ಏಕದಿನ ಕ್ರಿಕೆಟ್‌ನಲ್ಲಿ 3 ವಿಕೆಟ್‌ ಪಡೆದು ದಾಖಲೆ ಸೃಷ್ಟಿಸಿದ ಶಮಿ..! ಬ್ರೆಟ್ ಲೀ-ಸ್ಟಾರ್ಕ್ ರೆಕಾರ್ಡ್‌ ಹಿಂದಿಕ್ಕಿದ ಟೀಂ ಇಂಡಿಯಾ ಬೌಲರ್‌..

Mohammed Shami 200 ODI wickets : ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಭಾಗವಾಗಿ ಇಂದು ಭಾರತ ತನ್ನ ಮೊದಲ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಆಡುತ್ತಿದೆ. ಈ ಪಂದ್ಯದಲ್ಲಿ ಭಾರತ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಇದರ ಮಧ್ಯ ಈ ಪಂದ್ಯದಲ್ಲಿ ಮೊಹಮ್ಮದ್ ಶಮಿ ಮೂರು ವಿಕೆಟ್ ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

Written by - Krishna N K | Last Updated : Feb 20, 2025, 08:07 PM IST
    • ಇಂದು ಭಾರತ ತನ್ನ ಮೊದಲ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಆಡುತ್ತಿದೆ.
    • ಮೊಹಮ್ಮದ್ ಶಮಿ ಮೂರು ವಿಕೆಟ್ ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
    • ಶಮಿ ಅತಿ ವೇಗವಾಗಿ 200 ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ 3 ವಿಕೆಟ್‌ ಪಡೆದು ದಾಖಲೆ ಸೃಷ್ಟಿಸಿದ ಶಮಿ..! ಬ್ರೆಟ್ ಲೀ-ಸ್ಟಾರ್ಕ್ ರೆಕಾರ್ಡ್‌ ಹಿಂದಿಕ್ಕಿದ ಟೀಂ ಇಂಡಿಯಾ ಬೌಲರ್‌.. title=

IND vs BNG updates : ಬಾಂಗ್ಲಾದೇಶ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಪ್ರಾರಂಭದಲ್ಲಿ ಕೇವಲ 35 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡು.. ಐದು ವಿಕೆಟ್‌ಗಳನ್ನು ಹೊಂದಿದ್ದರು. ಆದರೆ ತೋಹಿದ್ ಹೃದಯ್ ಮತ್ತು ಜಾಕಿರ್ ಅಲಿ ಆರನೇ ವಿಕೆಟ್‌ಗೆ 154 ರನ್‌ಗಳನ್ನು ಕಲೆ ಹಾಕಿದರು.. ಇದರೊಂದಿಗೆ ಬಾಂಗ್ಲಾದೇಶ 229 ಬೃಹತ್‌ ಮೊತ್ತವನ್ನು ಕಲೆ ಹಾಕಿತು.

ಭಾರತದ ಪರ ಮೊಹಮ್ಮದ್ ಶಮಿ ಅದ್ಭುತ ಬೌಲಿಂಗ್ ಮಾಡಿದರು. ಮೊದಲ ಸ್ಪೆಲ್‌ನಲ್ಲಿ ಎರಡು ವಿಕೆಟ್‌ಗಳನ್ನು ಪಡೆದರು. ಡೆತ್ ಓವರ್‌ನಲ್ಲಿ ಮತ್ತೊಂದು ವಿಕೆಟ್ ಪಡೆದು ಹೊಸ ದಾಖಲೆ ನಿರ್ಮಿಸಿದರು. ಮೊಹಮ್ಮದ್ ಶಮಿ ತಮ್ಮ ಮೂರನೇ ವಿಕೆಟ್‌ನೊಂದಿಗೆ ಒಟ್ಟು 200 ವಿಕೆಟ್‌ಗಳ ಗಡಿಯನ್ನು ತಲುಪಿದ್ದಾರೆ. ಮೊಹಮ್ಮದ್ ಶಮಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 200 ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ:ಕೊನೆಗೂ ಚಾಹಲ್‌ ದಾಂಪತ್ಯ ಜೀವನ ಅಂತ್ಯ..!? ದೇವರೇ.. ನನ್ನ ರಕ್ಷಿಸಿದ ಎಂದು ಪತ್ನಿಗೆ ವಿಚ್ಛೇದನ ನೀಡಿದ ಕ್ರಿಕೆಟಿಗ

