Most Expensive Vegetable: ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಸಿರು ತರಕಾರಿಗಳ ಮೇಲೆ ಹೆಚ್ಚು ಗಮನ ಹರಿಸುತ್ತಾರೆ. ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಲು ಹೋದಾಗಲೂ ಉತ್ತಮ ತರಕಾರಿಗಳನ್ನು ಕಡಿಮೆ ಬೆಲೆಗೆ ಕೊಳ್ಳಬೇಕು ಎಂದು ನೋಡುತ್ತೇವೆ. ಆದರೆ ವಿಶ್ವದ ಅತ್ಯಂತ ದುಬಾರಿ ತರಕಾರಿ ಯಾವುದು ಮತ್ತು ಅದರ ಪ್ರಯೋಜನಗಳೇನು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಪ್ರಪಂಚದಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾಗುವ ತರಕಾರಿಯ ಹೆಸರೇನು ಎಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.
ವಿಶ್ವದ ಅತ್ಯಂತ ದುಬಾರಿ ತರಕಾರಿ ಯಾವುದು ಮತ್ತು ಅದರ ಪ್ರಯೋಜನಗಳೇನು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಪ್ರಪಂಚದಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾಗುವ ತರಕಾರಿಯ ಹೆಸರೇನು ಎಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.
ಈ ತರಕಾರಿಯ ಹೆಸರು ಹಾಪ್ ಶೂಟ್ಸ್. ಮಾಧ್ಯಮ ವರದಿಗಳ ಪ್ರಕಾರ, ಇದು ಮುಖ್ಯವಾಗಿ ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ಕಂಡುಬರುತ್ತದೆ. ಇದು ಸೆಣಬಿನ ಕುಟುಂಬ, ಕ್ಯಾನಬೇಸಿಯಲ್ಲಿ ಹೂಬಿಡುವ ಸಸ್ಯದ ಜಾತಿ ಎಂದು ಹೇಳಲಾಗುತ್ತದೆ. ಈ ತರಕಾರಿಯ ಸಸ್ಯವು ಮಧ್ಯಮ ವೇಗದಲ್ಲಿ 6 ಮೀ ಎತ್ತರಕ್ಕೆ ಬೆಳೆಯುತ್ತದೆ ಮತ್ತು 20 ವರ್ಷಗಳವರೆಗೆ ಬದುಕಬಲ್ಲದು.
ಹಾಪ್ ಶೂಟ್ಸ್ ಕೊಯ್ಲಿಗೆ ಸಿದ್ಧವಾಗಲು ಮೂರು ವರ್ಷಗಳು ಬೇಕಾಗುತ್ತದೆ. ಈ ಸಸ್ಯವನ್ನು ಕೊಯ್ಲು ಮಾಡಲು ಸಾಕಷ್ಟು ದೈಹಿಕ ಶ್ರಮ ಬೇಕಾಗುತ್ತದೆ, ಏಕೆಂದರೆ ಸಸ್ಯದ ಸಣ್ಣ ಹಸಿರು ತುದಿಗಳನ್ನು ಕೀಳುವಾಗ ಹೆಚ್ಚಿನ ಕಾಳಜಿ ಬೇಕಾಗುತ್ತದೆ. ಬಹುಶಃ ಇದರ ಬೆಲೆ ತುಂಬಾ ಹೆಚ್ಚಿರುವುದಕ್ಕೆ ಇದೇ ಕಾರಣ ಇರಬಹುದು. ಇದನ್ನು ವಿಶ್ವದ ಅತ್ಯಂತ ದುಬಾರಿ ತರಕಾರಿ ಎಂದು ಕರೆಯಲಾಗುತ್ತದೆ.
ಹಲವಾರು ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಈ ತರಕಾರಿಯ ಹೂವನ್ನು ಬಿಯರ್ ತಯಾರಿಸುವಾಗಲೂ ಬಳಸುತ್ತಾರೆ. ಬಿಯರ್ ತಯಾರಿಕೆಯಲ್ಲಿ ಇದನ್ನು ಸ್ಟೇಬಲ್ ಏಜೆಂಟ್ ಆಗಿ ಬಳಸಲಾಗುತ್ತದೆ.
ಈ ತರಕಾರಿ ಟಿಬಿ ವಿರುದ್ಧ ಪ್ರತಿಕಾಯಗಳನ್ನು ರಚಿಸುತ್ತದೆ ಎಂದು ವೈದ್ಯಕೀಯ ಅಧ್ಯಯನದಲ್ಲಿ ಬಹಿರಂಗಪಡಿಸಲಾಗಿದೆ. ಇದರೊಂದಿಗೆ, ಇದು ಪ್ಯಾನಿಕ್, ಆಂಕ್ಸೈಟಿ, ಟೆನ್ಶನ್, ಗೊಂದಲತೆ ಹೀಗೆ ಹಲವಾರು ಸಮಸ್ಯೆಗೆ ಪರಿಹಾರ ನೀಡುತ್ತದೆ.
ಈ ತರಕಾರಿಯ ಬೆಲೆಯ ಬಗ್ಗೆ ಹೇಳುವುದಾದರೆ, ಪ್ರತಿ ಕೆ.ಜಿ.ಗೆ 85 ಸಾವಿರದಿಂದ 1 ಲಕ್ಷ ರೂಪಾಯಿ ದರದಲ್ಲಿ ಮಾರಾಟವಾಗುತ್ತದೆ. ಇದನ್ನು ಸಾಮಾನ್ಯವಾಗಿ ಭಾರತದಲ್ಲಿ ಬೆಳೆಸಲಾಗುವುದಿಲ್ಲ. ಹಿಮಾಚಲ ಪ್ರದೇಶದ ಹೊಲಗಳಲ್ಲಿ ಒಮ್ಮೆ ಪ್ರಯತ್ನಿಸಿ ನೆಟ್ಟರೂ ಹೆಚ್ಚಿನ ಯಶಸ್ಸು ಸಿಗಲಿಲ್ಲ. ಈ ತರಕಾರಿಯ ಬೆಲೆಯಲ್ಲಿ ದುಬಾರಿ ಬೈಕ್ ಮತ್ತು ಚಿನ್ನಾಭರಣ ಖರೀದಿಸಬಹುದು.