Mangalavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಸೌರ ಶಿಶಿರ ಋತು, ಪುಷ್ಯ ಮಾಸ ಕೃಷ್ಣ ಪಕ್ಷ, ಚತುರ್ದಶಿ ತಿಥಿಯ ಈ ದಿನ ಮಂಗಳವಾರ, ಪೂ.ಷಾ.. ನಕ್ಷತ್ರ ವಜ್ರ ಯೋಗ, ವಿಷ್ಟಿ ಕರಣ. ಮೇಷದಿಂದ ಮೀನ ರಾಶಿಯವರೆಗೆ ಇಂದಿನ ದಿನ ಭವಿಷ್ಯ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ಈ ರಾಶಿಯವರಿಗೆ ಆರ್ಥಿಕವಾಗಿ ನಿಮ್ಮ ಪ್ರಗತಿಯನ್ನು ಪರಿಶೀಲಿಸುವುದು ಇಂದು ಭರವಸೆಯ ಫಲಿತಾಂಶವನ್ನು ನೀಡುತ್ತದೆ. ನಿಮ್ಮ ಗುರಿ ಸ್ಪಷ್ಟತೆಯ ಬಗ್ಗೆ ನಿಮಗೆ ಹೆಮ್ಮೆ ಇರಲಿದೆ. ನಿರಂತರ ಪ್ರಯತ್ನಗಳಿಗೆ ಫಲ ದೊರೆಯುವ ಸುದಿನ. ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯುವಿರಿ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಚುರುಕಾದ ನಡಿಗೆಯು ನಿಮ್ಮ ದಿನಕ್ಕೆ ಧನಾತ್ಮಕ ಸ್ವರವನ್ನು ಹೊಂದಿಸುತ್ತದೆ. ನಿಮ್ಮ ಆರೋಗ್ಯ ಸುಧಾರಿಸುತ್ತದೆ. ವ್ಯವಹಾರಕ್ಕೆ ಅಗತ್ಯವಾದ ಹಣಕಾಸಿನ ಅವಕಾಶಗಳ ಭರವಸೆ ದೊರೆಯಲಿದೆ. ನಿಮ್ಮ ಪ್ರವೃತ್ತಿಯನ್ನು ನಂಬಿ ಕಾರ್ಯ ನಿರ್ವಹಿಸಿದರೆ ಶುಭ ಫಲ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಒತ್ತಡದಿಂದ ಪರಿಹಾರಕ್ಕಾಗಿ ಧ್ಯಾನ ಮಾಡುವುದನ್ನು ಪರಿಗಣಿಸಿ. ಆರ್ಥಿಕವಾಗಿ ಸ್ಪಷ್ಟತೆಗಾಗಿ ನಿಮ್ಮ ಕಾರ್ಯವಿಧಾನವನ್ನು ಪರಿಷ್ಕರಿಸುವ ಅಗತ್ಯವಿದೆ. ವೃತ್ತಿಪರ ಮುಂಭಾಗದಲ್ಲಿ ಸವಾಲಿನ ದಿನವಾಗಿದೆ. ಕುಟುಂಬದೊಂದಿಗೆ ಸಂವಹಣವು ನಿಮ್ಮ ಒತ್ತಡವನ್ನು ಕಡಿಮೆ ಮಾಡಲಿದೆ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಇಂದು ಹಣಕಾಸಿನ ವಿಚಾರದಲ್ಲಿ ಸರಿಯಾಗಿ ನಿಗಾವಹಿಸುವುದು ಅಗತ್ಯವಾಗಿದೆ. ಕುಟುಂಬದೊಂದಿಗೆ ಸಂಪರ್ಕಗಳನ್ನು ಬಲಪಡಿಸುವುದು ಭಾವನಾತ್ಮಕವಾಗಿ ನಿಮಗೆ ಸಂತೋಷವನ್ನು ತರಲಿದೆ. ವೃತ್ತಿಪರ ಕ್ಷೇತ್ರದಲ್ಲಿ ಪ್ರಗತಿ ಕುಂಠಿತವಾಗಬಹುದು.
