"ಪರಿಪೂರ್ಣ ಮಹಿಳೆಯಾಗಲು ಮದುವೆ..." 2ನೇ ವಿವಾಹದ ಬಗ್ಗೆ ಕೊನೆಗೂ ಮಾತನಾಡಿದ ನಟಿ ಸಮಂತಾ: ಸ್ಟಾರ್‌ ನಿರ್ದೇಶಕನ ಜೊತೆ ಸ್ಯಾಮ್‌ ಕಲ್ಯಾಣ!

Samantha Ruth Prabhu: ಮದುವೆ ಮತ್ತು ಮಕ್ಕಳು ಮಾತ್ರ ಮಹಿಳೆಯನ್ನು ಸಂತೋಷಪಡಿಸುತ್ತವೆಯೇ ಎಂದು ಹೇಳುತ್ತಾ ಇದೇ ಮೊದಲ ಬಾರಿಗೆ ನಟಿ ಸಮಂತಾ ತಮ್ಮ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

1 /6

ಮದುವೆ ಮತ್ತು ಮಕ್ಕಳು ಮಾತ್ರ ಮಹಿಳೆಯನ್ನು ಸಂತೋಷಪಡಿಸುತ್ತವೆಯೇ ಎಂದು ಹೇಳುತ್ತಾ ಇದೇ ಮೊದಲ ಬಾರಿಗೆ ನಟಿ ಸಮಂತಾ ತಮ್ಮ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.  

2 /6

ತನ್ನ ವಿರುದ್ಧ ಬರುತ್ತಿರುವ ಟೀಕೆಗಳಿಗೆ ಬಲವಾದ ಪ್ರತ್ಯುತ್ತರ ನೀಡಿದ ಅವರು, ಮದುವೆಯಾಗಿ ಮಕ್ಕಳಿದ್ದರೆ ಮಾತ್ರ ಮಹಿಳೆ ಸಂಪೂರ್ಣ ಎಂಬ ಕಲ್ಪನೆಯನ್ನು ಹೋಗಲಾಡಿಸಲು ಬಯಸುತ್ತೇನೆ. ಈಗ ಒಂಟಿಯಾಗಿದ್ದರೂ ಸಂತೋಷವಾಗಿದ್ದೇನೆ ಎಂದು ಹೇಳಿದ್ದಾರೆ.  

3 /6

ಇತ್ತೀಚಿನ ಸಂದರ್ಶನವೊಂದರಲ್ಲಿ ಈ ವಿಷಯದ ಬಗ್ಗೆ ಮಾತನಾಡಿರುವ ಸಮಂತಾ, "ನನ್ನ ಜೀವನದಲ್ಲಿ ನಾನು ತುಂಬಾ ನೋಡಿದ್ದೇನೆ, ಈಗ ಅದನ್ನೆಲ್ಲಾ ಯೋಚಿಸಲು ಸಾಧ್ಯವಿಲ್ಲ. ನನಗೆ ದ್ವೇಷ ಅಂದ್ರೆ ಇಷ್ಟವಿಲ್ಲ. ದ್ವೇಷವೇ ಎಲ್ಲಾ ಕೆಡುಕಿನ ಮೂಲ. ದ್ವೇಷದಂತಹ ಕೆಟ್ಟ ಆಲೋಚನೆಗಳಿಗೆ ನಾನು ಅವಕಾಶ ನೀಡುವುದಿಲ್ಲ" ಎಂದು ಹೇಳಿದ್ದಾರೆ.  

