EXCLUSIVE:ಮಾಯಾಂಕ್ ಅಗರ್ವಾಲ್ ಸಂದರ್ಶನ

   

Last Updated : Mar 16, 2018, 05:42 PM IST
EXCLUSIVE:ಮಾಯಾಂಕ್ ಅಗರ್ವಾಲ್ ಸಂದರ್ಶನ title=

ನವದೆಹಲಿ: ದೇಶೀಯ ಕ್ರಿಕೆಟ್ ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಕರ್ನಾಟಕದ ಮಾಯಾಂಕ್ ಅಗರ್ವಾಲ್ ಈಗ ಭಾರತ ರಾಷ್ಟ್ರೀಯ ತಂಡದ ಬಾಗಿಲು ತಟ್ಟುತ್ತಿದ್ದಾರೆ. ಈವರೆಗೂ ಸಚಿನ್ ತೆಂಡುಲ್ಕರ್ ಮತ್ತು  ವಿರಾಟ್ ಕೊಹ್ಲಿ ಸೇರಿದಂತೆ ಹಲವು ಕ್ರಿಕೆಟ್ ಆಟಗಾರರ ದಾಖಲೆಗಳನ್ನು ದೇಶಿಯ ಕ್ರಿಕೆಟ್ ನಲ್ಲಿ ಅಳಿಸಿ ಹಾಕಿದ್ದಾರೆ.   

2017-18ರ ರಣಜಿ ಟ್ರೋಫಿಯಲ್ಲಿ 105.45 ಸರಾಸರಿಯಲ್ಲಿ 5 ಶತಕಗಳು ಸೇರಿ 1160 ರನ್ . ಮುಷ್ತಾಕ್ ಅಲಿ ಟಿ 20 ಪಂದ್ಯಾವಳಿಯಲ್ಲಿ 128 ಸ್ಟ್ರೈಕ್ ರೇಟ್ ನಲ್ಲಿ 9 ಪಂದ್ಯಗಳಲ್ಲಿ 258 ರನ್. ಅಲ್ಲದೆ ವಿಜಯ್ ಹಜಾರೆ ಟ್ರೋಪಿಯಲ್ಲಿ 723 ರನ್ ಗಳಿಸಿದ್ದಾರೆ. ಆ ಮೂಲಕ  ಮಾಯಾಂಕ್ ಅಗರ್ವಾಲ್  ಭಾರತೀಯ ದೇಶೀಯ ಕ್ರಿಕೆಟ್ ನಲ್ಲಿ  2000ಕ್ಕೂ ಅಧಿಕ ರನ್ ಗಳಿಸಿದ ಮೊದಲ ಬ್ಯಾಟ್ಸ್ಮನ್ ಎನ್ನುವ ಖ್ಯಾತಿಯನ್ನು ಪಡೆದಿದ್ದಾರೆ. ಇದರಲ್ಲಿ  8 ಶತಕಗಳು ಮತ್ತು 9 ಅರ್ಧಶತಕಗಳನ್ನು ಗಳಿಸಿದ್ದಾರೆ.

ಈ ಕುರಿತಾಗಿ ಝೀ ನ್ಯೂಸ್ ಹಿಂದಿ ಗೆ ತಮ್ಮ ಮುಂದಿನ ಕನಸುಗಳು, ಕ್ರಿಕೆಟ್ ನ ಕುರಿತಾಗಿ ಮನಬಿಚ್ಚಿ ಮಾತನಾಡಿದರು.

ನಾನು ಸಚಿನ್ ನೋಡಿ  ಕ್ರಿಕೆಟ್ ಆಡಲು ಪ್ರಾರಂಭಿಸಿದ್ದೆ

ಮಾಯಾಂಕ್ ಅಗರ್ವಾಲ್ ಅವರ ಕ್ರಿಕೆಟ್ ಪ್ರಾರಂಭದ ಬಗ್ಗೆ ಮಾತನಾಡುತ್ತಾ, ನಾನು ಸಚಿನ್ ತೆಂಡುಲ್ಕರ್ ಕ್ರಿಕೆಟ್ ಆಡುತ್ತಿದ್ದನ್ನು ನೋಡಿ ನಾನು ಕ್ರಿಕೆಟ್ ಆಡಬೇಕು ಎಂದು ನಿರ್ಧರಿಸಿದೆ. 10 ವರ್ಷದವನಿದ್ದಾಗ ಬೇಸಿಗೆ ರಜಾದಿನಗಳಲ್ಲಿನ ಶಿಬಿರಗಳ ಮೂಲಕ ನನ್ನ ಕ್ರಿಕೆಟ್ ಜೀವನ ಪ್ರಾರಂಭವಾಯಿತು ಎಂದು ತಿಳಿಸಿದರು.

