ವರಮಹಾಲಕ್ಷ್ಮಿ ವ್ರತ ಮಾಡುತ್ತಿದ್ದೀರಾ..? ಹಾಗಿದ್ರೆ ಈ ಮಂತ್ರಗಳನ್ನು ಜಪಿಸಿ, ಲಕ್ಷ್ಮಿ ಕೃಪೆಗೆ ಪಾತ್ರರಾಗಿ

Varamahalakshmi 2024 : ವರಲಕ್ಷ್ಮಿ ವ್ರತವನ್ನು ಮುತ್ತೈದೆಯರು ಶ್ರಾವಣ ಮಾಸದಲ್ಲಿ ಮಾಡುತ್ತಾರೆ. ಈ ವ್ರತದಲ್ಲಿ ಯಾವ ರೀತಿಯ ಮಂತ್ರಗಳನ್ನು ಪಠಿಸಬೇಕು ಎಂಬುದು ಹಲವರಿಗೆ ಗೊತ್ತಿಲ್ಲ.. ಬನ್ನಿ ಈ ಕುರಿತು ತಿಳಿಯೋಣ..
 

1 /8

ಓಂ ಲಕ್ಷ್ಮೀ ನಮಃ : ಈ ಮಂತ್ರವನ್ನು ಜಪಿಸಿದರೆ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ. ಅಲ್ಲದೆ ಆಹಾರ ಮತ್ತು ಹಣದ ಕೊರತೆ ಎಂದಿಗೂ ಇರುವುದಿಲ್ಲ. ವರಮಹಾಲಕ್ಷ್ಮಿ ವ್ರತದ ದಿನ ಈ ಮಂತ್ರವನ್ನು ಜಪಿಸಿದರೆ ದುಪ್ಪಟ್ಟು ಪೂಜೆಯ ಫಲ ಸಿಗುತ್ತದೆ  

2 /8

ಲಕ್ಷ್ಮೀ ನಾರಾಯಣ ನಮಃ: ಈ ಮಂತ್ರವನ್ನು ಪಠಿಸುವುದರಿಂದ ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ. ವಿಶೇಷವಾಗಿ ವರಮಹಾಲಕ್ಷ್ಮಿ ವ್ರತದ ದಿನ ಈ ಮಂತ್ರವನ್ನು ಜಪಿಸುವುದು ತುಂಬಾ ಒಳ್ಳೆಯದರು.   

3 /8

ಧನಾಯ ನಮಃ : ಈ ಮಂತ್ರವನ್ನು ಪಠಿಸುವುದರಿಂದ ಸಂಪತ್ತು ಬರುತ್ತದೆ. ಈ ಮಂತ್ರವನ್ನು ಶುಕ್ರವಾರದಂದು ತಾಯಿಗೆ ಕಮಲದ ಹೂವಿನ ಮಾಲೆ ಅರ್ಪಿಸಿ ನಂತರ ಪಠಣ ಮಾಡಬೇಕು.   

4 /8

ಧನಾಯ ನಮೋ ನಮಃ : ಈ ಲಕ್ಷ್ಮೀದೇವಿ ಮಂತ್ರವನ್ನು ಪ್ರತಿದಿನ 11 ಬಾರಿ ಜಪಿಸಬೇಕು. ಇದು ವ್ಯಕ್ತಿಯ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.   

5 /8

ಓಂ ಹ್ರೀಂ ಹ್ರೀಂ ಶ್ರೀ ಲಕ್ಷ್ಮೀ ವಾಸುದೇವಾಯ ನಮಃ : ಯಾವುದೇ ಶುಭ ಕಾರ್ಯವನ್ನು ಮಾಡುವ ಮೊದಲು ಈ ಮಂತ್ರವನ್ನು ಪಠಿಸಬೇಕು. ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ.  

6 /8

ಓಂ ಶ್ರೀಂ ಹ್ರೀಂ ಕ್ಲೀಂ ಶ್ರೀ ಸಿದ್ಧ ಲಕ್ಷ್ಮ್ಯೈ ನಮಃ : ಇದು ಅದ್ಭುತವಾದ ಲಕ್ಷ್ಮಿ ಮಂತ್ರವಾಗಿದೆ, ಈ ಮಂತ್ರವನ್ನು ಪಠಿಸುವುದರಿಂದ ವ್ಯಕ್ತಿಗೆ ಆರೋಗ್ಯ, ದೀರ್ಘಾಯುಷ್ಯ ಮತ್ತು ಸಂಪತ್ತು ಬರುತ್ತದೆ ಎಂದು ನಂಬಲಾಗಿದೆ.    

7 /8

ಪದ್ಮನೇ ಪದ್ಮ ಪದ್ಮಾಕ್ಷಿ ಪದ್ಮ ಸಂಭವ್ಯೇ ತನ್ಮೇ ಭಜಸಿ ಪದ್ಮಾಕ್ಷಿ ಯೇನ ಸೌಖ್ಯಂ ಲಿಹ್ಯಾಂ: ಲಕ್ಷ್ಮಿ ಈ ಮಂತ್ರವನ್ನು ಪಠಿಸುವುದರಿಂದ ಮನೆಯಲ್ಲಿ ಆಹಾರ ಮತ್ತು ಹಣದ ಕೊರತೆ ಇರುವುದಿಲ್ಲ. ಅಮ್ಮನ ದಯೆ ಯಾವಾಗಲೂ ಇರುತ್ತದೆ.  

8 /8

ಸೂಚನೆ: ಈ ಲೇಖನವು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ, ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ನಿಮಗೆ ನೀಡಲಾಗಿದೆ. Zee Kannada News ಇದನ್ನು ಖಚಿತಪಡಿಸುವುದಿಲ್ಲ. ಇದು ಸಂಪೂರ್ಣ ಸತ್ಯ ಎಂದು ಹೇಳಲು ಯಾವುದೇ ವೈಜ್ಞಾನಿಕ ಪುರಾವೆಗಳೂ ಇಲ್ಲ.