4 /6

ಇದೇ ಸಂದರ್ಭದಲ್ಲಿ ನಾಗ ಚೈತನ್ಯ ಮತ್ತು ಶೋಭಿತಾ ವಿವಾಹದ ಬಗ್ಗೆ ಪ್ರಶ್ನೆ ಕೇಳಲಾಯಿತು. ʼನಾಗಚೈತನ್ಯ ಅವರು 2ನೇ ಮದುವೆಯಾಗಿರುವು ಬೇಸರವಾಗಿದೆಯೇ" ಎಂದಾಗ, "ಪರಿಪೂರ್ಣ ಮಹಿಳೆಯಾಗಲು ಮದುವೆಯಾಗಿ ಮಕ್ಕಳನ್ನು ಹೆರಬೇಕು ಎಂಬ ಗ್ರಹಿಕೆ ಇದೆ. ಹಾಗೆ ಮಾಡದಿದ್ದರೆ ಅವಳು ದುಃಖಿತಳಾಗುತ್ತಾಳೆ ಮತ್ತು ಒಂಟಿತನ ಅನುಭವಿಸುತ್ತಾಳೆ ಎಂದು ಭಾವಿಸುವುದು ತಪ್ಪು. ಅದರಲ್ಲಿ ಯಾವುದೇ ಸತ್ಯವಿಲ್ಲ" ಎಂದು ಸಮಂತಾ ದ್ವಂದ್ವದಂತೆ ಉತ್ತರಿಸಿದ್ದಾರೆ.  

5 /6

"ಒಬ್ಬ ಮಹಿಳೆ ತಾನು ಸ್ವಂತವಾಗಿ ಸಂತೋಷ ಮತ್ತು ಯಶಸ್ವಿಯಾಗಬಹುದು ಎಂಬುದನ್ನು ಒಪ್ಪಿಕೊಳ್ಳಬೇಕು. ನಾನು ನನ್ನ ಜೀವನದಲ್ಲಿ ಬಹಳಷ್ಟು ನೋಡಿದ್ದೇನೆ, ಈಗ ನನಗೆ ಎಲ್ಲವನ್ನೂ ಯೋಚಿಸಲು ಸಾಧ್ಯವಿಲ್ಲ. ನನಗೆ ದ್ವೇಷ ಅಂದ್ರೆ ಇಷ್ಟವಿಲ್ಲ. ದ್ವೇಷವೇ ಎಲ್ಲಾ ಕೆಡುಕಿನ ಮೂಲ. ದ್ವೇಷದಂತಹ ಕೆಟ್ಟ ಆಲೋಚನೆಗಳಿಗೆ ನಾನು ಅವಕಾಶ ನೀಡುವುದಿಲ್ಲ" ಎಂದು ಹೇಳಿರುವ ಸಮಂತಾ ಮಾತುಗಳು ಪ್ರಸ್ತುತ ವೈರಲ್ ಆಗುತ್ತಿವೆ.  

6 /6

ಅಂದಹಾಗೆ ಇತ್ತೀಚೆಗೆ ಪಿಕಲ್‌ ಬಾಲ್‌ ಟೂರ್ನಮೆಂಟ್‌ನಲ್ಲಿ 'ದಿ ಫ್ಯಾಮಿಲಿ ಮ್ಯಾನ್' ನಿರ್ದೇಶಕ ರಾಜ್‌ ನಿಡಿಮೋರು ಜೊತೆ ಸಮಂತಾ ಕಾಣಿಸಿಕೊಂಡಿದ್ದರು. ಈ ಫೋಟೋ ರಾಜ್‌ ಹಾಗೂ ಸಮಂತಾ ಡೇಟಿಂಗ್‌ ವದಂತಿಗೆ ಪುಷ್ಟಿ ನೀಡಿದಂತಿತ್ತು. ಕದ್ದು-ಮುಚ್ಚಿ ಓಡಾಡ್ತಿದ್ದಾರೆ ಅಂದವರಿಗೆ ಇನ್‌ಸ್ಟ್ರಾಗ್ರಾಮ್‌ ಖಾತೆಯಲ್ಲಿ ರಾಜ್‌ ಜೊತೆಗಿರುವ ಫೋಟೋವನ್ನು ಹಂಚಿಕೊಂಡು ಸಮಂತಾ ಉತ್ತರವನ್ನು ಕೊಟ್ಟಿದ್ದಾರೆ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.