ನಂದಿ ಇರದ ಏಕೈಕ ಶಿವ ದೇವಾಲಯವಿದು ! ಇಲ್ಲಿ ನಂದಿ ಇರದಿರುವುದಕ್ಕೆ ಸಾಕ್ಷಾತ್ ಮಹಾದೇವನೆ ಕಾರಣವಂತೆ !

 ನಂದಿಯ ಕಿವಿಯಲ್ಲಿ ನಮ್ಮ ಮನಸ್ಸಿನ ಆಸೆ, ಬೇಡಿಕೆಗಳನ್ನು ಹೇಳಿಕೊಂಡರೆ ಅದು ಶೀಘ್ರವೇ ನೆರವೇರುತ್ತದೆ ಎನ್ನುವುದು ಪ್ರಾಚೀನ ಕಾಲದಿಂದ ಅನುಸರಿಸಿಕೊಂಡು ಬಂದ ನಂಬಿಕೆ.

Written by - Ranjitha R K | Last Updated : Feb 19, 2025, 12:24 PM IST
  • ಶಿವನ ದೇವಾಲಯ ಎಂದರೆ ಅಲ್ಲಿ ನಂದಿಗೆ ವಿಶೇಷ ಸ್ಥಾನ.
  • ಕಪಾಲೇಶ್ವರ ಶಿವ ದೇವಾಲಯ ಎಲ್ಲಿದೆ?
  • ಶಿವನ ಜೊತೆ ನಂದಿ ಏಕಿಲ್ಲ ?
ನಂದಿ ಇರದ ಏಕೈಕ ಶಿವ ದೇವಾಲಯವಿದು ! ಇಲ್ಲಿ ನಂದಿ ಇರದಿರುವುದಕ್ಕೆ ಸಾಕ್ಷಾತ್ ಮಹಾದೇವನೆ ಕಾರಣವಂತೆ ! title=

ಶಿವನ ದೇವಾಲಯ ಎಂದರೆ ಅಲ್ಲಿ ನಂದಿಗೆ ವಿಶೇಷ ಸ್ಥಾನ. ಪ್ರತಿ ಸಿವನ ಮಂದಿರದಲ್ಲಿಯೂ ನಂದಿ ಇದ್ದೇ ಇರುತ್ತಾನೆ. ನಂದಿಯನ್ನು ಶಿವನ ವಾಹನವೆಂದು ಪರಿಗಣಿಸಲಾಗಿದೆ. ನಂದಿಯ ಕಿವಿಯಲ್ಲಿ ನಮ್ಮ ಮನಸ್ಸಿನ ಆಸೆ, ಬೇಡಿಕೆಗಳನ್ನು ಹೇಳಿಕೊಂಡರೆ ಅದು ಶೀಘ್ರವೇ ನೆರವೇರುತ್ತದೆ ಎನ್ನುವುದು ಪ್ರಾಚೀನ ಕಾಲದಿಂದ ಅನುಸರಿಸಿಕೊಂಡು ಬಂದ ನಂಬಿಕೆ.  ಆದರೆ ದೇಶದಲ್ಲಿ ಶಿವನ ವಾಹನವಾದ ನಂದಿ ಇಲ್ಲದ ಒಂದು ದೇವಾಲಯವಿದೆ. 

ಕಪಾಲೇಶ್ವರ ಶಿವ ದೇವಾಲಯ ಎಲ್ಲಿದೆ? :
ಗೋದಾವರಿ ನದಿಯ ದಡದಲ್ಲಿರುವ 'ಕಪಾಲೇಶ್ವರ ಮಹಾದೇವ ದೇವಾಲಯ' ಬಹಳ ಪ್ರಾಚೀನ ಮತ್ತು ಪೂಜ್ಯ ಶಿವ ದೇವಾಲಯವಾಗಿದೆ. ಶಿವನ ಹನ್ನೆರಡು ಜ್ಯೋತಿರ್ಲಿಂಗಗಳ ನಂತರ,ಯಾವುದದಾರೂ ದೇವಾಲಯವು ವಿಶೇಷ ಪ್ರಾಮುಖ್ಯತೆ  ಹೊಂದಿದೆ ಎಂದಾದರೆ ಅದು ಕಪಾಲೇಶ್ವರ ಮಹಾದೇವ ದೇವಾಲಯ. 

