IPL 2023: ಪ್ಲೇ-ಆಫ್ ಮೇಲೆ ಧೋನಿ ಕಣ್ಣು: ಚೆನ್ನೈ vs ಡೆಲ್ಲಿ ಮಹಾಕದನದಲ್ಲಿ ಗೆಲುವು ಇದೇ ತಂಡಕ್ಕೆ… ಕನ್ಫರ್ಮ್!

IPL 2023, CSK vs DC Today Match: ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದ ನಂತರ ಚೆನ್ನೈ ಗೆಲುವಿನ ಹಾದಿಗೆ ಮರಳಿದೆ. ಪಂದ್ಯಾವಳಿಯ ಆರಂಭಿಕ ಹಂತದಿಂದಲೇ ಹೆಣಗಾಡುತ್ತಿರುವ ಡೆಲ್ಲಿಯನ್ನು ಸೋಲಿಸಿ ಮತ್ತೆ ಪ್ಲೇ ಆಫ ಹಂತಕ್ಕೆ ಪ್ರವೇಶಿಸುವ ಎಲ್ಲಾ ಯೋಜನೆಯನ್ನು ಚೆನ್ನೈ ಮಾಡುತ್ತಿದೆ.

Written by - Bhavishya Shetty | Last Updated : May 10, 2023, 09:56 AM IST
    • ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದ ನಂತರ ಚೆನ್ನೈ ಗೆಲುವಿನ ಹಾದಿಗೆ ಮರಳಿದೆ
    • ಬೌಲಿಂಗ್ ಕೂಡ ಸೂಪರ್ ಆಗಿದೆ, ವಿಶೇಷವಾಗಿ ಮತಿಶಾ ಪತಿರಾನ ಅವರ ಪಾತ್ರವು ಮುಖ್ಯವಾಗಿದೆ
    • ಚೆನ್ನೈ vs ಡೆಲ್ಲಿ ನಡುವಿನ ಹೈ ವೋಲ್ಟೇಜ್ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ
IPL 2023: ಪ್ಲೇ-ಆಫ್ ಮೇಲೆ ಧೋನಿ ಕಣ್ಣು: ಚೆನ್ನೈ vs ಡೆಲ್ಲಿ ಮಹಾಕದನದಲ್ಲಿ ಗೆಲುವು ಇದೇ ತಂಡಕ್ಕೆ… ಕನ್ಫರ್ಮ್!  title=
CSK vs DC

IPL 2023, CSK vs DC Today Match: IPL 2023ರ ಪ್ಲೇ ಆಫ್ ಹಂತದ ಮೇಲೆ ತಂಡಗಳ ಕಣ್ಣು ಬಿದ್ದಿದೆ. ಇಂದು ಚೆನ್ನೈ ಸೂಪರ್ ಕಿಂಗ್ಸ್ ಹೊಸ ಆತ್ಮವಿಶ್ವಾಸದೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಅಷ್ಟೇ ಅಲ್ಲ, ಮತ್ತೊಂದು ಗೆಲುವಿನೊಂದಿಗೆ ತಮ್ಮ ಸ್ಥಾನವನ್ನು ಬಲಪಡಿಸಲು ಸಿ ಎಸ್ ಕೆ ಎದುರು ನೋಡುತ್ತಿದೆ.

 ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದ ನಂತರ ಚೆನ್ನೈ ಗೆಲುವಿನ ಹಾದಿಗೆ ಮರಳಿದೆ. ಪಂದ್ಯಾವಳಿಯ ಆರಂಭಿಕ ಹಂತದಿಂದಲೇ ಹೆಣಗಾಡುತ್ತಿರುವ ಡೆಲ್ಲಿಯನ್ನು ಸೋಲಿಸಿ ಮತ್ತೆ ಪ್ಲೇ ಆಫ ಹಂತಕ್ಕೆ ಪ್ರವೇಶಿಸುವ ಎಲ್ಲಾ ಯೋಜನೆಯನ್ನು ಚೆನ್ನೈ ಮಾಡುತ್ತಿದೆ.

ಇದನ್ನೂ ಓದಿ: ಅಂದು Team India ವಿಶ್ವಕಪ್ ಗೆಲ್ಲುತ್ತಿದ್ದಂತೆ ವಕೀಲರ ಪುತ್ರಿಯನ್ನೇ ಪಟಾಯಿಸಿ ಮದುವೆಯಾಗಿದ್ದ ಈ ಆರಂಭಿಕ ಆಟಗಾರ!

