IPL 2024 Chris Gayle and AB de Villiers: IPL 2024 ರ ಆರಂಭಕ್ಕೆ ಹೆಚ್ಚು ಸಮಯ ಉಳಿದಿಲ್ಲ.. ಭಾಗವಹಿಸುವ ಎಲ್ಲಾ 10 ತಂಡಗಳು ಸಹ ತಮ್ಮ ಸಿದ್ಧತೆಗಳನ್ನು ಪೂರ್ಣಗೊಳಿಸಿವೆ. ಐಪಿಎಲ್ನ ಮೊದಲ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ (ಚೆಪಾಕ್) ಮಾರ್ಚ್ 22 ರಂದು ಅಂದರೆ ಶುಕ್ರವಾರ ನಡೆಯಲಿದೆ. ಮೊದಲ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ ಬೆಂಗಳೂರು ತಂಡವನ್ನು ಎದುರಿಸಲಿದೆ.
ಚೆನ್ನೈ-ಆರ್ಸಿಬಿ ಹಣಾಹಣಿ:
ಐಪಿಎಲ್ನಲ್ಲಿ ಚೆನ್ನೈ ಮತ್ತು ಆರ್ಸಿಬಿ ನಡುವೆ ಹಲವು ರೋಚಕ ಪಂದ್ಯಗಳು ನಡೆದಿವೆ. ಸದ್ಯ ಐಪಿಎಲ್ 2024ರಲ್ಲಿಯೂ ಕೂಡ ಭರ್ಜರಿ ಪಂದ್ಯದೊಂದಿಗೆ ಆರಂಭವಾಗುವ ನಿರೀಕ್ಷೆಯಿದ್ದು.. ಮೊದಲ ಪಂದ್ಯವನ್ನು ಗೆದ್ದು ಗೆಲುವಿನೊಂದಿಗೆ ಟೂರ್ನಿ ಆರಂಭಿಸಲು ಉಭಯ ತಂಡಗಳು ಪ್ರಯತ್ನಿಸಲಿವೆ. ಹೀಗಿರುವಾಗ ಈ ಬಾರಿಯ ಐಪಿಎಲ್ನ ಮೊದಲ ಪಂದ್ಯವನ್ನು ಗೆಲ್ಲುವಲ್ಲಿ ಯಾವ ತಂಡ ಯಶಸ್ವಿಯಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ-CSK vs RCB ಮ್ಯಾಚ್..! ಧೋನಿ ಪಡೆ ಸಹಾಯ ಕೇಳಿದ ಕ್ರಿಕೆಟಿಗ ಆರ್. ಅಶ್ವಿನ್..!
ಕ್ರಿಸ್ ಗೇಲ್- ಎಬಿ ಡಿವಿಲಿಯರ್ಸ್ ಪ್ರವೇಶ:
ಐಪಿಎಲ್ನಲ್ಲಿ ಬ್ಯಾಟ್ನಿಂದ ಅಬ್ಬರ ಸೃಷ್ಟಿಸಿದ್ದ ವೆಸ್ಟ್ ಇಂಡೀಸ್ ನ ಕ್ರಿಸ್ ಅಲ್ಲದೆ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಕೂಡ ಐಪಿಎಲ್ ನಲ್ಲಿ ಘರ್ಜಿಸಲು ರೆಡಿಯಾಗಿದ್ದಾರೆ. ಆದರೆ ಈ ಇಬ್ಬರೂ ಆಟಗಾರರು ಪಂದ್ಯಾವಾಡುವುದಿಲ್ಲ.. ಬದಲಾಗಿ 2024 ರಲ್ಲಿ ಸ್ಪೋರ್ಟ್ಸ್ ಕಾಮೆಂಟರಿ ಮಾಡಲಿದ್ದಾರೆ.. ಹೌದು ಐಪಿಎಲ್ ಪ್ರಸಾರವಾಗುವ ಜಿಯೋ ಸಿನಿಮಾದ ಕಾಮೆಂಟರಿ ತಂಡದಲ್ಲಿ ಕ್ರಿಸ್ ಗೇಲ್ ಮತ್ತು ಡಿವಿಲಿಯರ್ಸ್ ಅವರನ್ನು ಸೇರಿಸಲಾಗಿದೆ..
ಸುಮಾರು 2 ತಿಂಗಳ ಕಾಲ ನಡೆಯುವ ಐಪಿಎಲ್ಗೆ ಕಾಮೆಂಟೇಟರ್ಗಳಿಗೆ 2ರಿಂದ 3 ಕೋಟಿ ರೂ. ನೀಡಲಾಗುತ್ತದೆ.. ಈ ಪಟ್ಟಿಯಲ್ಲಿ ಶೇನ್ ವ್ಯಾಟ್ಸನ್, ಅನಿಲ್ ಕುಂಬ್ಳೆ, ಸ್ಟೀವ್ ಸ್ಮಿತ್ ಅವರಂತಹ ಅನೇಕ ದಿಗ್ಗಜರು ಇದ್ದಾರೆ..
ಇದನ್ನೂ ಓದಿ-ಸ್ಮೃತಿ ಮಂದಾನ ಬಾಯ್ ಫ್ರೆಂಡ್ ಪಲಾಶ್ ಮುಚ್ಚಲ್ ಯಾರು.. ಎಷ್ಟು ಕೋಟಿಯ ಒಡೆಯ ಗೊತ್ತೇ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.