10 ನೇಯ ನಂತರ ನನ್ನ ಕ್ರಿಕೆಟ್ ನಿರ್ಧಾರ ತೆಗೆದುಕೊಂಡೆ

ನಾನು 10ನೇ ತರಗತಿ ಮುಗಿಸಿದಾಗ ನನ್ನ ವಯಸ್ಸು ಸುಮಾರು 15-16 ವರ್ಷಗಳಿರಬಹುದು. ಆ ಸಂದರ್ಭದಲ್ಲಿ ಶಿಕ್ಷಣ ಅಥವಾ ಕ್ರಿಕೆಟ್ ನ ಆಯ್ಕೆ ಬಂದಾಗ ನಾನು ಕ್ರಿಕೆಟ್ ನ್ನು ವೃತ್ತಿಯಾಗಿ ಸ್ವೀಕರಿಸಿದೆ. 

ನಾನು ಅಧ್ಯಯನದ ಬಗ್ಗೆ ಚಿಂತೆ ಮಾಡುತ್ತಿದ್ದೆ

ಮಾಯಾಂಕ್ ರವರ ತಂದೆ ಉದ್ಯಮಿ, ತಾಯಿ ಗೃಹಿಣಿ, ಮಾಯಾಂಕ್ ಹೇಳುವಂತೆ  ತಮ್ಮ ಕುಟುಂಬದಿಂದ ತಮಗೆ ಸಂಪೂರ್ಣ ಬೆಂಬಲ ಸಿಕ್ಕಿತು. ನನ್ನ ಕುಟುಂಬವು ಪ್ರತಿಯೊಂದು ಹಂತದಲ್ಲೂ ನನಗೆ  ಸಂಪೂರ್ಣ ಬೆಂಬಲವನ್ನು ನೀಡಿದೆ. ನನ್ನ ತಂದೆಯು ಕ್ರಿಕೆಟ್  ಆಡುವದನ್ನು ಎಂದು ತಡೆಯಲಿಲ್ಲ. ಆದರೆ ಈ ಸಂದರ್ಭದಲ್ಲಿ ನಾನು ಅಧ್ಯಯನದಲ್ಲಿ ಹಿಂದುಳಿದಿದ್ದೆನೆ ಎನ್ನುವ ಮನೋಭಾವ ಇತ್ತು, ಆದರೆ ನನ್ನ ತಂದೆ ಅಧ್ಯಯನದಲ್ಲಿ 2-3 ವರ್ಷ ಹಿಂದೆ ಮುಂದೆ ಆಗಬಹುದು.ಆದರೆ ನಿನ್ನ  ಗುರಿ ಕ್ರಿಕೆಟ್ ಆಗಿರುವುದರಿಂದ  ಅದನ್ನು ಪೂರ್ಣ ಸಮರ್ಪಣಾ ಭಾವದಿಂದ ಆಡು ಎಂದು ಧೈರ್ಯ ತುಂಬಿದರು.

ನನಗೆ ವೀರೇಂದ್ರ ಸೆಹ್ವಾಗ್ ಮಾದರಿ 

ಭಾರತದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ತಮ್ಮ ಆದರ್ಶಮಯ ಆಟಗಾರ ಅವರ ಸಹಜವಾದ ಆಟ ಮತ್ತು ಶೈಲಿಯು ತಮ್ಮನನ್ನು ಹೆಚ್ಚು ಆಕರ್ಷಿಸಿದೆ ಎನ್ನುತ್ತಾರೆ ಮಾಯಾಂಕ್ 