ಶನಿವಾರ ನಡೆದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಸಿಎಸ್ ಕೆ ಭರ್ಜರಿಯಾಗಿ ಆಟವಾಡಿದ್ದು, ಮುಂಬೈ ತಂಡವನ್ನು ಹೀನಾಯವಾಗಿ ಸೋಲಿಸಿತ್ತು. ಇನ್ನು ಸಿ ಎಸ್ ಕೆ ತಂಡದಲ್ಲಿ ಬ್ಯಾಟಿಂಗ್ ಅದ್ಭುತವಾಗಿದ್ದರೆ, ಬೌಲಿಂಗ್ ಕೂಡ ಸೂಪರ್ ಆಗಿದೆ, ವಿಶೇಷವಾಗಿ ಮತಿಶಾ ಪತಿರಾನ ಅವರ ಪಾತ್ರವು ಮುಖ್ಯವಾಗಿದೆ. ಅಂದು ರಿತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೆ ಮತ್ತು ಶಿವಂ ದುಬೆ ಅವರ ಇನಿಂಗ್ಸ್‌ ಗಳ ಆಧಾರದ ಮೇಲೆ ಚೆನ್ನೈ ಸುಲಭವಾಗಿ ಗುರಿ ಸಾಧಿಸಿತ್ತು.

ಇನ್ನು ಇಂದು ನಡೆಯಲಿರುವ ಚೆನ್ನೈ vs  ಡೆಲ್ಲಿ ನಡುವಿನ ಹೈ ವೋಲ್ಟೇಜ್ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಈ ಹಣಾಹಣಿ ನಡೆಯಲಿದೆ.

ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಆರು ವಿಕೆಟ್‌ ಗಳ ಭರ್ಜರಿ ಜಯದ ನಂತರ ಮತ್ತೆ ಪಂದ್ಯವನ್ನಾಡಲು ಬರುತ್ತಿದೆ. ಕಳೆದ ಪಂದ್ಯವನ್ನಾಡಿದ ರೀತಿಯೇ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಹಣಾಹಣಿಯನ್ನೂ ಆಡಿ, ಗೆಲುವು ಸಾಧಿಸಲು ಧೋನಿ ಪಡೆ ಪ್ಲಾನ್ ಮಾಡಿದೆ. ಸದ್ಯ ಚೆನ್ನೈ ತಂಡವು ಪಾಯಿಂಟ್‌ ಟೇಬಲ್ ನಲ್ಲಿ ಅಗ್ರ ಎರಡನೇ ಸ್ಥಾನಗಳಲ್ಲಿದೆ.

ಮತ್ತೊಂದೆಡೆ ಇಂಡಿಯನ್ ಪ್ರೀಮಿಯರ್ ಲೀಗ್ 2023 ರ ಸೀಸನ್ ನಲ್ಲಿ ಕಳಪೆ ಆರಂಭವನ್ನು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್, ಕಳೆದ ಪಂದ್ಯವನ್ನು ಆರ್ ಸಿ ಬಿ ವಿರುದ್ಧ ಗೆದ್ದಿತ್ತು. ಆದರೂ ಕೂಡ ಡೇವಿಡ್ ವಾರ್ನರ್ ತಂಡಕ್ಕೆ ಪ್ರಸ್ತುತ ಪಾಯಿಂಟ್ ಟೇಬಲ್‌ ನ ಕೊನೆಯ ಸ್ಥಾನದಿಂದ ಮೇಲೇರಲು ಸಾಧ್ಯವಾಗುತ್ತಿಲ್ಲ. ಇನ್ನು ನಾಕೌಟ್ ಹಂತಕ್ಕೆ ಅರ್ಹತೆ ಪಡೆಯಲು ಮುಂದಿರುವ ಪ್ರತಿ ಪಂದ್ಯವನ್ನು ಗೆಲ್ಲಲೇಬೇಕಾದ ಪರಿಸ್ಥಿತಿ ಇದೆ.

