ಚೆನ್ನೈ: ಇಲ್ಲಿನ ಚಿದಂಬರಂ ಸ್ಟೇಡಿಯಂ ನಲ್ಲಿ ನಡೆದ ಐಪಿಎಲ್ ೨೦೨೩ ಟೂರ್ನಿಯ ಲಕ್ನೋ ವಿರುದ್ಧದ ಪಂದ್ಯದಲ್ಲಿ ಚೆನ್ನೈ ತಂಡವು ೧೨ ರನ್ ಗಳ ರೋಚಕ ಗೆಲುವನ್ನು ಸಾಧಿಸಿದೆ.
ಇದನ್ನೂ ಓದಿ : ಇಷ್ಠಾರ್ಥ ಸಿದ್ದಿಗಾಗಿ ಕುಟುಂಬ ಸಮೇತ ದೇವರ ಮೊರೆಹೋದ ಡಿಕೆ ಶಿವಕುಮಾರ್..!
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಲಕ್ನೋ ತಂಡವು ಚೆನ್ನೈ ತಂಡವನ್ನು ೨೦ ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ ೨೧೭ ರನ್ ಗಳಿಗೆ ಕಟ್ಟಿ ಹಾಕಿತು.ಚೆನ್ನೈ ತಂಡದ ಪರವಾಗಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಋತುರಾಜ್ ಗಾಯಕ್ವಾಡ್ ಕೇವಲ ೩೧ ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಹಾಗೂ ಮೂರು ಬೌಂಡರಿಗಳ ನೆರವಿನೊಂದಿಗೆ ೫೭ ರನ್ ಗಳಿಸಿ ಔಟಾದರು.ಕಾನ್ವೆ ಹಾಗೂ ಶಿವಂ ದುಬೆ ಕ್ರಮವಾಗಿ ತಲಾ ೪೭,೨೭ ರನ್ ಗಳಿಸಿದ್ದರಿಂದಾಗಿ ಚೆನ್ನೈ ತಂಡವು ೨೧೭ ರನ್ ಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು.
Innings Break!@ChennaiIPL post a commanding total of 217/7 on board!
Can @LucknowIPL chase this down to bag their second win of the season❓
Stay tuned for the second innings!
Scorecard ▶️ https://t.co/buNrPs0BHn#TATAIPL | #CSKvLSG pic.twitter.com/sM1foAuWW4
— IndianPremierLeague (@IPL) April 3, 2023
ಇದನ್ನೂ ಓದಿ- ಲಿಪ್ಸ್ಟಿಕ್ ಹಚ್ಚಿ ಹೆಂಗಸರ ಒಳ ಉಡುಪು ಧರಿಸಿದ ಗಂಡ: ಪತಿ ವಿರುದ್ಧ ಪತ್ನಿ ಕಂಪ್ಲೈಟ್
ಚೆನ್ನೈ ತಂಡವು ನೀಡಿದ ೨೧೮ ರನ್ ಗಳ ಬೃಹತ್ ಗೆಲುವಿನ ಗುರಿಯನ್ನು ಬೆನ್ನತ್ತಿದ ಲಕ್ನೋ ತಂಡವು ೨೦ ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ ೨೦೫ ರನ್ ಗಳನ್ನು ಮಾತ್ರ ಗಳಿಸುವಲ್ಲಿ ಯಶಸ್ವಿಯಾಯಿತು, ಲಕ್ನೋ ತಂಡದ ಪರವಾಗಿ ಕೆಲ್ ಮೆಯರ್ಸ್ ೫೩, ನಿಕೊಲಸ್ ಪೂರಣ್ ೩೨ ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ಹಂತಕ್ಕೆ ತಂದಿದ್ದರು, ಆದರೆ ಕೊನೆಯ ಕ್ಷಣದಲ್ಲಿ ರನ್ ಗಳ ವೇಗವು ಕುಸಿದಿದ್ದರಿಂದಾಗಿ ಅಂತಿಮವಾಗಿ ೨೦ ಓವರ್ ಗಳಲ್ಲಿ ೨೦೫ ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ೧೨ ರನ್ ಗಳ ಅಂತರದಿಂದ ಚೆನ್ನೈ ತಂಡವು ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.