ಉನ್ನತ ಹಂತಕ್ಕೆ ತಲುಪಲು ದೇಶೀಯ ಕ್ರಿಕೆಟ್ ಮೂಲ ತಳಹದಿ 

ದೇಶೀಯ ಕ್ರಿಕೆಟ್ ಯಾವುದೇ ಆಟಗಾರನಿಗೆ  ಉನ್ನತ-ಮಟ್ಟದ ಕ್ರಿಕೆಟ್ ಆಡುವ ಮೊದಲು ಅದು ತಳಹದಿಯನ್ನು ಕಲ್ಪಿಸಿಕೊಡುತ್ತದೆ. ಭಾರತದಲ್ಲಿ ದೇಶೀಯ ಕ್ರಿಕೆಟ್ ಗೆ ಪ್ರಮುಖ ಸ್ಥಾನವಿದೆ, ಹಾಗಾಗಿ ದೇಶೀಯ ಕ್ರಿಕೆಟ್ ಯಾವುದೇ ಆಟಗಾರನಿಗೆ ಬಹಳ ಪ್ರಮುಖ ಎಂದು ಹೇಳಲು ಇಚ್ಚಿಸುತ್ತೇನೆ.ಇಲ್ಲಿ ನೀಡುವ ಪ್ರದರ್ಶನವನ್ನು ಖಂಡಿತವಾಗಿ ಎಲ್ಲರೂ ಗಮನಿಸುತ್ತಾರೆ

ಕೇವಲ ಪ್ರತಿಭೆಯನ್ನು ಮಾತ್ರ ಗಮನಿಸುತ್ತಾರೆ ಹೊರತು ಕ್ರಿಕೆಟ್ ಮಾದರಿಯನ್ನಲ್ಲ

ರಣಜಿ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿ  ಮೂರು ವಿಧದ ಕ್ರಿಕೆಟ್ ನಲ್ಲಿನ ಪ್ರದರ್ಶನದ ಬಗ್ಗೆ ಪ್ರಸ್ತಾಪಿಸಿದ  ಮಾಯಾಂಕ್ ಅಗರ್ವಾಲ್, "ಆಟಗಾರನಾಗಿ ಪ್ರತಿ ಸವಾಲು ಒಪ್ಪಿಕೊಳ್ಳಬೇಕು ಮತ್ತು ಅವುಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು ಎಂದರು. ಇನ್ನು ಮುಂದುವರೆದು ನೀವು ಉತ್ತಮ ಕ್ರಿಕೆಟಿಗರಾದರೆ ಯಾವುದೇ ಮಾದರಿಯ ಕ್ರಿಕೆಟ್ ನ್ನು ಆಡಬಹುದು ಎಂದು ತಿಳಿಸಿದರು 

ಟೀಮ್ ಇಂಡಿಯಾದಲ್ಲಿ ಪ್ರವೇಶ ಕುರಿತು ನಾನೇನು ಹೇಳಲಾರೆ.

ಟೀಮ್ ಇಂಡಿಯಾ ಪ್ರವೇಶದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ , ಮಾಯಾಂಕ್ ನಮ್ಮ  ನಿಯಂತ್ರಣದಲ್ಲಿ ಇಲ್ಲದಿರುವುದರ ಬಗ್ಗೆ ಅಥವಾ ಅದರ ಬಗ್ಗೆ ಯೋಚಿಸಿದರೆ ಪ್ರಯೋಜನವೇನು? ನಾನು ಮಾಡುತ್ತಿರುವುದನ್ನು ಚೆನ್ನಾಗಿ ನಿರ್ವಹಿಸಬೇಕು, ದೇವರು ನಮಗೋಸ್ಕರ ಒಂದು ದಿನ  ಖಂಡಿತವಾಗಿ ಆಶೀರ್ವದಿಸುತ್ತಾನೆ.

