ನವದೆಹಲಿ: ಮೋಟೆರಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡವು ೧೧೨ ರನ್ ಗಳಿಗೆ ಆಲೌಟ್ ಆಗಿದೆ.
ಇದನ್ನೂ ಓದಿ: Narendra Modi Stadium: ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನಕ್ಕೆ 'ನರೇಂದ್ರ ಮೋದಿ' ಹೆಸರು..!
India survived five overs and are 5/0, at dinner, after their spinners bowled England out for 112.#INDvENG | https://t.co/0unCGUOHmI pic.twitter.com/SXXatq7ntS
— ICC (@ICC) February 24, 2021
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ ತಂಡಕ್ಕೆ ಭಾರತದ ಬೌಲರಗಳಾದ ಅಕ್ಸರ್ ಪಟೇಲ್ ಆರು ಹಾಗೂ ಆರ್ ಅಶ್ವಿನ್ ಮೂರು ವಿಕೆಟ್ ಗಳನ್ನು ಕಬಳಿಸುವ ಮೂಲಕ ತಂಡದ ಸರ್ವಪತನಕ್ಕೆ ಕಾರಣವಾದರು.ಇಂಗ್ಲೆಂಡ್ ತಂಡದ ಪರವಾಗಿ ಜಾಕ್ ಕ್ರಾವ್ಲೇ ಗಳಿಸಿದ 53 ರನ್ ಅಧಿಕ ಮೊತ್ತವಾಗಿತ್ತು.ಉಳಿದ ಇಂಗ್ಲೆಂಡ ತಂಡದ ಆಟಗಾರರು ಭಾರತದ ಮಾರಕ ಬೌಲಿಂಗ್ ದಾಳಿಗೆ ತಲೆಗರಳೆಯಂತೆ ಉರುಳಿದರು.
ಇದನ್ನೂ ಓದಿ: ಎಂ.ಎಸ್.ಧೋನಿ ದಾಖಲೆ ಮುರಿಯಲಿರುವ ಕೊಹ್ಲಿ ಹೇಳಿದ್ದೇನು?
ಈಗ ಮೊದಲ ಇನ್ನಿಂಗ್ಸ್ ನ ಬ್ಯಾಟಿಂಗ್ ಆರಂಭಿಸಿರುವ ಭಾರತ ತಂಡವು ೧೪ ರನ್ ಗಳನ್ನು ಗಳಿಸಿದೆ. ಕ್ರಿಸ್ ನಲ್ಲಿ ರೋಹಿತ್ ಶರ್ಮಾ ೧೦ ರನ್ ಹಾಗೂ ಶುಭ್ಮನ್ ಗಿಲ್ ೪ ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.