Top Five 125cc Scooters: ಒಂದು ವೇಳೆ ನೀವೂ ಕೂಡ ಸ್ಕೂಟರ್ ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ, ಯಾವ ಸ್ಕೂಟರ್‌ನ ಹೆಸರು ನಿಮ್ಮ ಮನಸ್ಸಿನಲ್ಲಿ ಮೊದಲು ಮೂಡುತ್ತದೆ? ಬಹುಶಃ ಈ ಹೆಸರು ಹೋಂಡಾ ಆಕ್ಟಿವಾ ಅಥವಾ ಟಿವಿಎಸ್ ಜೂಪಿಟರ್ ಆಗಿರಬಹುದು.
Top Five 125cc Scooters: ಒಂದು ವೇಳೆ ನೀವೂ ಕೂಡ ಸ್ಕೂಟರ್ ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ, ಯಾವ ಸ್ಕೂಟರ್‌ನ ಹೆಸರು ನಿಮ್ಮ ಮನಸ್ಸಿನಲ್ಲಿ ಮೊದಲು ಮೂಡುತ್ತದೆ? ಬಹುಶಃ ಈ ಹೆಸರು ಹೋಂಡಾ ಆಕ್ಟಿವಾ ಅಥವಾ ಟಿವಿಎಸ್ ಜೂಪಿಟರ್ ಆಗಿರಬಹುದು. ಏಕೆಂದರೆ, ಏಕೆಂದರೆ ಕಳೆದ ಕೆಲ ತಿಂಗಳುಗಳಲ್ಲಿ ಈ ಸ್ಕೂಟರ್ ಗಳ ಮಾರಾಟ ಅದ್ಭುತವಾಗಿತ್ತು. ಕಳೆದ ತಿಂಗಳು ಹೋಂಡಾ ಆಕ್ಟಿವಾ ಹೆಚ್ಚು ಮಾರಾಟವಾಗುವ ಸ್ಕೂಟರ್ ಹೊರಹೊಮ್ಮಿದೆ. ಆದರೂ ಕೂಡ ಇಂದು ನಾವು ಕೇವಲ ಈ ಎರಡೂ ಸ್ಕೂಟರ್ ಗಳ ಬಗ್ಗೆ ಮಾತನಾಡುತ್ತಿಲ್ಲ. ಆದರೆ 125 ಸಿಸಿ ವಿಭಾಗದಲ್ಲಿ ಇಂತಹ ಒಟ್ಟು 5 ಸ್ಕೂಟರ್‌ಗಳ ಬಗ್ಗೆ ಮಾತನಾಡುತ್ತಿದ್ದು, ನೋಟದಲ್ಲಿ ಆಕರ್ಷಕವಾಗುವುದರ ಜೊತೆಗೆ ಮೈಲೇಜ್ ನಲ್ಲಿಯೂ ಕೂಡ ಉತ್ತಮವಾಗಿವೆ.
ಇದನ್ನೂ ಓದಿ-EPFO : PF ಖಾತೆದಾರರಿಗೆ ಸಿಹಿ ಸುದ್ದಿ : ತಕ್ಷಣ ನಿಮ್ಮ ಅಕೌಂಟ್ ಚೆಕ್ ಮಾಡಿ!
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
1. ಹೋಂಡಾ ಆಕ್ಟಿವಾ 123.9cc ಇಂಧನ ಇಂಜೆಕ್ಟೆಡ್ ಎಂಜಿನ್ ಅನ್ನು ಹೊಂದಿದೆ. ಇದು 8.29PS ಪವರ್ ಮತ್ತು 10.3Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸೈಲೆಂಟ್ ಸ್ಟಾರ್ಟಿಂಗ್ ಆಪರೇಶನ್ ಗಾಗಿ ಇದು ACG ಸ್ಟಾರ್ಟರ್ ಜನರೇಟರ್ ಅನ್ನು ಹೊಂದಿದೆ. ಇದರಲ್ಲಿ ಸ್ಟಾರ್ಟ್-ಸ್ಟಾಪ್ ವ್ಯವಸ್ಥೆಯೂ ಲಭ್ಯವಿದೆ. ಹೋಂಡಾ ಆಕ್ಟಿವಾ 125 ಬೆಲೆ ರೂ.74,898 ರಿಂದ ಆರಂಭಗೊಳ್ಳುತ್ತದೆ.
2. TVS ಜುಪಿಟರ್ 125, 124.8cc ಸಿಂಗಲ್-ಸಿಲಿಂಡರ್, ಎರಡು-ವಾಲ್ವ್ ಎಂಜಿನ್ ಅನ್ನು ಹೊಂದಿದೆ, ಇದು 6000rpm ನಲ್ಲಿ 8.3PS ಪವರ್ ಮತ್ತು 4500rpm ನಲ್ಲಿ 10.5Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಬೆಲೆ ರೂ.81,275 ರಿಂದ ಆರಂಭವಾಗುತ್ತದೆ.
3. TVS Ntorq 124.8cc ಸಿಂಗಲ್ ಸಿಲಿಂಡರ್ ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಅನ್ನು ಪಡೆಯುತ್ತದೆ. ಈ ಎಂಜಿನ್ 9.38PS ಪವರ್ ಮತ್ತು 10.5Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ರೇಸ್ XP ರೂಪಾಂತರವು 10.2PS ಮತ್ತು 10.8Nm ಅನ್ನು ಟಾರ್ಕ್ ಉತ್ಪಾದಿಸುತ್ತದೆ. ಇದರ ಬೆಲೆ ರೂ.79956 ರಿಂದ ಆರಂಭವಾಗುತ್ತದೆ.
4. ಸುಜುಕಿ ಬರ್ಗ್‌ಮ್ಯಾನ್ ಬೆಲೆ ರೂ.82,700 ರಿಂದ ಆರಂಭವಾಗುತ್ತದೆ. ಇದು 124cc, ಸಿಂಗಲ್ ಸಿಲಿಂಡರ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಅನ್ನು ಪಡೆಯುತ್ತದೆ. ಇದು BS6 ಎಂಜಿನ್. ಇದು 8.7PS ಗರಿಷ್ಠ ಶಕ್ತಿ ಮತ್ತು 10Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
5. ಸುಜುಕಿ ಆಕ್ಸೆಸ್ 124cc ಸಿಂಗಲ್ ಸಿಲಿಂಡರ್ ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್‌ನೊಂದಿಗೆ ಬರುತ್ತದೆ. ಇದು BS6 ಎಂಜಿನ್. ಎಂಜಿನ್ ಕಾರ್ಯಕ್ಷಮತೆಯ ಬಗ್ಗೆ ಹೇಳುವುದಾದರೆ, ಇದು 8.7PS ಪವರ್ ಮತ್ತು 10Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸುಜುಕಿ ಆಕ್ಸೆಸ್‌ನ ಆರಂಭಿಕ ಬೆಲೆ 77,600 ರೂ.