ಈ ಹಸು ಇದೀಗ ರಾಜಸ್ಥಾನದ ಸಿರೋಹಿ ಜಿಲ್ಲೆಯ ಮುಖ್ಯ ಚರ್ಚಾ ವಿಷಯವಾಗಿದೆ.
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಹಸಿವು ಎಂದು ಮನೆ ಬಾಗಿಲಿಗೆ ಬಂದವರಿಗೆ ಒಂದಿಷ್ಟು ಅನ್ನ ಕೊಡಲು ಸಿಕಾಪಟ್ಟೆ ಯೋಚನೆ ಮಾಡುವಂತಹ ಜನರಿರುವಾಗ, ರಾಜಸ್ಥಾನದ ಸಿರೋಹಿ ಜಿಲ್ಲೆಯ ಪಿಂದ್ವಾಲಾ ಪ್ರದೇಶದ ರೋಹಿಡಾ ಸಮೀಪದಲ್ಲಿರುವ ಜಬೇಶ್ವರ್ ಮಹಾದೇವ್ ದೇವಸ್ಥಾನದಲ್ಲಿರುವ ಹಸುವೊಂದು ಇದೀಗ ಇಡೀ ಜಿಲ್ಲೆಯ ಚರ್ಚಾ ವಿಷಯವಾಗಿದೆ. ಯಾಕಂದ್ರೆ ಈ ಹಸು ಹಸಿವಿನಿಂದ ಬಳಲುವ ಕೋತಿಗಳಿಗೆ ತಾಯಿಯಾಗಿ ಹಾಲುಣಿಸುತ್ತಿದೆ. ಸ್ಥಳೀಯರ ಪ್ರಕಾರ ನೀರಿನ ಕೊರತೆ ಹಾಗೂ ಹಸಿವಿನ ಸಮಸ್ಯೆಯಿಂದಾಗಿ ಇಲ್ಲಿನ ಕೋತಿಗಳು ಸಾಕಷ್ಟು ತೊಂದರೆ ಅನುಭವಿಸಿದ್ದವು. ಆದರೆ, ಈ ಹಸುವಿನ ಹಾಲು ಕುಡಿಯುವ ಮೂಲಕ ಈಗ ತಮ್ಮ ಹಸಿವನ್ನು ನೀಗಿಸಿಕೊಳ್ಳುತ್ತಿವೆ ಎಂದಿದ್ದಾರೆ.
ರಾಜಸ್ತಾನದಲ್ಲಿ ಮಿತಿಮೀರಿದ ತಾಪಮಾನದಿಂದಾಗಿ ಜನರಷ್ಟೇ ಅಲ್ಲ, ಪ್ರಾಣಿಗಳೂ ಸಾಕ್ಶು ತೊಂದರೆ ಅನುಭವಿಸುತ್ತಿವೆ.
ಏತನ್ಮಧ್ಯೆ ಇಲ್ಲಿನ ಹಸುವೊಂದು ಕೋತಿಗಳಿಗೆ ಹಾಲುಣಿಸುತ್ತಿರುವುದು ಭಾರೀ ಚರ್ಚಾ ವಿಷಯವಾಗಿದೆ. ಈ ದೃಶ್ಯ ನೋಡಲು ಬೇರೆ ಬೇರೆ ಗ್ರಾಮಗಳಿಂದ ಜನರು ಇಲ್ಲಿಗೆ ಆಗಮಿಸುತ್ತಿದ್ದಾರೆ.
ಕೋತಿಗಳಿಗೆ ತಾಯಿಯಾಗಿರುವ ಈ ಹಸು ರೋಹಿಡಾ ಸಮೀಪದಲ್ಲಿರುವ ಜಬೇಶ್ವರ್ ಮಹಾದೇವ್ ದೇವಸ್ಥಾನದಲ್ಲಿ ಬಹಳ ಕಾಲದಿಂದ ನೆಲಸಿದೆ.