Solar Eclipse 2023 : ಸೂರ್ಯಗ್ರಹಣ, ಚಂದ್ರಗ್ರಹಣ ಖಗೋಳ ಕೌತುಕಗಳಾಗಿವೆ. ಆದರೆ ಹಿಂದೂ ಧರ್ಮದಲ್ಲಿ, ಗ್ರಹಣವನ್ನು ಅಶುಭ ಎಂದು ಹೇಳಲಾಗುತ್ತದೆ. ಆದ್ದರಿಂದಲೇ ಗ್ರಹಣ ಸಮಯದಲ್ಲಿ ಯಾವುದೇ ಮಂಗಳಕರ ಕೆಲಸವನ್ನು ಮಾಡಲಾಗುವುದಿಲ್ಲ. 2023 ರ ಕೊನೆಯ ಸೂರ್ಯಗ್ರಹಣವು ಅಕ್ಟೋಬರ್ 14, 2023 ರ ಶನಿವಾರದಂದು ನಡೆಯಲಿದೆ. ಈ ದಿನ ಸರ್ವ ಪಿತೃ ಅಮವಾಸ್ಯೆ ಕೂಡಾ. ಸೂರ್ಯಗ್ರಹಣ ಮುಗಿದ ತಕ್ಷಣ ನವರಾತ್ರಿ ಆರಂಭವಾಗಲಿದೆ. ಜ್ಯೋತಿಷ್ಯದ ಪ್ರಕಾರ, ಈ ಅಪರೂಪದ ಸಂಯೋಜನೆಯು 178 ವರ್ಷಗಳ ನಂತರ ರೂಪುಗೊಳ್ಳುತ್ತಿದೆ. ಸರ್ವ ಪಿತೃ ಅಮಾವಾಸ್ಯೆಯಂದು ಗೋಚರಿಸುವ ಸೂರ್ಯಗ್ರಹಣ ಎಲ್ಲಾ ರಾಶಯವರ ಮೇಲೆ ಪ್ರಮುಖ ಪ್ರಭಾವ ಬೀರುತ್ತದೆ. ಸೂರ್ಯಗ್ರಹಣದಂದು ನಿರ್ಮಾಣವಾಗುವ ಈ ಯೋಗ 3 ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಸೂರ್ಯಗ್ರಹಣದಿಂದ ಇವರ ಜೀವನದಲ್ಲಿ ಸಂಪತ್ತು ಗಳಿಕೆ, ಸ್ಥಾನಮಾನ ಮತ್ತು ಪ್ರಗತಿಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತದೆ.
ಸೂರ್ಯಗ್ರಹಣದಿಂದಾಗಿ ತೆರೆಯುವುದು ಈ ರಾಶಿಯವರ ಅದೃಷ್ಟದ ಬಾಗಿಲು :
ಮಿಥುನ ರಾಶಿ: ವರ್ಷದ ಕೊನೆಯ ಸೂರ್ಯಗ್ರಹಣವು ಮಿಥುನ ರಾಶಿಯವರಿಗೆ ತುಂಬಾ ಒಳ್ಳೆಯದು. ನೀವು ಹೊಸ ಕೆಲಸವನ್ನು ಪಡೆಯಬಹುದು ಅಥವಾ ವೃತ್ತಿಜೀವನದಲ್ಲಿ ಪ್ರಮುಖ ಬದಲಾವಣೆಗಲಾಗುವ ಸಾಧ್ಯತೆಯೂ ಇದೆ. ನಿಮ್ಮ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಜೀವನದಲ್ಲಿ ಸಂತೋಷ ಇರುವುದು. ಹಳೆಯ ಸಮಸ್ಯೆಗಳು ದೂರವಾಗುತ್ತವೆ. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವುದು ಸಾಧ್ಯವಾಗುತ್ತದೆ.
ಇದನ್ನೂ ಓದಿ : ದೇವರ ಕೋಣೆಯಲ್ಲಿ ಈ ವಸ್ತು ಇದ್ದರೆ ನವರಾತ್ರಿಗೂ ಮುನ್ನ ತೆಗೆದು ಬಿಡಿ ! ನಿಮ್ಮ ಮೇಲಿರುವುದು ದುರ್ಗೆಯ ಸಂಪೂರ್ಣ ಕೃಪಾ ಕಟಾಕ್ಷ
ತುಲಾ ರಾಶಿ : ವರ್ಷದ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣವು ತುಲಾ ರಾಶಿಯ ಜನರ ಅದೃಷ್ಟವನ್ನು ಬೆಳಗಿಸುತ್ತದೆ. ಸಮಾಜದಲ್ಲಿ ಗೌರವ ಸಿಗಲಿದೆ. ವಿರೋಧಿಗಳ ಎಲ್ಲಾ ಪ್ರಯತ್ನಗಳು ನಿಮ್ಮ ಮುಂದೆ ಸೋಲು ಕಾಣಲಿದೆ. ಗೆಲುವಿನ ಹಾದಿಯಲ್ಲಿಯೇ ನೀವು ಮುನ್ನಡೆಯುವುದು ಸಾಧ್ಯವಾಗುತ್ತದೆ. ಹಣದ ಸಮಸ್ಯೆಗಳು ಶಾಶ್ವತವಾಗಿ ಕೊನೆಗೊಳ್ಳುವುದು. ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ. ಆಸ್ತಿ ಸಂಬಂಧಿತ ವಿಷಯಗಳಿಂದ ಲಾಭವಾಗಬಹುದು. ಆದಾಯ ಹೆಚ್ಚಲಿದೆ.
ಮಕರ ರಾಶಿ: ಸೂರ್ಯಗ್ರಹಣದ ವಿಶೇಷ ಪ್ರಯೋಜನ ಮಕರ ರಾಶಿಯವರಿಗೆ ಸಿಗಲಿದೆ. ಈ ರಾಶಿಯವರ ಜೀವನದಲ್ಲಿ ಸಂಪತ್ತು ಹೆಚ್ಚಾಗುತ್ತದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಮತ್ತೆ ಆರಂಭವಾಗಬಹುದು. ಹಣದ ಕೊರತೆ ನೀಗಲಿದೆ. ಹೂಡಿಕೆಯಿಂದ ಲಾಭವಾಗಲಿದೆ. ವ್ಯಾಪಾರದಲ್ಲಿ ದೊಡ್ಡ ಮಟ್ಟದ ಲಾಭವಾಗಬಹುದು. ಉದ್ಯೋಗದಲ್ಲಿ ಹೊಸ ಅವಕಾಶಗಳು ದೊರೆಯಲಿವೆ. ಜೀವನದಲ್ಲಿ ಸಂತೋಷ ಇರುತ್ತದೆ.
ಇದನ್ನೂ ಓದಿ : ನವರಾತ್ರಿಯಲ್ಲಿ ತುಲಾ ರಾಶಿಯಲ್ಲಿ ಬುಧಾದಿತ್ಯ ಯೋಗ... ಈ 3 ರಾಶಿಗಳ ಮೇಲೆ ಹಣದ ಮಳೆ, ಸಂಪತ್ತಿನ ಹೊಳೆ!
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.