ಮತ್ತೊಮ್ಮೆ, ವಿರಾಟ್ ಜೊತೆಯಾದ 'ದಾದಾ'

ಸೌರವ್ ಗಂಗೂಲಿ 1991 ರಲ್ಲಿ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ 30,000 ರೂಪಾಯಿಗಳನ್ನು ಪಡೆದಿದ್ದರು.

Last Updated : Dec 1, 2017, 03:06 PM IST
  • ವಿರಾಟ್ ಕೊಹ್ಲಿಗೆ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ.
  • ವಿರಾಟ್, ಶಾಸ್ತ್ರಿ, ಧೋನಿ ವಿನೋದ್ ರೈ ಅವರ ಸಂಬಳ ಹೆಚ್ಚಳ.
  • ಆಟಗಾರರು 15 ವರ್ಷಗಳ ವೃತ್ತಿಜೀವನವನ್ನು ಹೊಂದಿದ್ದಾರೆ ಸೌರವ್ ಗಂಗೂಲಿ.
ಮತ್ತೊಮ್ಮೆ, ವಿರಾಟ್ ಜೊತೆಯಾದ 'ದಾದಾ'   title=

ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ರಾಷ್ಟ್ರೀಯ ತಂಡದ ಕ್ರಿಕೆಟ್ ಪಟುಗಳ ಸಂಬಳ ಹೆಚ್ಚಳಕ್ಕೆ ಸಂಬಂಧಿಸಿದಂತೆ  ಬಿಸಿಸಿಐನ ಹೆಚ್ಚುತ್ತಿರುವ ಆದಾಯದ ಪಾಲು ಪಡೆಯಲು ಆಟಗಾರರಿಗೆ ಅರ್ಹತೆ ಇದೆ ಎಂದು ಹೇಳುವ ಮೂಲಕ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ 'ದಾದಾ' ಮತ್ತೊಮ್ಮೆ ವಿರಾಟ್ ಜೊತೆ ಕೈಜೋಡಿಸಿದ್ದಾರೆ.

ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ವೇತನಗಳನ್ನು ಇಂದು ಗವರ್ನರ್ಸ್ ಸಮಿತಿ (COA) ಸ್ವೀಕರಿಸಿದೆ. ತರಬೇತುದಾರ ರವಿ ಶಾಸ್ತ್ರಿ ಅವರೊಂದಿಗೆ ಕೋಹ್ಲಿ ಮತ್ತು ಧೋನಿ ಗುರುವಾರ ಕೂಮೋ ಮುಖ್ಯಸ್ಥ ವಿನೋದ್ ರೈ, ಡಯಾನಾ ಎಡ್ಲ್ಜಿ ಮತ್ತು ಬಿಸಿಸಿಐ ಮುಖ್ಯ ಕಾರ್ಯನಿರ್ವಾಹಕ ರಾಹುಲ್ ಜೋಹ್ರಿಯವರನ್ನು ಭೇಟಿ ಮಾಡಿದರು.

ಪ್ರಚಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ರಂಗೂಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗಂಗೂಲಿ "ಖಂಡಿತವಾಗಿಯೂ ಆಟಗಾರರು ಹಣ ಪಡೆಯಬೇಕು, ಬೋರ್ಡ್ ತುಂಬಾ ಹಣವನ್ನು ಮಾಡುತ್ತಿದೆ. ಆಟಗಾರರು ಏಕೆ ಪಡೆಯಬಾರದು?  ಆಟಗಾರರು ಸಹ ಅದರಲ್ಲಿ ಪಾಲಿದೆ. ವಿರಾಟ್ ಕೊಹ್ಲಿ ಆಟವಾಡುವಾಗ ಇಡೀ ದೇಶ ಅವನನ್ನು ನೋಡುತ್ತದೆ" ಎಂದು ತಿಳಿಸಿದರು.

ಅವರ ವೃತ್ತಿಜೀವನವು ಚಿಕ್ಕದಾಗಿದೆ. ಕ್ರಿಕೆಟ್ ಸಂಘಗಳು ಆಟಗಾರರನ್ನು ನೋಡಿಕೊಳ್ಳಬೇಕೆಂದು ಮಾಜಿ ಬ್ಯಾಟ್ಸ್ಮನ್ ಹೇಳಿದರು. ಮುಂದುವರೆದು ಮಾತನಾಡಿದ ಅವರು "ಆಟಗಾರರ ವೃತ್ತಿಜೀವನವು ಕೇವಲ 15 ವರ್ಷಗಳ ಕಾಲ ಮಾತ್ರ. ಹೀಗಾಗಿ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಹೆಚ್ಚಿನ ಆಟಗಾರರು 15 ವರ್ಷಗಳ ನಂತರ ಆಡುವುದಿಲ್ಲ. ಕೆಲವು ಆಟಗಾರರು ಮಾತ್ರ 20 ವರ್ಷಗಳ ವರೆಗೆ ಆಡುತ್ತಾರೆ. ಅದಕ್ಕಾಗಿಯೇ ನಾನು ಸಂಬಳದ ಹೆಚ್ಚಳದ ದೊಡ್ಡ ಬೆಂಬಲಿಗರಾಗಿದ್ದೇನೆ" ಎಂದು ಹೇಳುತ್ತಾ ತಮ್ಮ ಬೆಂಬಲವನ್ನು ಸಮರ್ಥಿಸಿಕೊಂಡರು.

ಗಂಗೂಲಿ ಅವರು, "ಇತ್ತೀಚಿನ ದಿನಗಳಲ್ಲಿ ಆಟಗಾರರನ್ನು ನೋಡಿಕೊಳ್ಳುವ ವಿಧಾನ ಅದ್ಭುತವಾಗಿದೆ. ನಾನು 1991 ರಲ್ಲಿ ಆಡಿದಾಗ, ಇಡೀ ಆಸ್ಟ್ರೇಲಿಯಾ ಪ್ರವಾಸಕ್ಕೆ ನಾನು 30,000 ರೂಪಾಯಿಗಳನ್ನು ಪಡೆದುಕೊಂಡೆ ಮತ್ತು 2013 ರಲ್ಲಿ ನನ್ನ ವೃತ್ತಿಜೀವನವನ್ನು ಪೂರ್ಣಗೊಳಿಸಿದಾಗ, ಸಂಪೂರ್ಣ ಬದಲಾವಣೆ ಕಂಡುಬಂದಿದೆ. ಇದು ಪ್ರತಿ ವೃತ್ತಿಯಲ್ಲೂ ನಡೆಯುತ್ತದೆ. ಬಿಸಿಸಿಐ ಇದನ್ನು ಮಾಡುತ್ತಿದೆ" ಎಂದು ಬಿಸಿಸಿಐ ಬಗೆಗೂ ಸಂತಸ ವ್ಯಕ್ತಪಡಿಸಿದರು.

Trending News