Ind Vs Eng ಸರಣಿ: ಶಾಸ್ತ್ರಿ ಬಳಿಕ ತಂಡದ ಈ ಇಬ್ಬರು ಸದಸ್ಯರೂ ಕೂಡ 5ನೇ ಟೆಸ್ಟ್ ನಿಂದ ಹೊರಗೆ

Ind Vs Eng Test Series - ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಗೂ ಮುನ್ನ ಭಾರತ ತಂಡ  ಭಾರಿ ಹಿನ್ನಡೆ ಅನುಭವಿಸಿದೆ. ಟೀಂ ಇಂಡಿಯಾದ ಮೂವರು ಅನುಭವಿ ಆಟಗಾರರು 5 ನೇ ಟೆಸ್ಟ್ ನಿಂದ ಹೊರಬಂದಿದ್ದಾರೆ.

Written by - Nitin Tabib | Last Updated : Sep 6, 2021, 06:08 PM IST
  • ಐದನೇ ಟೆಸ್ಟ್ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ಭಾರಿ ಹಿನ್ನಡೆ.
  • ಮುಖ್ಯ ಕೋಚ್ ರವಿ ಶಾಸ್ತ್ರಿ RT-PCR ವರದಿ ಪಾಸಿಟಿವ್
  • ರವಿ ಶಾಸ್ತ್ರಿ ಬಳಿಕ ಇದೀಗ ಭರತ್ ಅರುಣ್, R ಶ್ರೀಧರ್ RT-PCR ವರದಿ ಕೂಡ ಪಾಸಿಟಿವ್
Ind Vs Eng ಸರಣಿ:  ಶಾಸ್ತ್ರಿ ಬಳಿಕ ತಂಡದ ಈ ಇಬ್ಬರು ಸದಸ್ಯರೂ ಕೂಡ 5ನೇ ಟೆಸ್ಟ್ ನಿಂದ ಹೊರಗೆ title=
Ind Vs Eng Test Series (File Photo)

Ind Vs Eng Test Series - ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಮುಂದುವರಿದಿದೆ. ನಾಲ್ಕನೇ ಟೆಸ್ಟ್ ನ ಐದನೇ ದಿನದಲ್ಲಿ ಭಾರತೀಯ ಬೌಲರ್ ಗಳು ಪಂದ್ಯವನ್ನು ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಪ್ರಸ್ತುತ ಈ ಸರಣಿಯು 1-1ರಲ್ಲಿ ಸಮಬಳದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ, ನಾಲ್ಕನೇ ಟೆಸ್ಟ್ ಬಹಳ ಮಹತ್ವದ್ದಾಗಿದೆ. ಆದರೆ ಈ ಮಧ್ಯೆ ಟೀಂ ಇಂಡಿಯಾ ಪಾಲಿಗೆ ಒಂದು ಆತಂಕದ ಸುದ್ದಿ ಪ್ರಕಟವಾಗಿದೆ. ಟೀಂ ಇಂಡಿಯಾದ ಕೆಲವು ಪ್ರಮುಖ ಸದಸ್ಯರು ಐದನೇ ಟೆಸ್ಟ್ ಗೆ ಮುಂಚಿತವಾಗಿ ತಂಡದಿಂದ ಹೊರಬಂದಿದ್ದಾರೆ. 

ಈಗಾಗಲೇ ರವಿ ಶಾಸ್ತ್ರಿ ಹೊರಬಂದಿದ್ದಾರೆ
ಟೀಂ ಇಂಡಿಯಾದ ಪ್ರಮುಖ ಕೋಚ್ ಆಗಿರುವ ರವಿಶಾಸ್ತ್ರಿ  (Ravi Shastri) ಕೊರೊನಾ ಸೋಂಕಿಗೆ ಗುರಿಯಾದ ಬಳಿಕ ಮ್ಯಾಂಚೆಸ್ಟರ್ ನಲ್ಲಿ ನಡೆಯಬೇಕಿರುವ 5ನೇ ಟೆಸ್ಟ್ ನಿಂದ ಹೊರಗುಳಿಯಲಿದ್ದಾರೆ. ಭಾನುವಾರ ರವಿಶಾಸ್ತ್ರಿ ಅವರ ಕೊವಿಡ್ ವರದಿ ಸಕಾರಾತ್ಮದ ಹೊರಬಂದಿದೆ. ಶಾಸ್ತ್ರಿ ಅವರ ಲ್ಯಾಟರಲ್ ಫ್ಲೋ ಟೆಸ್ಟ್ ಸಕಾರಾತ್ಮಕ ಹೊರಬಂದಿತ್ತು. ಬಳಿಕ ರವಿಶಾಸ್ತ್ರಿ ಸೇರಿದಂತೆ ಭಾರತೀಯ ತಂಡದ ನಾಲ್ವರು ಸ್ಪೋರ್ಟ್ಸ್ ಸ್ಟಾಫ್ ಐಸೋಲೆಶನ್ ಗೆ ಒಳಗಾಗಿದ್ದಾರೆ.