ಇದನ್ನೂ ಓದಿ : ಇಂದು ಶುಕ್ರನಿಂದ ಈ ರಾಶಿಗಳಿಗೆ ಅನುಕೂಲ.. ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ

 ಶಿವನ ಜೊತೆ ನಂದಿ ಏಕಿಲ್ಲ ? : 
ಈ ದೇವಾಲಯ ಇಷ್ಟೊಂದು ಮಹತ್ವದ್ದಾಗಿದ್ದರೂ, ಶಿವನ ವಾಹನ ನಂದಿಯ ಪ್ರತಿಮೆ ಈ ಶಿವ ದೇವಾಲಯದಲ್ಲಿ ಇಲ್ಲ. ಇದರ ಹಿಂದೆ ಒಂದು ಪ್ರಾಚೀನ ಪೌರಾಣಿಕ ಕಥೆ ಅಡಗಿದೆ. ಅದರ ಪ್ರಕಾರ ಶಿವನೇ ನಂದಿಯನ್ನು ತನ್ನ ಮುಂದೆ  ಇರಿಸಿಕೊಳ್ಳಲು ಬಯಸಲಿಲ್ಲವಂತೆ. 

ಬ್ರಹ್ಮನ  ಪಂಚ ಮುಖಗಳ ಕಥೆ : 
 ಪ್ರಾಚೀನ ಕಾಲದಲ್ಲಿ ಬ್ರಹ್ಮನಿಗೆ ಐದು ಮುಖಗಳಿತ್ತಂತೆ. ಈ ಪೈಕಿ ನಾಲ್ಕು ಮುಖಗಳು ವೇದಗಳನ್ನು ಪಠಿಸುತ್ತಿತ್ತು. ಆದರೆ ಐದನೇ ಮುಖವು ನಿರಂತರವಾಗಿ ನಿಂದಿಸುತ್ತಿತ್ತು. ಈ ಬಾಯಿಯಿಂದ ಎಲ್ಲಾ ದೇವತೆಗಳು ಮತ್ತು ಋಷಿಗಳು ತುಂಬಾ ತೊಂದರೆಗೀಡಾದರು.

ಶಿವನ ಕೋಪ ಮತ್ತು ಬ್ರಹ್ಮನನ್ನು ಕೊಂದ ಆರೋಪ : 
ಒಂದು ದಿನ ಬ್ರಹ್ಮನ ಈ ಐದನೇ ಮುಖವು ಶಿವನನ್ನು ಕಠಿಣ ಪದಗಳಲ್ಲಿ ಖಂಡಿಸಿತು. ಇದರಿಂದ ಕೋಪಗೊಂಡ ಶಿವನು ತನ್ನ ತ್ರಿಶೂಲದಿಂದ ಬ್ರಹ್ಮನ ಈ ಐದನೇ ಮುಖವನ್ನು ಕತ್ತರಿಸಿದ.ಈ ಘಟನೆಯ ನಂತರ, ಶಿವನು ಬ್ರಹ್ಮನನ್ನು ಕೊಂದ ಪಾಪಕ್ಕೆ ಗುರಿಯಾಗುತ್ತಾನೆ. ಇದಕ್ಕೆ ಪ್ರಾಯಶ್ಚಿತ ಪಡೆಯುವ ಯಾವ ಮಾರ್ಗವೂ ತಿಳಿಯುವುದಿಲ್ಲ. 

ಇದನ್ನೂ ಓದಿ : ಮನೆಯಲ್ಲಿ ಗಡಿಯಾರವನ್ನು ಈ ದಿಕ್ಕಿನಲ್ಲಿ ಹಾಕಿ.. ನಿಮ್ಮ ಗೋಲ್ಡನ್‌ ಟೈಮ್‌ ಅಲ್ಲಿಂದಲೇ ಶುರುವಾಗುವುದು!

