ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ದದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 10 ವಿಕೆಟ್ಗಳ ಗೆಲುವು ಸಾಧಿಸಿದೆ.
ಆ ಮೂಲಕ ಭಾರತ 2-0 ಅಂತರದ ಜಯದೊಂದಿಗೆ ಸರಣಿಯನ್ನು ವಶಪಡಿಸಿಕೊಂಡಿದೆ.ವೆಸ್ಟ್ ಇಂಡಿಸ್ ಎರಡನೇ ನೀಡಿದ್ದ 72 ರನ್ಗಳ ಗುರಿ ಬೆನ್ನಟ್ಟಿದ ಭಾರತ ತಂಡವು ಪೃಥ್ವಿ ಶಾ(33) ಹಾಗೂ ಕೆ. ಎಲ್ ರಾಹುಲ್(33) ರನ್ ಗಳ ನೆರವಿನಿಂದ ಸುಲಭವಾಗಿ ಜಯಗಳಿಸಿತು.
CHAMPIONS #TeamIndia 🇮🇳🇮🇳@Paytm #INDvWI pic.twitter.com/oUlwtb9ZX3
— BCCI (@BCCI) October 14, 2018
ವೆಸ್ಟ್ ಇಂಡಿಸ್ ತಂಡವು ಎರಡನೇ ಇನಿಂಗ್ಸ್ ನಲ್ಲಿ ಕೇವಲ 127 ರನ್ ಗಳಿಗೆ ಆಲೌಟ್ ಆಯಿತು.ಭಾರತದ ಜಡೇಜಾ ಹಾಗೂ ಉಮೇಶ್ ಯಾದವ್ ಪರಿಣಾಮಕಾರಿ ಬೌಲಿಂಗ್ ದಾಳಿಯಿಂದಾಗಿ ತತ್ತರಿಸಿ ಹೋಯಿತು. 2ನೇ ಇನ್ನಿಂಗ್ಸ್ನಲ್ಲಿ ವಿಂಡೀಸ್ ಪರ ಸುನಿಲ್ ಅಂಬ್ರಿಸ್ 38 ಹಾಗೂ ಶಾಯ್ ಹೋಪ್ 28 ರನ್ ಗಳಿಸಿದ್ದನ್ನು ಬಿಟ್ಟರೆ ಉಳಿದವರು ಯಾರು ಹೆಚ್ಚು ಹೊತ್ತು ನಿಲ್ಲಲಿಲ್ಲ. ಭಾರತ ಪರ ಉಮೇಶ್ ಯಾದವ್ 4 ವಿಕೆಟ್ ಕಿತ್ತು ಮಿಂಚಿದರೆ, ಜಡೇಜಾ 3 ಹಾಗೂ ಅಶ್ವಿನ್ 2 ವಿಕೆಟ್ ಪಡೆದರು.
ಈ ಮೂಲಕ ಭಾರತ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಅಂತರದ ಜಯದೊಂದಿಗೆ ಸಂಪೂರ್ಣ ಸರಣಿಯನ್ನು ವಶ ಪಡಿಸಿಕೊಂಡಿದೆ.
ಪಂದ್ಯ ಶ್ರೇಷ್ಠ: ಉಮೇಶ್ ಯಾದವ್
ಸರಣಿ ಶ್ರೇಷ್ಠ: ಪೃಥ್ವಿ ಶಾ