ಇದನ್ನೂ ಓದಿ-Viral Video: ಡ್ರೆಸ್ಸಿಂಗ್ ರೂಂ ಗೋಡೆಗೆ ಗುದ್ದಿದ ವಿರಾಟ್ ಕೊಹ್ಲಿ; ಕಿಂಗ್ ಕೋಪಕ್ಕೆ ಕಾರಣವೇನು ನೋಡಿ..

ಶಾಸ್ತ್ರಿ ಬಳಿಕ ಇಬ್ಬರು ದಿಗ್ಗಜ ಆಟಗಾರರೂ ಕೂಡ ಪಾಸಿಟಿವ್ 
ಶಾಸ್ತ್ರಿ ಅವರ ಲ್ಯಾಟರಲ್ ಫ್ಲೋ ಟೆಸ್ಟ್ ಸಕಾರಾತ್ಮಕ ಹೊರಬಂದ ಬಳಿಕ ಶಾಸ್ತ್ರಿ ಸೇರಿದಂತೆ ನಾಲ್ವರು ಸ್ಪೋರ್ಟ್ಸ್ ಸಿಬ್ಬಂದಿಗಳನ್ನು ಐಸೊಲೇಟ್ ಮಾಡಲಾಗಿದೆ. ಇವರಲ್ಲಿ ಬೌಲಿಂಗ್ ಕೋಚ್ ಭರತ್ ಅರುಣ್, ಫಿಲ್ಡಿಂಗ್ ಕೋಚ್ ಆರ್ ಶ್ರೀಧರ್, ಭಾರತೀಯ ತಂಡದ ಫಿಸಿಯೋ nitin ಪಟೇಲ್ ಶಾಮೀಲಾಗಿದ್ದಾರೆ. ಈ ಎಲ್ಲರ RT-PCR ಟೆಸ್ಟ್ ಕೂಡ ನಡೆಸಲಾಗಿದೆ. ಇದಾದ ಬಳಿಕ ಭರತ್ ಅರುಣ್ (Bharat Arun) ಹಾಗೂ ಶ್ರಿಧರ್ ಟೆಸ್ಟ್ ವರದಿ ಕೂಡ ಸಕಾರಾತ್ಮಕ ಹೊರಬಂದಿದೆ. ಅವರೆಲ್ಲರನ್ನು ಐಸೋಲೆಟ್ ಮಾಡಲಾಗಿದೆ. ಈ ಎಲ್ಲಾ ಸದಸ್ಯರ ಎರಡು ಕೊರೊನಾ ಟೆಸ್ಟ್ ವರದಿಗಳು ನಕಾರಾತ್ಮಕ ಬಂದ ಬಳಿಕ ಮಾತ್ರ ಇವರು ತಂಡದೊಂದಿಗೆ ಮರು ಸೇರ್ಪಡೆಯಾಗಲಿದ್ದಾರೆ. 

ಇದನ್ನೂ ಓದಿ -India vs England: ಶತಕ ಸಂಭ್ರಮದ ನಡುವೆ ರಾಹುಲ್ ದ್ರಾವಿಡ್ ದಾಖಲೆ ಮುರಿದ ರೋಹಿತ್ ಶರ್ಮಾ

ಸರಣಿ 1-1ರಿಂದ ಸಮಬಲದಲ್ಲಿದೆ
ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಸರಣಿಯು ಪ್ರಸ್ತುತ 1-1ರಲ್ಲಿ ಸಮಬಲವಾಗಿದೆ. ಈ ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ಡ್ರಾ ಆಗಿತ್ತು. ಅದರ ನಂತರ ಲಾರ್ಡ್ಸ್ ನಲ್ಲಿ ನಡೆದ ಎರಡನೇ ಟೆಸ್ಟ್ ನಲ್ಲಿ ಭಾರತ ಇಂಗ್ಲೆಂಡ್ ಅನ್ನು ಸೋಲಿಸಿತ್ತು. ಆದರೆ ಮೂರನೇ ಟೆಸ್ಟ್ ನಲ್ಲಿ, ಇಂಗ್ಲೆಂಡ್ ಸರಣಿಗೆ ಮರಳಿ ಏಕಪಕ್ಷೀಯವಾಗಿ ಟೆಸ್ಟ್ ಪಂದ್ಯವನ್ನು ತನ್ನದಾಗಿಸಿಕೊಂಡಿದೆ ಮತ್ತು ಸರಣಿಯು 1-1ರಲ್ಲಿ ಸಮಬಲಗೊಂಡಿತು. ಪ್ರಸ್ತುತ ಎರಡೂ ತಂಡಗಳು ನಾಲ್ಕನೇ ಟೆಸ್ಟ್ ನಲ್ಲಿ ಮುನ್ನಡೆ ಸಾಧಿಸಲು ಯತ್ನಿಸುತ್ತಿವೆ.

ಇದನ್ನೂ ಓದಿ-Virat Kohli: ಕಿಂಗ್ ಕೊಹ್ಲಿಗೆ ಇನ್‌ಸ್ಟಾಗ್ರಾಮ್​ನಲ್ಲಿ 150 ಮಿಲಿಯನ್ ಫಾಲೋವರ್ಸ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News