ ರಾಶಿಯವರು ತನ್ನ ಪತಿ ಮತ್ತು ಕುಟುಂಬದ ಸದಸ್ಯರೆಲ್ಲರನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.
ಮಕರ ರಾಶಿ : ಮಕರ ರಾಶಿಯ ಮಹಿಳೆಯರು ಭಾವನಾತ್ಮಕ ಸ್ವಭಾವದವರು. ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಮಕರ ರಾಶಿಯವರು ಸವಾಲುಗಳಿಗೆ ಹೆದರುವುದಿಲ್ಲ, ಸವಾಲು ಸ್ವೀಕರಿಸಿ ಜಯ ಸಾಧಿಸಿ ಬಿಡುತ್ತಾರೆ. ಕೈ ಹಾಕಿದ ಕೆಲಸವನ್ನು ಪೂರ್ಣಗೊಳಿಸದೆ ಬಿಡುವುದಿಲ್ಲ. ಪತಿಯ ಪ್ರತಿಯೊಂದು ಕೆಲಸದಲ್ಲಿಯೂ ಬೆನ್ನೆಲುಬಾಗಿ ನಿಲ್ಲುತ್ತಾರೆ. ಪತಿಯ ಕನಸನ್ನು ನನಸಾಗಿಸಲು ಬಹಳ ಕಷ್ಟ ಪಡುತ್ತಾರೆ.
ತುಲಾ ರಾಶಿ : ತುಲಾ ರಾಶಿಯವರು ಕೈಗೆತ್ತಿಕೊಂಡ ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿಯೇ ತೀರುತ್ತಾರೆ. ಅವರು ತಮ್ಮ ಸಂಗಾತಿಯ ಯಶಸ್ಸಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಈ ರಾಶಿಯವರು ದೂರದೃಷ್ಟಿಯುಳ್ಳವರು ಮತ್ತು ಉತ್ತಮ ಸಲಹೆಗಳನ್ನು ನೀಡುತ್ತಾರೆ. ಪತಿಯ ಏಳಿಗೆಗಾಗಿ ಶಕ್ತಿ ಮೀರಿ ಶ್ರಮಿಸುತ್ತಾರೆ. (ಸೂಚನೆ : ಇಲ್ಲಿ ಒದಗಿಸಲಾದ ಲೇಖನವು ನಂಬಿಕೆ ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ದೃಢಪಡಿಸುವುದಿಲ್ಲ.)