ಬ್ರಾಹ್ಮಣನನ್ನು ಕೊಂದ ಪಾಪದಿಂದ ಮೋಕ್ಷಕ್ಕೆ ಹುಡುಕಾಟ : 
ಈ ದೋಷದಿಂದ ಮುಕ್ತಿಪಡೆಯಲು ಶಿವನು ಇಡೀ ಪ್ರಪಂಚವನ್ನು ಸುತ್ತಲು ಪ್ರಾರಂಭಿಸಿದನು ಎಂದು ಹೇಳಲಾಗುತ್ತದೆ. ಆದರೆ ಅವನಿಗೆ ಯಾವುದೇ ಪರಿಹಾರ ಸಿಗಲಿಲ್ಲ. ಒಂದು ದಿನ, ಶಿವನು ಸೋಮೇಶ್ವರದಲ್ಲಿ ತಂಗಿದ್ದಾಗ, ಒಂದು ಅದ್ಭುತ ದೃಶ್ಯವನ್ನು ಕಂಡನು. ಒಬ್ಬ ಬ್ರಾಹ್ಮಣನು ತನ್ನ ಕರುವಿನ ಮೂಗಿಗೆ ಹಗ್ಗವನ್ನು ಹಾಕಲು ಪ್ರಯತ್ನಿಸುತ್ತಿದ್ದ. ಆದರೆ ಕರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿತ್ತು.  ಆಗ ಅವನ ತಾಯಿ ಹಸು, 'ಮಗನೇ, ಹೀಗೆ ಮಾಡಬೇಡ, ಇದು ನಿನ್ನನ್ನು ಬ್ರಾಹ್ಮಣ ಹತ್ಯೆಯ ಅಪರಾಧಿಯನ್ನಾಗಿ ಮಾಡಬಹುದು' ಎಂದು ಎಚ್ಚರಿಸಿತು. "ಬ್ರಾಹ್ಮಣ ಹತ್ಯೆಯ ಪಾಪದಿಂದ ಮುಕ್ತಿ ಪಡೆಯುವ ಮಾರ್ಗ ನನಗೆ ತಿಳಿದಿದೆ" ಎಂದು ಕರು ಉತ್ತರಿಸಿತು. ಇದನ್ನು ಕೇಳಿ ಶಿವನಿಗೆ ಆಶ್ಚರ್ಯವಾಯಿತು. ಶಿವನೇ ತಿಳಿದಿರದ ಪಾಪ ಪರಿಹಾರ ಕರುವಿಗೆ ಹೇಗೆ ತಿಳಿಡಿದೆ ಎನ್ನುವ ಕುತೂಹಲದಿಂದ ಅವನು ದೂರದಿಂದ ಇಡೀ ದೃಶ್ಯವನ್ನು ವೀಕ್ಷಿಸಿದನು.

ಬ್ರಹ್ಮಹತ್ಯಾ ದೋಷದಿಂದ ಮುಕ್ತಿ ಪಡೆಯುವ ಮಾರ್ಗ.
ಸ್ವಲ್ಪ ಸಮಯದಲ್ಲೇ, ಆ ಕರುವು ತನ್ನ ಕೊಂಬುಗಳಿಂದ ಹಗ್ಗವನ್ನು ಕಟ್ಟಿಕೊಂಡಿದ್ದ ಬ್ರಾಹ್ಮಣನನ್ನು ಕೊಂದಿತು. ಬ್ರಾಹ್ಮಣನು ಸತ್ತ ತಕ್ಷಣ, ಕರುವಿನ ದೇಹವು ಕಪ್ಪು ಬಣ್ಣಕ್ಕೆ ತಿರುಗಿತು. ಅಂದರೆ ಬ್ರಾಹ್ಮಣನ ಕೊಲೆಯ ಪಾಪ ಆ ಕರುವು ಆವರಿಸಿತು. 

ಈಗ ಕರು ಈ ದೋಷವನ್ನು ಹೋಗಲಾಡಿಸಲು ಮುಂದೆ ಸಾಗಿತು. ಶಿವನೂ ಆ ಕರುವನ್ನು ಹಿಂಬಾಲಿಸಿದನು. ಕೊನೆಗೆ ಕರು ಗೋದಾವರಿ ನದಿಯ ರಾಮಕುಂಡ ತಲುಪಿ ಅಲ್ಲಿ ಸ್ನಾನ ಮಾಡಿತು.ಈ ನದಿಯಲ್ಲಿ ಸ್ನಾನ ಮಾಡಿದ ತಕ್ಷಣ ಕರು ಮತ್ತೆ ತನ್ನ ಅಸಲಿ ಬಣ್ಣಕ್ಕೆ ತಿರುಗಿತು. ಅಂದರೆ ಅಲ್ಲಿಗೆ ಬ್ರಾಹ್ಮಣನನ್ನು ಕೊಂದ ಪಾಪದಿಂದ ಆ ಕರು ಮುಕ್ತನಾಗುತ್ತದೆ. 

(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News