GT vs KKR, IPL 2023: ಐಪಿಎಲ್ 2023ರ 12 ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಿದೆ. ಈ ಪಂದ್ಯವು ಗುಜರಾತ್’ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯುತ್ತಿದ್ದು, ಮೊದಲು ಟಾಸ್ ಗೆದ್ದ ಗುಜರಾತ್ ಬ್ಯಾಟಿಂಗ್ ಮಾಡಿದೆ, ಒಟ್ಟಾರೆ 20 ಓವರ್ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 204 ಬೃಹತ್ ಮೊತ್ತ ಕಲೆ ಹಾಕಿದೆ ಗುಜರಾತ್. ಗೆಲುವಿನ ಗುರಿ ಬೆನ್ನತ್ತಿದ್ದ ಕೆಕೆಆರ್ 20 ಓವರ್’ನಲ್ಲಿ 207 ರನ್ ಕಲೆ ಹಾಕಿ ರೋಚಕ ಗೆಲುವು ಸಾಧಿಸಿದ್ದಾರೆ.
ಐಪಿಎಲ್ 2023 ರ 12 ನೇ ಪಂದ್ಯದಲ್ಲಿ ಗುಜರಾತ್ ನಾಯಕ ರಶೀದ್ ಖಾನ್ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಕೋಲ್ಕತ್ತಾ ಎದುರು ಗುಜರಾತ್’ನ ಬ್ಯಾಟ್ಸ್‌ಮನ್’ಗಳು 203 ರನ್’ಗಳ ದೊಡ್ಡ ಸ್ಕೋರ್ ಗಳಿಸಿದ್ದರು. ಕೋಲ್ಕತ್ತಾ ಬೌಲರ್’ಗಳು ಕೇವಲ 4 ವಿಕೆಟ್’ಗಳನ್ನು ಕಬಳಿಸುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ: IPLನಲ್ಲಿ ಎರಡು ಮಹಾ ದಾಖಲೆ ಬರೆದ ಟೀಂ ಇಂಡಿಯಾದ 23 ವರ್ಷದ ಈ ಆರಂಭಿಕ ಆಟಗಾರ!
ಗುಜರಾತ್ ಪರ ವಿಜಯ್ ಶಂಕರ್ ಬ್ಯಾಟಿಂಗ್’ನಿಂದ ವೇಗವಾಗಿ ರನ್ ಗಳಿಸಿದರು. ಅವರು 21 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಸಂದರ್ಭದಲ್ಲಿ ಅಜೇಯ 63 (24 ಎಸೆತ) ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್‌ಗಳು ಸೇರಿವೆ. ಇದಲ್ಲದೇ ಯುವ ಬ್ಯಾಟ್ಸ್ ಮನ್ ಸಾಯಿ ಸುದರ್ಶನ್ (53) ಕೂಡ ಅರ್ಧಶತಕ ಗಳಿಸಿದರು. ಆರಂಭಿಕರಾದ ಶುಭಮನ್ ಗಿಲ್ ಕೂಡ 39 ರನ್ ಗಳಿಸಿದ್ದಾರೆ. ಕೋಲ್ಕತ್ತಾ ಪರ ಸುನಿಲ್ ನರೈನ್ ಮೂರು ಮತ್ತು ಸುಯಾಶ್ ಶರ್ಮಾ 1 ವಿಕೆಟ್ ಪಡೆದರು.
ಶುಭ್ಮನ್ ಗಿಲ್ ದಾಖಲೆ;
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಆರಂಭಿಕ ಆಟಗಾರ ಶುಭಮನ್ ಗಿಲ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು 31 ಎಸೆತಗಳಲ್ಲಿ 39 ರನ್’ಗಳ ಇನಿಂಗ್ಸ್ ಆಡಿದ್ದಾರೆ. ಈ ಇನ್ನಿಂಗ್ಸ್‌ನೊಂದಿಗೆ ಅವರು ಐಪಿಎಲ್’ನಲ್ಲಿ 2000 ರನ್ ಪೂರೈಸಿದ್ದಾರೆ. ಇದೀಗ ರಿಷಬ್ ಪಂತ್ ನಂತರ ಐಪಿಎಲ್’ನಲ್ಲಿ 2000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ರಿಷಬ್ ಪಂತ್ 23 ವರ್ಷ 27 ದಿನಗಳಲ್ಲಿ ಈ ಸಾಧನೆ ಮಾಡಿದ್ದರೆ, ಶುಭಮನ್ ಗಿಲ್ 23 ವರ್ಷ 214 ದಿನಗಳಲ್ಲಿ ಈ ಹಂತವನ್ನು ತಲುಪಿದ್ದಾರೆ.
ಇದನ್ನೂ ಓದಿ: CSK vs MI: ಅದೇನು ಕೈಗಳೇ ಅಥವಾ ಜೇಡರ ಬಲೆಯೇ? ಬೆಟ್ ಮಾಡ್ತೀವಿ… ಜೀವಮಾನದಲ್ಲಿ ನೋಡಿರಲ್ಲಿ ಇಂತಹ ಕ್ಯಾಚ್!
ಐಪಿಎಲ್’ನಲ್ಲಿ 2000 ರನ್ ಪೂರೈಸಿದ ಜೊತೆಗೆ, ಶುಭಮನ್ ಗಿಲ್ 200 ಬೌಂಡರಿಗಳನ್ನು ಸಹ ಬಾರಿಸಿದ್ದಾರೆ. ಕೋಲ್ಕತ್ತಾ ವಿರುದ್ಧದ ಅವರ ಇನ್ನಿಂಗ್ಸ್’ನಲ್ಲಿ ಶುಭಮನ್ 5 ಬೌಂಡರಿಗಳನ್ನು ಬಾರಿಸಿದರು. ಈ ಪಂದ್ಯಕ್ಕೂ ಮುನ್ನ ಅವರ ಹೆಸರಿನಲ್ಲಿ 197 ಬೌಂಡರಿಗಳಿದ್ದವು. ಅಂದರೆ, ಈಗ ಐಪಿಎಲ್’ನಲ್ಲಿ ಒಟ್ಟು 202 ಬೌಂಡರಿಗಳು ಹೊಡೆದಿದ್ದಾರೆ. ಐಪಿಎಲ್’ನಲ್ಲಿ, ಶುಭಮನ್ 77 ಪಂದ್ಯಗಳಲ್ಲಿ 2004 ರನ್ ಗಳಿಸಿದ್ದಾರೆ. ಇದರಲ್ಲಿ 15 ಅರ್ಧಶತಕಗಳೂ ಸೇರಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.