ಐಪಿಎಲ್ ನಲ್ಲಿ ಭಾಗವಹಿಸಿದ್ದು ನಿಜಕ್ಕೂ  ಸಾಧನೆ 

ಐಪಿಎಲ್ ಆಟಗಾರರಿಗೆ ಉತ್ತಮ ಮತ್ತು ವೇದಿಕೆಯಾಗಿದೆ. ಅದರಲ್ಲೂ  ವಿಶೇಷವಾಗಿ ದೇಶೀಯ ಆಟಗಾರರಿಗೆ ಇದು ಹೆಚ್ಚು ಉಪಯುಕ್ತವಾಗಿದೆ, ಏಕೆಂದರೆ ನಾವು ಐಪಿಎಲ್ನಲ್ಲಿ  ಅನೇಕ ಹಿರಿಯ  ವಿದೇಶಿ ಆಟಗಾರರೊಂದಿಗೆ ಆಟವಾಡುವ ಮೂಲಕ, ಅವರೊಂದಿಗೆ ಡ್ರೆಸಿಂಗ್ ಕೊಠಡಿಯನ್ನು ಹಂಚಿಕೊಳ್ಳುವ ಮೂಲಕ ಸಾಕಷ್ಟು ಕಲಿತಿದ್ದೇವೆ.

ನಾನು ಶೇನ್ ವಾರ್ನ್ ಜೊತೆ ಆಡಲು ಬಯಸುತ್ತೇನೆ

ಮಾಯಾಂಕ್ ಆಗರವಾಲ್ ತಮ್ಮ  ವೃತ್ತಿಜೀವನದಲ್ಲಿ ಒಮ್ಮೆಯಾದರೂ  ಶೇನ್ ವಾರ್ನ್ ಅವರ ಜೊತೆ ಆಡಬೇಕು, ಅವಕಾಶ ಸಿಕ್ಕರೆ ಖಂಡಿತವಾಗಿ ಶೇನ್ ವಾರ್ನ್ ಜೊತೆ ಆಡಲು ಇಚ್ಚೆಸುತ್ತೆನೆ ಎಂದು ತಮ್ಮ ಬಯಕೆಯನ್ನು ವ್ಯಕ್ತಪಡಿಸಿದರು. 

 ಲವ್ ಸ್ಟೋರಿ

ತಮ್ಮ ಲವಸ್ಟೊರಿಯ ಬಗ್ಗೆ ಹೇಳಲು ಸಂಕೋಚ ವ್ಯಕ್ತಪಡಿಸಿದ ಮಾಯಾಂಕ್ ಈ ಬಗ್ಗೆ ಹೆಚ್ಚು ಹೇಳಲು ನಿರಾಕರಿಸಿದರು.ಮಾಯಾಂಕ್ ತನ್ನ ಗೆಳತಿ ಲಂಡನ್ನಲ್ಲಿ ಅಧ್ಯಯನ ಮಾಡುತ್ತಿದ್ದಾರೆ ಎಂದು ತಿಳಿಸಿದರು  

ಪ್ರತಿಯೊಬ್ಬ ಆಟಗಾರನು ವಿಶೇಷವಾದ ಗುಣಗಳನ್ನು ಹೊಂದಿರುತ್ತಾನೆ.

ಭಾರತ ತಂಡದಲ್ಲಿನ ಅತ್ಯುತ್ತಮ ಬ್ಯಾಟ್ಸ್ಮನ್ ಯಾರು ಎನ್ನುವ ಪ್ರಶ್ನೆಗೆ ಉತ್ತರಿಸಿದ ಮಾಯಾಂಕ್, ತಂಡದಲ್ಲಿ ಪ್ರತಿ ಆಟಗಾರನ ಪಾತ್ರ ವಿಭಿನ್ನ ಆದ್ದರಿಂದ ನಾನು ಯಾವುದೇ ಆಟಗಾರನನ್ನು ಹೋಲಿಸುವಲ್ಲಿ ಮತ್ತು ಅವರಿಗೆ ರ್ಯಾಂಕ್ ನೀಡುವುದನ್ನು ನಾನು ನಂಬುವುದಿಲ್ಲ,ಏಕೆಂದರೆ  ಪ್ರತಿ ಆಟಗಾರನಿಗೆ ತನ್ನದೇ ಆದ ಪ್ರಾಮುಖ್ಯತೆ ಇದೆ ಎಂದು ನಾನು ಭಾವಿಸಿದ್ದೇನೆ ಎಂದು ತಿಳಿಸಿದರು.

 

Trending News