Lakshmi Narayan Yog: ಶೀಘ್ರದಲ್ಲೇ ಮಂಗಳನ ಅಂಗಳದಲ್ಲಿ 'ಲಕ್ಷ್ಮಿನಾರಾಯಣ ಯೋಗ' ನಿರ್ಮಾಣ, 4 ಜಾತಕದವರಿಗೆ ಅಪಾರ ಧನಪ್ರಾಪ್ತಿಯ ಯೋಗ!

Lakshmi Narayan Yog 2023: ಶೀಘ್ರದಲ್ಲಿಯೇ ಮಂಗಳನ ಅಧಿಪತ್ಯದ ರಾಶಿಯಾಗಿರುವ ಮೇಷ ರಾಶಿಯಲ್ಲಿ ಬುದ್ಧನ ಗೋಚರ ನೆರವೇರಲಿದೆ. ಬುದ್ಧನ ಈ ಗೋಚರ ಮಾರ್ಚ್ 31 ರಂದು ಸಂಭವಿಸಲಿದೆ. ಆದರೆ ಮಾರ್ಚ್ 12 ರಂದು ಈಗಾಗಲೇ ಮೇಷ ರಾಶಿಯಲ್ಲಿ ವಿರಾಜಮಾನನಾಗಿರುವ ಕಾರಣ, ಮಾರ್ಚ್ 31 ರ ಬುಧ ಗೋಚರದಿಂದ ಮೇಷ ರಾಶಿಯಲ್ಲಿ ಲಕ್ಷ್ಮಿ ನಾರಾಯಣ ಯೋಗ ನಿರ್ಮಾಣಗೊಳ್ಳಲಿದೆ. ಈ ಯೋಗ 4 ರಾಶಿಗಳ ಜಾತಕದವರಿಗೆ ಅಪಾರ ಧನ ಪ್ರಾಪ್ತಿಯ ಯೋಗ ನಿರ್ಮಾಣ ಮಾಡಲಿದೆ. ಆ 4 ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
 

Lakshmi Narayan Yog 2023 In Aries: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿಗಳನ್ನು ಪರಿವರ್ತಿಸುವ ಮೂಲಕ ಶುಭ ಹಾಗೂ ಅಶುಭ ಯೋಗಗಳನ್ನು ರೂಪಿಸುತ್ತವೆ. ಬುಧ ಗ್ರಹ ಮಾರ್ಚ್ 31 ರಂದು ಮೇಷ ರಾಶಿಗೆ ಪ್ರವೇಶಿಸಲಿದೆ. ವೈದಿಕ ಜೋತಿಷ್ಯ ಪಂಚಾಂಗದ ಪ್ರಕಾರ ಮಾರ್ಚ್ 31, 2023 ರಂದು ಮಧ್ಯಾಹ್ನ 3 ಗಂಟೆ 1 ನಿಮಿಷಕ್ಕೆ ಬುಧ ಮೀನರಾಶಿಯಿಂದ ಹೊರಬಂದು ಮೇಷ ರಾಶಿಯನ್ನು ಪ್ರವೇಶಿಸಲಿದೆ. ಈ ರಾಶಿಯಲ್ಲಿ ಬುಧ ಜೂನ್ 1, 2023 ರ ಸಂಜೆ 7ಗಂಟೆ 58 ನಿಮಿಷದವರೆಗೆ ಇರಲಿದ್ದಾನೆ ಮತ್ತು ಬಳಿಕ ಆತ ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ.  ಆದರೆ, ಮೇಷ ರಾಶಿಯಲ್ಲಿ ಈಗಾಗಲೇ ರಾಹು ಹಾಗೂ ಶುಕ್ರರು ವಿರಾಜಮಾನರಾಗಿದ್ದಾರೆ. ಹೀಗಾಗಿ ಆ ರಾಶಿಯಲ್ಲಿ ತ್ರಿಗ್ರಹಿ ಯೋಗದ ಜೊತೆಗೆ ಬುಧ-ಶುಕ್ರರ ಮೈತ್ರಿಯಿಂದ ಲಕ್ಷ್ಮಿ ನಾರಾಯಣ ಯೋಗ ನಿರ್ಮಾಣಗೊಳ್ಳುತ್ತಿದೆ. ಇದರ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಜಾತಕದವರ ಮೇಲೆ ಬೀಳಲಿದೆ. ಆದರೆ 5 ರಾಶಿಗಳ ಜಾತಕದವರಿಗೆ ಈ ಅವಧಿಯಲ್ಲಿ ಆಕಸ್ಮಿಕ ಧನಲಾಭವಾಗಲಿದ್ದು, ಪ್ರತಿಯೊಂದು ಕ್ಷೇತ್ರದಲ್ಲಿ ಇವರಿಗೆ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ.  ಬನ್ನಿ ಆ ಅದೃಷ್ಟಶಾಲಿ ರಾಶಿಗಳು ರಾಶಿಗಳು ಯಾವುವು ತಿಳಿದುಕೊಳ್ಳೋಣ,  

