Thundertruck With Stunning Looks: ಕೇವಲ 3.5 ಸೆಕೆಂಡ್ ಗಳಲ್ಲಿ ಬಿರುಗಾಳಿಯಂತೆ ಚಲಿಸುತ್ತೆ ಈ Thundertruck, ಇಲ್ಲಿವೆ ಅದರ ಕೆಲ ಚಿತ್ರಗಳು

Thundertruck With Stunning Looks: 'ಬ್ಯಾಟ್ ಮ್ಯಾನ್' (Batman) ಚಿತ್ರಗಳಲ್ಲಿ ನೀವು ಒಂದಕ್ಕಿಂದ ಒಂದು ಅದ್ಭುತ ಮತ್ತು ಅತ್ಯಾಧುನಿಕ ವಾಹನಗಳನ್ನು ನೋಡಿರಬಹುದು. ಇವುಗಳಿಗೆ 'ಬ್ಯಾಟ್ ಮೊಬಿಲ್' ಎಂದು ಕರೆಯಲಾಗುತ್ತದೆ.  One EV ಎಂಬ ಈ ಪರಿಕಲ್ಪನೆಯು (One EV Concept) ಇದೀಗ ಜನರ ಗಮನ ಸೆಳೆದಿದೆ. 

Thundertruck With Stunning Looks: 'ಬ್ಯಾಟ್ ಮ್ಯಾನ್' (Batman) ಚಿತ್ರಗಳಲ್ಲಿ ನೀವು ಒಂದಕ್ಕಿಂದ ಒಂದು ಅದ್ಭುತ ಮತ್ತು ಅತ್ಯಾಧುನಿಕ ವಾಹನಗಳನ್ನು ನೋಡಿರಬಹುದು. ಇವುಗಳಿಗೆ 'ಬ್ಯಾಟ್ ಮೊಬಿಲ್' ಎಂದು ಕರೆಯಲಾಗುತ್ತದೆ.  One EV ಎಂಬ ಈ ಪರಿಕಲ್ಪನೆಯು (One EV Concept) ಇದೀಗ ಜನರ ಗಮನ ಸೆಳೆದಿದೆ. ಈ ಎಲೆಕ್ಟ್ರಿಕ್ ಬ್ಯಾಟ್‌ಮೊಬಿಲ್‌ಗೆ (Electric Batmobile) 'ಥಂಡರ್‌ಟ್ರಕ್' (Thundertruck) ಎಂದು ಹೆಸರಿಸಲಾಗಿದೆ ಮತ್ತುಇದರಲ್ಲಿ 4 ಗಾಲಿಗಳ ಜೊತೆಗೆ 6 ಹೆಚ್ಚುವರಿ ಗಾಲಿಗಳನ್ನು  ಅಳವಡಿಸಲಾಗಿದೆ. ಸೌರಶಕ್ತಿಯಿಂದ ಈ ವಾಹನವನ್ನು ಚಾರ್ಜ್ ಮಾಡಲು, ಅದರ ಛಾವಣಿಯ ಮೇಲೆ ದೊಡ್ಡ ಗಾತ್ರದ ಸೌರ ಫಲಕವನ್ನು ಅಳವಡಿಸಲಾಗಿದೆ. ಈ ಪಿಕಪ್ ಟ್ರಕ್ ಒಂದೇ ಚಾರ್ಜ್‌ನಲ್ಲಿ 901 ಕಿಮೀ ವರೆಗೆ ಚಲಿಸುತ್ತದೆ ಮತ್ತು ಕೇವಲ 3.5 ಸೆಕೆಂಡುಗಳಲ್ಲಿ ಈ ಹೆವಿ ಟ್ರಕ್ 0-100 ಕಿಮೀ / ಗಂ ವೇಗವನ್ನು ಪಡೆಯಬಹುದು. ಈ ಕಾನ್ಸೆಪ್ಟ್ ಥಂಡರ್‌ಟ್ರಕ್ ಶಕ್ತಿಯುತ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ ಮತ್ತು ಇದು  800 ಅಶ್ವಶಕ್ತಿಯನ್ನು ಉತ್ಪತ್ತಿ ಮಾಡುತ್ತದೆ, ಆದರೆ  ಈ ಶಕ್ತಿಯು 6 ಬೈ  6 ಮೋಡ್‌ನಲ್ಲಿ 940 ಅಶ್ವಶಕ್ತಿಗೆ ಹೆಚ್ಚಾಗುತ್ತದೆ.

 

ಇದನ್ನೂ ಓದಿ-Ducati New Electric Bike: ಇನ್ಮುಂದೆ ದುಕಾತಿ ಸೂಪರ್ ಬೈಕ್ ಸದ್ದು ಕೇಳಲ್ಲ! Motoe ಟೆಸ್ಟಿಂಗ್ ಆರಂಭಿಸಿದ ಕಂಪನಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

1. ಜಬರ್ದಸ್ತ್ ಸ್ಟೈಲ್ ಮತ್ತು ವಿನ್ಯಾಸ - ಈ ಇಲೆಕ್ಟ್ರಿಕ್ ಪಿಕ್ ಅಪ್ ಟ್ರಕ್ ಗೆ ಜಬರ್ದಸ್ತ್ ಸ್ಟೈಲ್ ಹಾಗೂ ವಿನ್ಯಾಸ ನೀಡಲಾಗಿದೆ.

2 /4

2. ಬಿರುಗಾಳಿಯ ವೇಗ - ಕೇವಲ 3.5 ಸೆಕೆಂಡ್ ಗಳಲ್ಲಿ ಈ ಭಾರಿ ತೂಕ ಮತ್ತು ಗಾತ್ರದ ಟ್ರಕ್  0-100 ಕಿ.ಮೀ/ಗಂಟೆ ವೇಗವನ್ನು ಪಡೆಯಬಹುದು.

3 /4

3. ಈ ಟ್ರಕ್  ಮೇಲ್ಛಾವಣಿಯ ಮೇಲೆ ಸೋಲಾರ್ ಪ್ಯಾನೆಲ್  - ಈ ಪಿಕಪ್ ನ ಬ್ಯಾಟರಿ ಚಾರ್ಜ್ ಮಾಡಲು ಇದರ ಮೇಲ್ಛಾವಣಿಯ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸಲಾಗಿದೆ.

4 /4

4. ಒಂದೇ ಚಾರ್ಜ್ ನಲ್ಲಿ 901 ಕಿ.ಮೀ - ಈ ಪಿಕಪ್ ಗಾತ್ರದಲ್ಲಿ ಇಷ್ಟೊಂದು ದೊಡ್ಡದಾಗಿದ್ದರೂ ಕೂಡ ಒಂದೇ ಚಾರ್ಜ್ ನಲ್ಲಿ 901 ಕಿ.ಮೀ ಚಲಿಸುತ್ತದೆ.