ಇದನ್ನೂ ಓದಿ- Weekly Horoscope: ಮೌನಿ ಅಮಾವಾಸ್ಯೆಯ ಈ ವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ..!
ಸಿಂಹ ರಾಶಿಯವರ ಭವಿಷ್ಯ (Leo Horoscope):
ಕೆಲಸದ ಒತ್ತಡವು ಇಂದು ನಿಮ್ಮನ್ನು ಗೊಂದಲಗೊಳಿಸಬಹುದು. ಸ್ವಲ್ಪ ವಿರಾಮ ತೆಗೆದುಕೊಂಡು ಪುನಃ ಕೆಲಸ ಆರಂಭಿಸಿ, ಹೊಸ ಚೈತನ್ಯ ಮೂಡುವುದು. ಟೀಮ್ ವರ್ಕ್ ನಿಮ್ಮ ಬೆಳವಣಿಗೆಗೆ ಸಹಾಯಕವಾಗಿದೆ. ಕುಟುಂಬದಲ್ಲಿ ಹಿರಿಯರೊಂದಿಗೆ ಕುಳಿತು ಮಾತನಾಡಿ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಆರ್ಥಿಕ ವಿಚಾರಗಳಲ್ಲಿ ನಿಗಾ ಇಡುವುದು ನಿಮ್ಮನ್ನು ವಿವೇಕಯುತವಾಗಿ ನಿರ್ಧಾರ ಕೈಗೊಳ್ಳಲು ಪ್ರೇರೇಪಿಸುತ್ತದೆ. ವೃತ್ತಿಪರ ವಿಚಾರಗಳಲ್ಲಿ ಗಮನ ಕೇಂದ್ರೀಕರಿಸುವುದು ಯಶಸ್ಸಿಗೆ ದಾರಿದೀಪವಾಗಲಿದೆ. ಪ್ರಯಾಣದಿಂದ ಲಾಭವನ್ನು ನಿರೀಕ್ಷಿಸಬಹುದು.
ತುಲಾ ರಾಶಿಯವರ ಭವಿಷ್ಯ (Libra Horoscope):
ಹಣಕಾಸಿನ ಯೋಜನೆಗಳಲ್ಲಿ ಸಂಭಾವ್ಯ ಲಾಭವನ್ನು ನಿರೀಕ್ಷಿಸಬಹುದು. ವೃತ್ತಿ ಬದುಕಿನಲ್ಲಿ ಪ್ರಗತಿಯ ಹೊಸ ಹಾದಿ ತೆರಯಲಿದೆ. ಮಕ್ಕಳೊಂದಿಗೆ ಆಟವಾಡುವುದರಿಂದ ಮನಸ್ಸಿಗೆ ಉಲ್ಲಾಸ. ಪ್ರಯಾಣ ಮಾಡುವಾಗ ನಿಮ್ಮ ಸಾಮಾಗ್ರಿಗಳ ಬಗ್ಗೆ ಕಾಳಜಿ ಇರಲಿ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ವೃತ್ತಿಪರ ತಂತ್ರಗಳಿಗೆ ನಿಮ್ಮ ದಿಟ್ಟ ನಿರ್ಧಾರವು ಧನಾತ್ಮಕ ಫಲಿತಾಂಶಗಳನ್ನು ನೀಡಲಿದೆ. ಕುಟುಂಬದಲ್ಲಿ ತಾಳ್ಮೆ ಅಗತ್ಯವಾಗಿದೆ. ಹಣಕಾಸಿನ ನವೀಕರಣಗಳನ್ನು ಮುಂದುವರೆಸುವುದರಿಂದ ಉತ್ತಮ ಆಯ್ಕೆಗಳು ಗೋಚರಿಸಬಹುದು. ಪ್ರಯಾಣವನ್ನು ಸರಾಗಗೊಳಿಸಲು ಸೂಕ್ತ ವ್ಯವಸ್ಥೆ ಅಗತ್ಯ.
