ಬೆಂಗಲೂರು: ಇಡೀ ವಿಶ್ವಕ್ಕೆ ರಾಜತಾಂತ್ರಿಕತೆ, ರಾಜಕೀಯ, ಅರ್ಥಶಾಸ್ತ್ರದಂತಹ ಮಹತ್ವದ ವಿಷಯಗಳ ಜ್ಞಾನವನ್ನು ನೀಡಿದ ಆಚಾರ್ಯ ಚಾಣಕ್ಯರು ವ್ಯವಹಾರ ಜೀವನದ ಮಹತ್ವದ ಸಂಗತಿಗಳನ್ನು ಕೂಡ ಹೇಳಿದ್ದಾರೆ. ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರವಾಗಿರುವ ಚಾಣಕ್ಯ ನೀತಿಯಲ್ಲಿ ಸ್ತ್ರೀಯರ ಗುಣಲಕ್ಷಣಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಇದರ ಪ್ರಕಾರ, ಮಹಿಳೆಯರ ಕೆಲ ಒಳ್ಳೆಯ ಗುಣಗಳು ಅವಳ ಜೀವನವನ್ನು ಮಾತ್ರವಲ್ಲದೆ ಅವಳಿಗೆ ಸಂಬಂಧಿಸಿದ ಎಲ್ಲಾ ಸಂಬಂಧಗಳನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎನ್ನಲಾಗಿದೆ. ನ್ಯೂನ್ಯತೆಯನ್ನು ಒಳಗೊಂಡ ಮಹಿಳೆಯ ಸಾಂಗತ್ಯದಿಂದ ಅವಳ ಜೊತೆಗೆ ಸಂಬಂಧ ಹೊಂದಿರುವವರ ಜೀವನವನ್ನು ಕೂಡ ನರಕವನ್ನಾಗಿಸುತ್ತದೆ ಎನ್ನಲಾಗಿದೆ. ಚಾಣಕ್ಯ ನೀತಿಯಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಇಂತಹ ಗುಣಗಳು ಮತ್ತು ದೋಷಗಳ ಬಗ್ಗೆ ಏನನ್ನು ಹೇಳಲಾಗಿದೆ ತಿಳಿದುಕೊಳ್ಳೋಣ ಬನ್ನಿ,
ಚಾಣಕ್ಯ ನೀತಿಯಲ್ಲಿ ಸ್ತ್ರೀಯರ ಗುಣಲಕ್ಷಣಗಳ ಉಲ್ಲೇಖ
>> ಚಾಣಕ್ಯ ನೀತಿಯ ಪ್ರಕಾರ ಪತಿಯನ್ನು ಅತಿಯಾಗಿ ಪ್ರೀತಿಸುವ ಪತ್ನಿಯು ಆತನಿಗೆ ಸದಾ ಸತ್ಯವನ್ನೇ ಹೇಳಬೇಕು ಮತ್ತು ಎಲ್ಲಾ ಸಂದರ್ಭಗಳಲ್ಲಿ ಆತನನ್ನು ಬೆಂಬಲಿಸಬೇಕು ಎನ್ನಲಾಗಿದೆ. ಇಂತಹ ಮಡದಿಯ ಒಡನಾಟ ಆಕೆಯ ಪತಿಯ ಜೀವನವನ್ನೇ ಬದಲಾಯಿಸುತ್ತದೆ. ಎಲ್ಲ ಕ್ಷೇತ್ರದಲ್ಲೂ ಆಕೆಯ ಪತಿ ಯಶಸ್ಸನ್ನು ಪಡೆಯುತ್ತಾನೆ.
>> ಪತಿ ಒಂದು ವೇಳೆ ಹಣ, ಗೌರವದ ಅಭಾವದಿಂದ ತೊಂದರೆಗೀಡಾಗಿದ್ದು, ಅಂತಹ ಸಂದರ್ಭದಲ್ಲಿಯೂ ಕೂಡ ಪತ್ನಿ ಆತನನ್ನು ಬೆಂಬಲಿಸುತ್ತಿದ್ದರೆ, ಅಂತಹ ಪತ್ನಿಯನ್ನು ತುಂಬಾ ಗೌರವಿಸಬೇಕು ಎಂದು ಚಾಣಕ್ಯ ನೀತಿ ಹೇಳುತ್ತದೆ. ತುಂಬಾ ಅದೃಷ್ಟಶಾಲಿಗಳಿಗೆ ಮಾತ್ರ ಇಂತಹ ಪತ್ನಿ ಸಿಗುತ್ತಾಳೆ ಎನ್ನಲಾಗಿದೆ.
>> ಪತ್ನಿಯ ನಡವಳಿಕೆಯು ಸರಿಯಾಗಿಲ್ಲದಿದ್ದರೆ, ಅವಳು ಕುಟುಂಬದ ಮಾನನಷ್ಟಕ್ಕೆ ಕಾರಣವಾಗುತ್ತಾಳೆ, ಹೀಗಿರುವಾಗ ಅಂತಹ ಪತ್ನಿಯನ್ನು ತ್ಯಜಿಸುವುದು ಉತ್ತಮ ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ದುಷ್ಟ ಮಹಿಳೆಯ ಸಾಂಗತ್ಯ ಪತಿಯ ಒಳ್ಳೆಯ ಜೀವನವನ್ನು ಕೂಡ ನರಕ ಮಾಡುತ್ತದೆ ಎನ್ನಲಾಗಿದೆ.
ಇದನ್ನೂ ಓದಿ-ಹೊಸ ವರ್ಷಾರಂಭದಲ್ಲಿ ಶನಿಯ ಹಿಮ್ಮುಖ ಚಲನೆ, ಈ ಜನರ ಜೀವನದಲ್ಲಿ ಸುವರ್ಣಕಾಲ ಆರಂಭ!
>> ಅತೃಪ್ತ, ಜಗಳಗಂಟಿ, ತಾಳ್ಮೆ ಮತ್ತು ಸಂಸ್ಕಾರವಿಲ್ಲದ ಪತ್ನಿ ಇರುವ ಕುಟುಂಬವನ್ನು ಸರ್ವನಾಶದಿಂದ ಕಾಪಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆಚಾರ್ಯ ಚಾಣಕ್ಯ ನೀತಿ ಹೇಳುತ್ತದೆ, ಅಂತಹ ಕುಟುಂಬದಲ್ಲಿ ಎಂದಿಗೂ ಶಾಂತಿ ಮತ್ತು ಸಂತೋಷ ಇರಲು ಸಾಧ್ಯವಿಲ್ಲ ಎನ್ನಲಾಗಿದೆ.
ಇದನ್ನೂ ಓದಿ-ಹೊಸ ವರ್ಷಾರಂಭದಲ್ಲಿಯೇ ತನ್ನ ಉಚ್ಚ ರಾಶಿಗೆ ಮಂಗಳನ ಪ್ರವೇಶ, ಈ ರಾಶಿಗಳ ಜನರಿಗೆ ಭಾರಿ ಧನಸಂಪತ್ತು ಪ್ರಾಪ್ತಿ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