CSK vs DC, IPL 2023 ಪಂದ್ಯ: ಸಂಭಾವ್ಯ ಪ್ಲೇಯಿಂಗ್ XI:

ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ(wk/c), ದೀಪಕ್ ಚಾಹರ್, ಮತೀಶ ಪತಿರಾನ, ತುಷಾರ್ ದೇಶಪಾಂಡೆ, ಮಹಿಷ್ ತೀಕ್ಷಣ

ಸಂಭಾವ್ಯ ಇಂಪಾಕ್ಟ್ ಪ್ಲೇಯರ್ಸ್: ಅಂಬಟಿ ರಾಯುಡು, ಮಿಚೆಲ್ ಸ್ಯಾಂಟ್ನರ್, ಸುಭ್ರಾಂಶು ಸೇನಾಪತಿ, ಶೇಕ್ ರಶೀದ್, ಆಕಾಶ್ ಸಿಂಗ್

ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ (c), ಫಿಲಿಪ್ ಸಾಲ್ಟ್ (WK), ಮನೀಶ್ ಪಾಂಡೆ, ರಿಲೀ ರೊಸೊವ್, ಅಕ್ಷರ್ ಪಟೇಲ್, ಪ್ರಿಯಮ್ ಗಾರ್ಗ್, ರಿಪಾಲ್ ಪಟೇಲ್, ಎ ಖಾನ್, ಅನ್ರಿಚ್ ನಾರ್ಟ್ಜೆ, ಕುಲದೀಪ್ ಯಾದವ್, ಇಶಾಂತ್ ಶರ್ಮಾ

ಸಂಭಾವ್ಯ ಇಂಪಾಕ್ಟ್ ಪ್ಲೇಯರ್ಸ್: ಎ ಪೊರೆಲ್, ಲಲಿತ್ ಯಾದವ್, ಪ್ರವೀಣ್ ದುಬೆ, ಕೆ ಅಹ್ಮದ್, ಯಶ್ ಧುಲ್

ಇಂದಿನ IPL ಪಂದ್ಯದಲ್ಲಿ ಗೆಲುವು ಯಾರಿಗೆ?  

ಪಂದ್ಯಾವಳಿಯು ತನ್ನ ಕೊನೆಯ ಹಂತದಲ್ಲಿರುವುದರಿಂದ ಉಭಯ ತಂಡಗಳು ನಿರ್ಣಾಯಕ ಎರಡು ಅಂಕಗಳನ್ನು ಕಳೆದುಕೊಳ್ಳಲು ಬಯಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಎರಡೂ ತಂಡಗಳು ತಮ್ಮ ಶ್ರಮ ಮೀರಿ ಗೆಲುವಿಗಾಗಿ ಹೋರಾಡಲಿದ್ದಾರೆ. ಡೆಲ್ಲಿ ಪ್ರಸ್ತುತ ಫಾರ್ಮ್ ಗಮನಿಸಿದರೆ, ಚೆನ್ನೈ ತಂಡ ಮೇಲುಗೈ ಸಾಧಿಸಲಿದೆ ಎಂದನಿಸುತ್ತಿದೆ.

ಪಿಚ್ ವರದಿ ಹೀಗಿದೆ:

ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂ ಪಿಚ್ ಸ್ಪಿನ್ನರ್‌ ಗಳಿಗೆ ಸಾಕಷ್ಟು ತಿರುವು ನೀಡುತ್ತದೆ. ಆದರೆ ಪಂದ್ಯವು ಸಂಜೆ ನಡೆಯುತ್ತಿರುವುದರಿಂದ ಬ್ಯಾಟಿಂಗ್ ಉತ್ತಮವಾಗಿ ನಡೆಯುವ ಸಾಧ್ಯತೆ ಇದೆ.

ಹೆಡ್-ಟು-ಹೆಡ್ ದಾಖಲೆ ಏನು?

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪರಸ್ಪರ 27 ಬಾರಿ ಮುಖಾಮುಖಿಯಾಗಿದ್ದು, DC ಹತ್ತು ಬಾರಿ ಗೆಲುವು ಸಾಧಿಸಿದ್ದರೆ, CSK ಉಳಿದ 17 ಪಂದ್ಯಗಳನ್ನು ಗೆದ್ದಿದೆ.

ಇದನ್ನೂ ಓದಿ: WTC Finalಗೂ ಮುನ್ನ ಸ್ಪೋಟಕ ಬ್ಯಾಟಿಂಗ್ ಮಾಡುತ್ತಿದ್ದಾರೆ ಟೀಂ ಇಂಡಿಯಾದ ಈ ಕಿಲಾಡಿ! ಆಸ್ಟ್ರೇಲಿಯಾಗೆ ಮರಣಶಾಸನ ಖಂಡಿತ

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News