ಇದನ್ನೂ ಓದಿ- ಶುಕ್ರ ಮಂಗಳ ಯುತಿ: ನವಪಂಚಮ ಯೋಗದಿಂದ ಈ ರಾಶಿಯವರ ಬಾಳೇ ಬಂಗಾರ, ಬಂಪರ್ ಧನಲಾಭ
ಧನು ರಾಶಿಯವರ ಭವಿಷ್ಯ (Sagittarius Horoscope):
ಇಂದು ವ್ಯಾಪಾರದಲ್ಲಿ ನಿಮ್ಮ ಹೊಸ ತಂತ್ರಗಳು ಹಣಕಾಸಿನ ಬೆಳವಣಿಗೆಗೆ ದಾರಿ ಮಾಡಿಕೊಡುತ್ತವೆ. ವೃತ್ತಿಪರ ನಾಯಕತ್ವವು ತಂಡದ ಯಶಸ್ಸಿಗೆ ದಾರಿದೀಪವಾಗಲಿದೆ. ಕುಟುಂಬದಲ್ಲಿ ನಿಮ್ಮ ಸಾಧನೆಯು ಹರ್ಷಚಿತ್ತ ವಾತಾವರಣವನ್ನು ನಿರ್ಮಿಸಲಿದೆ.
ಮಕರ ರಾಶಿಯವರ ಭವಿಷ್ಯ (Capricorn Horoscope):
ಸ್ಮಾರ್ಟ್ ಹಣಕಾಸು ನಿರ್ಧಾರಗ್ಲೌ ನಿಮಗೆ ಉತ್ತಮ ಮಾರ್ಗದರ್ಶನವನ್ನು ನೀಡಬಹುದು. ನಿಮ್ಮ ನಾಯಕತ್ವ ಗುಣಗಳಿಂದಾಗಿ ಉದ್ಯೋಗದಲ್ಲಿ ಮಿಂಚುವಿರಿ. ಕಚೇರಿಯಲ್ಲಿ ಅರ್ಹ ಮನ್ನಣೆ ದೊರೆಯಲಿದೆ. ಆಸ್ತಿ ಸಂಬಂಧಿತ ಕಾನೂನು ವಿಷಯಗಳಲ್ಲಿ ಜಯ ಸಾಧಿಸುವಿರಿ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಇಂದು ಹೂಡಿಕೆಯಿಂದ ಭಾರೀ ಲಾಭವನ್ನು ನಿರೀಕ್ಷಿಸಬಹುದು. ಆದರೆ, ದೀರ್ಘಾವಧಿಯ ಗುರಿಗಳ ಮೇಲೆ ನಿಮ್ಮ ಗಮಂವನ್ನು ಕೇಂದ್ರೀಕರಿಸಿ. ಉದ್ಯೋಗ ರಂಗದಲ್ಲಿ ಎದುರಾಗುವ ಸವಾಲುಗಳನ್ನು ದಿಟ್ಟತನದಿಂದ ಎದುರಿಸುವಿರಿ.
ಮೀನ ರಾಶಿಯವರ ಭವಿಷ್ಯ (Pisces Horoscope):
ಕುಟುಂಬದ ಹಿರಿಯ ಸದಸ್ಯರ ಆರೋಗ್ಯವು ಇಂದು ನಿಮಗೆ ಚಿಂತೆಯ ವಿಚಾರವಾಗಬಹುದು. ಆದಾಗ್ಯೂ, ಸಂಜೆ ವೇಳೆಗೆ ಎಲ್ಲವೂ ತಹಬಡಿಬೇ ಬರಲಿದೆ. ಮಕ್ಕಳೊಂದಿಗೆ ತಾಳ್ಮೆಯಿಂದ ನಡೆದುಕೊಳ್ಳುವುದುದರಿಂದ ಪ್ರೀತಿ ಹೆಚ್ಚಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.