 

ಇದನ್ನೂ ಓದಿ-ಮಂಗಳನ ಮನೆಯಲ್ಲಿ ಬುಧ, ಶುಕ್ರ ಹಾಗೂ ರಾಹು ಮೈತ್ರಿ, 4 ರಾಶಿಗಳ ಜನರಿಗೆ ಕಷ್ಟಕಾಲ... ಎಚ್ಚರ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

1. ಮೇಷ ರಾಶಿ: ನಿಮ್ಮ ರಾಶಿಯಲ್ಲಿಯೇ ಬುಧ-ಶುಕ್ರರ ಮೈತ್ರಿಯಿಂದ ಲಕ್ಷ್ಮಿನಾರಾಯಣ ಯೋಗ ನಿರ್ಮಾಣಗೊಳ್ಳುತ್ತಿದ್ದು ಈ ಯೋಗ ನಿಮ್ಮ ಪಾಲಿಗೆ ಇದು ಅತ್ಯಂತ ಮಂಗಳಕರ ಸಾಬೀತಾಗಲಿದೆ. ಈ ಯೋಗ ನಿಮ್ಮ ರಾಶಿಯ ಲಗ್ನ ಭಾವದಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಹೊಳಪು ಕಾಣಿಸಲಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಆರ್ಥಿಕ ವೇದಿಕೆಯಲ್ಲಿ ಲಾಭದ ಎಲ್ಲಾ ಸಾಧ್ಯತೆಗಳು ಹೆಚ್ಚಾಗುತ್ತಿವೆ. ಗುರಿಯ ಮೇಲೆ ನಿಮ್ಮ ಗಮನ ಕೇಂದ್ರೀಕರಿಸುವ ಮೂಲಕ ನಿಮಗೆ ಹೆಚ್ಚಿನ ಲಾಭ ಸಿಗಲಿದೆ.ಈ ಅವಧಿಯಲ್ಲಿ ನಿಮಗೆ ಬಾಳ ಸಂಗಾತಿಯ ಬೆಂಬಲ ಸಿಗಲಿದೆ. ಇದಲ್ಲದೆ ಈ ಅವಧಿಯಲ್ಲಿ ಅವರ ಶ್ರೇಯೋಭಿವೃದ್ಧಿ ಕೂಡ ನೀವು ನೋಡುವಿರಿ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಲಿವೆ. ಇದಲ್ಲದೆ ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಸಾಕಷ್ಟು ಬೆಂಬಲ ಕೂಡ ಸಿಗಲಿದೆ.    

2 /4

2. ಮಿಥುನ ರಾಶಿ: ಮಿಥುನ ರಾಶಿಯ ಜಾತಕದವರ ಪಾಲಿಗೆ ಲಕ್ಷ್ಮಿ ನಾರಾಯಣ ಯೋಗ ಅತ್ಯಂತ  ಲಾಭದಾಯಕ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಜಾತಕದ ಏಕಾದಶ ಭಾವದಲ್ಲಿ ಬುಧ ಗೋಚರಿಸಲಿದ್ದಾನೆ. ಇದನ್ನು ಧನಲಾಭ, ಸಹೋದರ-ಸಹೋದರಿಯರ ಸಂಬಂಧಕ್ಕೆ ಸಂಬಂಧಿಸಿದೆ. ಹೀಗಾಗಿ ಇದು ನಿಮ್ಮ ಪಾಲಿಗೆ ಅತ್ಯುತ್ತಮ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಬಲಿಷ್ಠಗೊಳ್ಳಲಿದೆ. ಕುಟುಂಬದಲ್ಲಿ ಸಹೋದರ-ಸಹೋದರಿಯರ, ಗೆಳೆಯರ ಜೊತೆಗಿನ ಸಂಬಂಧ ಗಟ್ಟಿಗೊಳ್ಳಲಿದೆ.        

