ನವದೆಹಲಿ: ಸೌತಾಂಪ್ಟನ್ ನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ನೀಡಿರುವ 227 ರನ್ ಗಳ ಸವಾಲನ್ನು ಬೆನ್ನತ್ತಿರುವ ಭಾರತ ತಂಡವು ಈಗ ಎರಡು ವಿಕೆಟ್ ಗಳನ್ನು ಕಳೆದುಕೊಂಡು ಇಕ್ಕಟ್ಟಿಗೆ ಸಿಲುಕಿದೆ.
That feeling when you claim the scalp of #ViratKohli
💪 #SAvIND #CWC19 pic.twitter.com/uHj5TjktIp
— Cricket World Cup (@cricketworldcup) June 5, 2019
ಭಾರತ ತಂಡವು ಈಗ ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ ವಿಕೆಟ್ ಗಳನ್ನು ಕಳೆದುಕೊಂಡಿದೆ.ಸದ್ಯ ಬಂದಿರುವ ವರದಿಗಳ ಪ್ರಕಾರ 17.2 ಓವರ್ ಗಳಲ್ಲಿ 63 ರನ್ ಗಳಿಸಿದೆ. ಕ್ರಿಸ್ ನಲ್ಲಿ ರೋಹಿತ್ ಶರ್ಮಾ ಅಜೇಯ 33 ರನ್ ಗಳೊಂದಿಗೆ ಹಾಗೂ ಕೆ.ರಾಹುಲ್ ಅವರು 3 ರನ್ ಗಳಿಸಿ ಆಡುತ್ತಿದ್ದಾರೆ.ದಕ್ಷಿಣ ಆಫ್ರಿಕಾದ ಪರವಾಗಿ ಕಾಗಿಸೋ ರಬಾಡ ಹಾಗೂ ಅಂಡಿಲೆ ತಲಾ ಒಂದೊಂದು ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ.
A celebration fitting for an outstanding spell of bowling @KagisoRabada25 💪 #ProteaFire #SAvIND #CWC19 pic.twitter.com/cqH8pWHwDx
— Cricket World Cup (@cricketworldcup) June 5, 2019
ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ದಕ್ಷಿಣ ಆಫ್ರಿಕಾ ತಂಡವು ಭಾರತದ ಮಾರಕ ದಾಳಿಗೆ ತತ್ತರಿಸಿ 50 ಓವರ್ ಗಳಲ್ಲಿ 227 ರನ್ ಗಳ ಸಾಧಾರಣ ಮೊತ್ತವನ್ನು ಗಳಿಸಿತ್ತು. ಭಾರತದ ಪರವಾಗಿ ಯಜುವೆಂದ್ರ ಚಹಾಲ್ ನಾಲ್ಕು ವಿಕೆಟ್ ಗಳನ್ನು ತೆಗೆದುಕೊಳ್ಳುವ ಮೂಲಕ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಬೆನ್ನೆಲುಬು ಮುರಿದ್ದರು.