Valentine's Day 2023: ಪ್ರೀತಿ-ಪ್ರೇಮದ ತಿಂಗಳು ಆರಂಭಗೊಂಡಿದೆ. ಈ ತಿಂಗಳ ಎರಡನೇ ವಾರದಿಂದ ವ್ಯಾಲೆಂಟೈನ್ ವಾರ ಆರಂಭಗೊಳ್ಳುತ್ತಿದೆ. ವಿವಾಹಿತರೆ ಆಗಿರಲಿ ಅಥವಾ ಸಂಬಂಧದಲ್ಲಿರುವವ ಪ್ರತಿಯೊಬ್ಬರೂ ವ್ಯಾಲೆಂಟೈನ್ ಡೇ ಆಚರಿಸುತ್ತಾರೆ.
Valentine's Day 2023 Tips: ಪ್ರೀತಿ-ಪ್ರೇಮದ ತಿಂಗಳು ಆರಂಭಗೊಂಡಿದೆ. ಈ ತಿಂಗಳ ಎರಡನೇ ವಾರದಿಂದ ವ್ಯಾಲೆಂಟೈನ್ ವಾರ ಆರಂಭಗೊಳ್ಳುತ್ತಿದೆ. ವಿವಾಹಿತರೆ ಆಗಿರಲಿ ಅಥವಾ ಸಂಬಂಧದಲ್ಲಿರುವವ ಪ್ರತಿಯೊಬ್ಬರೂ ವ್ಯಾಲೆಂಟೈನ್ ಡೇ ಆಚರಿಸುತ್ತಾರೆ. ಆದರೆ, ಈ ತಿಂಗಳಿನಲ್ಲಿ ಒಂಟಿಯಾಗಿರುವವರು ಒಂಟಿತನ ಅಥವಾ ನಿರುತ್ಸಾಹ ಅನುಭವಿಸುವ ಅವಶ್ಯಕತೆ ಇಲ್ಲ.
ಇದನ್ನೂ ಓದಿ-ಸಂಗಾತಿ ಜೋತೆಗಿನ ನಿಮ್ಮ ಸಂಬಂಧ ಸುಮಧುರಗೊಳಿಸಬೇಕೆ? ಇಲ್ಲಿವೆ ಟಿಪ್ಸ್
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ನೀವೂ ಕೂಡ ಒಂಟಿಯಾಗಿದ್ದು, ವ್ಯಾಲೆಂಟೈನ್ ಡೇ ಆಚರಿಸಲು ಬಯಸುತ್ತಿದ್ದರೆ, ಸೊಲೋ ಟ್ರಿಪ್ ಪ್ಲಾನ್ ಮಾಡಬಹುದು. ಹೀಗಿರುವಾಗ ವ್ಯಾಲೆಂಟೈನ್ ವೀಕ್ ಆರಂಭದಲ್ಲಿಯೇ ನೀವು ಈ ನಿಮ್ಮ ಪಯಣವನ್ನು ಪ್ಲಾನ್ ಮಾಡಬಹುದು.
2. ಸೆಲ್ಫ್ ಲವ್ ಗಾಗಿ ಇದೊಂದು ಉತ್ತಮ ಅವಕಾಶವಾಗಿದೆ. ಇದಕ್ಕಾಗಿ ನೀವು ನಿಮ್ಮ ನೆಚ್ಚಿನ ರೆಸ್ಟಾರೆಂಟ್ ಗೆ ಭೇಟಿ ನೀಡಬಹುದು ಮತ್ತು ನಿಮ್ಮ ನೆಚ್ಚಿನ ಊಟ ಹಾಗೂ ಆಹಾರದ ರುಚಿಯನ್ನು ಸವಿಯಬಹುದು.
3. ಒಂದು ವೇಳೆ ನಿಮ್ಮೊಂದಿಗೆ ನಿಮ್ಮ ಇತರ ಸ್ನೇಹಿತರು ಕೂಡ ಒಂಟಿಯಾಗಿದ್ದರೆ. ಅವರೊಂದಿಗೆ ಸೇರಿ ನೀವು ಹೌಸ್ ಪಾರ್ಟಿಯನ್ನು ಆಯೋಜಿಸಬಹುದು. ಈ ರೀತಿ ಮಾಡುವುದರಿಂದ ಒಂಟಿ ಇರುವ ಅನುಭವ ನಿಮಗಾಗುವುದಿಲ್ಲ.
4. ನಿಮ್ಮೊಂದಿಗೆ ನೀವೇ ಕಾಲ ಕಳೆಯುವ ಇದೊಂದು ಉತ್ತಮ ಅವಕಾಶವಾಗಿದೆ. ವ್ಯಾಲೆಂಟೈನ್ ಡೇ ದಿನ ಒಂದು ಒಳ್ಳೆಯ ಮೂವಿ ಪ್ಲಾನ್ ಮಾಡಿ ನೀವೂ ಮೂವಿಗೂ ಕೂಡ ಹೋಗಬಹುದು. ಹೀಗೆ ಮಾಡುವುದರಿಂದ ನಿಮಗೆ ಆಂತರಿಕ ನೆಮ್ಮದಿ ಸಿಗುತ್ತದೆ.
5. ಕುಟುಂಬ ಸದಸ್ಯರ ಜೊತೆಗೆ ಪಿಕ್ ನಿಕ್ ಪ್ಲಾನ್ ಮಾಡಿ. ಕುಟುಂಬಸ್ಥರ ಜೊತೆಗೆ ಕಾಲ ಕಳೆಯಿರಿ. ಇದು ನಿಮಗೆ ಒನ್ನು ಒಳ್ಳೆಯ ಅನುಭವ ನೀಡುತ್ತದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಮತ್ತು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)