3 /4

3. ಕರ್ಕ ರಾಶಿ: ಮಂಗಳ ಅಧಿಪತ್ಯದ ಮೇಷ ರಾಶಿಯಲ್ಲಿ ಬುಧ-ಶುಕ್ರ ಮೈತ್ರಿಯಿಂದ ರೂಪುಗೊಳ್ಳುತಿರುವ ಈ ಲಕ್ಷ್ಮಿ ನಾರಾಯಣ ಯೋಗ ನಿಮ್ಮ ವೃತ್ತಿ ಜೀವನ ಹಾಗೂ ವ್ಯಾಪಾರದ ದೃಷ್ಟಿಯಿಂದ ಅತ್ಯಂತ ಶುಭವಾಗಿರಲಿದೆ. ಏಕೆಂದರೆ ಈ ಯೋಗ ನಿಮ್ಮ ಜಾತಕದ ಕರ್ಮಭಾವದಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ನೌಕರಿಗೆ ಸಂಬಂಧಿಸಿದ ಅಡೆತಡೆಗಳು ದೂರಾಗಲಿವೆ, ಕಾರ್ಯಕ್ಷೇತ್ರದಲ್ಲಿ ಎದುರಾಳಿಗಳ ತಂತ್ರ ವಿಫಲವಾಗಲಿದೆ. ಇದಲ್ಲದೆ ಮಾರ್ಚ್ ತಿಂಗಳ ಅಕ್ಕಪಕ್ಕದಲ್ಲಿ ನೌಕರಿಯಲ್ಲಿ ನಿರತ ಈ ಜಾತಕದ ಜನರಿಗೆ ಪದೋನ್ನತಿಯ ಭಾಗಿ ಸಿಗುವ ಸಾಧ್ಯತೆ ಇದೆ. ಜೊತೆಗೆ ನಿಧಾನಗತಿಯಲ್ಲಿ ವ್ಯಾಪಾರ ನಡೆಯುತ್ತಿರುವ ವ್ಯಾಪಾರಿಗಳಿಗೆ ಅಪಾರ ಧನಲಾಭ ಪ್ರಾಪ್ತಿಯಾಗಲಿದೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ತಂದೆಯ ಬೆಂಬಲ ಸಿಗಲಿದೆ. ಆದರೆ, ಪ್ರಸ್ತುತ ನಿಮ್ಮ ಮೇಲೆ ಶನಿಯ ಎರಡೂವರೆ ವರ್ಷಗಳ ಕಾಟ ನಡೆಯುತ್ತಿರುವ ಕಾರಣ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಇದಲ್ಲದೆ ಈ ಅವಧಿಯಲ್ಲಿ ನೀವು ಕೆಲ ತಪ್ಪು ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಮಾನಸಿಕ ಒತ್ತಡ ಉಂಟಾಗುವ ಸಾಧ್ಯತೆ ಇದೆ.  

4 /4

4. ಸಿಂಹ ರಾಶಿ: ಮೇಷ ರಾಶಿಯಲ್ಲಿ ರೂಪುಗೊಳ್ಳುತ್ತಿರುವ ಲಕ್ಷ್ಮಿ ನಾರಾಯಣ ಯೋಗ ಸಿಂಹ ರಾಶಿಯ ಜಾತಕದವರ ಪಾಲಿಗೆ ಅತ್ಯಂತ ಅನುಕೂಲಕರ ಸಾಬೀತಾಗಲಿದೆ. ಏಕೆಂದರೆ ಇದು ನಿಮ್ಮ ಗೋಚರ ಜಾತಕದ ಅದೃಷ್ಟ ಭಾವದಲ್ಲಿ ರೂಪುಗೊಳ್ಳಲಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸಿನ ಸಕಲ ಯೋಗಗಳು ನಿರ್ಮಾಣಗೊಂದು ನಿಮಗೆ ಅಪಾರ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ. ಹೊಸ ಒಪ್ಪಂಗಗಳಿಗೆ ನೀವು ಸಹಿ ಹಾಕುವ ಸಾಧ್ಯತೆ ಇದೆ. ಕೆಲಸದ ನಿಮಿತ್ತ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದ್ದು, ಪ್ರವಾಸ ನಿಮ್ಮ ಪಾಲಿಗೆ ಲಾಭದಾಯಕ ಸಾಬೀತಾಗಲಿದೆ. ವಿದ್ಯಾರ್ಥಿಗಳ ಪಾಲಿಗೆ ಈ ಸಮಯ ಮಂಗಳ ಫಲದಾಯಿ ಸಾಬೀತಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ಧಾರ್ಮಿಕ ಹಾಗೂ ಮಂಗಳ ಕಾರ್ಯಗಳಲ್ಲಿ ನೀವು ಪಾಲ್ಗೊಳ್ಳಬಹುದು.  (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)