ಮೊಹಮ್ಮದ್ ಶಮಿ 5126 ಎಸೆತಗಳಲ್ಲಿ 200 ವಿಕೆಟ್‌ಗಳ ಮೈಲಿಗಲ್ಲು ತಲುಪಿದ್ದಾರೆ. ಇದರೊಂದಿಗೆ, ಅವರು ಅತಿ ಕಡಿಮೆ ಎಸೆತಗಳಲ್ಲಿ 200 ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಮಿಚೆಲ್ ಸ್ಟಾರ್ಕ್ 5240 ಎಸೆತಗಳಲ್ಲಿ, ಸಕ್ಲೇನ್ ಮುಷ್ತಾಕ್ 5451 ಎಸೆತಗಳಲ್ಲಿ, ಬ್ರೆಟ್ ಲೀ 5640 ಎಸೆತಗಳಲ್ಲಿ, ಟ್ರೆಂಟ್ ಬೌಲ್ಟ್ 5783 ಎಸೆತಗಳಲ್ಲಿ ಮತ್ತು ವಕಾರ್ ಯೂನಿಸ್ 5883 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ.

ಮಿಚೆಲ್ ಸ್ಟಾರ್ಕ್ 102 ಏಕದಿನ ಪಂದ್ಯಗಳಲ್ಲಿ 200 ವಿಕೆಟ್ ಪಡೆದ ಸಾಧನೆ ಮಾಡಿದರು. ಮೊಹಮ್ಮದ್ ಶಮಿ ಮತ್ತು ಸಕ್ಲೇನ್ ಮುಷ್ತಾಕ್ 104 ಪಂದ್ಯಗಳಲ್ಲಿ, ಟ್ರೆಂಟ್ ಬೌಲ್ಟ್ 107 ಪಂದ್ಯಗಳಲ್ಲಿ, ಬ್ರೆಟ್ ಲೀ 112 ಪಂದ್ಯಗಳಲ್ಲಿ ಮತ್ತು ಅಲನ್ ಡೊನಾಲ್ಡ್ 117 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ:ಇನ್ಮುಂದೆ ಟ್ರೈನ್ ಕ್ಯಾನ್ಸಲೇಶನ್ ಬಗ್ಗೆ ಚಿಂತೆ ಬೇಡ, ಈ ಟ್ರಿಕ್ ಬಳಸಿ, ಫುಲ್ ಹಣ ಖಾತೆಗೆ..!

ವಿಶೇಷ ಅಂದ್ರೆ, ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಜಾಕಿರ್ ಅಲಿಯನ್ನು ಕ್ಯಾಚ್ ಹಿಡಿಯುವ ಮೂಲಕ ಮೊಹಮ್ಮದ್ ಅಜರುದ್ದೀನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.. ಅಜರುದ್ದೀನ್ ಏಕದಿನ ಕ್ರಿಕೆಟ್‌ನಲ್ಲಿ 156 ಕ್ಯಾಚ್‌ಗಳನ್ನು ಹಿಡಿದಿದ್ದರು.. ಇದೀಗ ವಿರಾಟ್ ಕೊಹ್ಲಿ ಕೂಡ 156 ಕ್ಯಾಚ್‌ಗಳನ್ನು ಹಿಡಿಯುವ ಮೂಲಕ ರೆಕಾರ್ಡ್‌ ಮಾಡಿದ್ದಾರೆ.. ಸಚಿನ್ ತೆಂಡೂಲ್ಕರ್ 140 ವಿಕೆಟ್, ರಾಹುಲ್ ದ್ರಾವಿಡ್ 124 ಮತ್ತು ಸುರೇಶ್ ರೈನಾ 102 ವಿಕೆಟ್ ಪಡೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News