ನವದೆಹಲಿ: ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಶ್ರೇಷ್ಠ ಶೇನ್ ವಾರ್ನ್ ಕೆಲವು ದಿನಗಳ ಹಿಂದೆ ಮಾಜಿ ನಾಯಕ ಸ್ಟೀವ್ ವಾ ಅವರನ್ನು ಅತಿ ಸ್ವಾರ್ಥಿ ಕ್ರಿಕೆಟ್ ಆಟಗಾರ ಎಂದು ಹೇಳಿಕೆ ನೀಡಿದ್ದರು. ಕ್ರಿಕೆಟ್ ಆರ್ಕೈವಿಸ್ಟ್ ರಾಬ್ ಮೂಡಿ ಸಂಗ್ರಹಿಸಿದ ವೀಡಿಯೊದಲ್ಲಿ ಅತಿ ಹೆಚ್ಚು ಬಾರಿ ರನ್ ಔಟ್ ಆಗಿರುವ ಶೇನ್ ವಾರ್ನ್ ಅವರನ್ನು ತೋರಿಸಿದೆ.ಇದರಲ್ಲಿ ಸ್ಟೀವ್ ವಾ ಕೂಡ ಇದರ ಭಾಗವಾಗಿದ್ದಾರೆ.
For the record AGAIN & I’ve said this 1000 times - I do not hate S Waugh at all. FYI - I picked him in my all time best Australian team recently. Steve was easily the most selfish cricketer that I ever played with and this stat....... https://t.co/QMigV788L7
— Shane Warne (@ShaneWarne) May 15, 2020
ಇಎಸ್ಪಿಎನ್ಕ್ರಿನ್ಫೊ ಬಹಿರಂಗಪಡಿಸಿದ ಅಂಕಿ-ಅಂಶಗಳ ಪ್ರಕಾರ, ವಾ 104 ರನ್ ಔಟ್ ಗಳಲ್ಲಿ ತೊಡಗಿಸಿಕೊಂಡಿದ್ದಾರೆ.ಇವರ ಸಹ ಆಟಗಾರರಾದ ಶೇನ್ ವಾರ್ನ್ ಅವರನ್ನು 73 ಸಾರಿ ಔಟ್ ಆಗಿರುವುದನ್ನು ಈ ಅಂಕಿ ಅಂಶಗಳು ತೋರಿಸುತ್ತವೆ. ಇದಕ್ಕೆ ಪ್ರತಿಕ್ರಿಯಿಸಿರುವ ಶೇನ್ ವಾರ್ನ್, 'ನಾನು ಇದನ್ನು1000 ಬಾರಿ ಹೇಳಿದ್ದೇನೆ - ನಾನು ಸ್ಟೀವ್ ವಾ ಅವರನ್ನು ದ್ವೇಷಿಸುವುದಿಲ್ಲ. ನಾನು ಅವರನ್ನು ಇತ್ತೀಚೆಗೆ ನನ್ನ ಸಾರ್ವಕಾಲಿಕ ಅತ್ಯುತ್ತಮ ಆಸ್ಟ್ರೇಲಿಯಾ ತಂಡದಲ್ಲಿ ಆಯ್ಕೆ ಮಾಡಿದೆ. ಆದರೆ ಸ್ಟೀವ್ ವಾ ನಾನು ಆಡಿದ ಅತ್ಯಂತ ಸ್ವಾರ್ಥಿ ಕ್ರಿಕೆಟಿಗ' ಎಂದು ಹೇಳಿಕೆ ನೀಡಿದ್ದರು.
ಶೇನ್ ವಾರ್ನ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಸ್ಟೀವ್ ವಾ ' ಜನರು ಇದನ್ನು ದ್ವೇಷ ಎಂದು ಹೇಳುತ್ತಾರೆ, ಆದರೆ ನಾನೆಂದು ಕೂಡ ಇಬ್ಬರು ವ್ಯಕ್ತಿಗಳ ನಡುವೆ ದ್ವೇಷವನ್ನು ತಂದಿಲ್ಲ, ಇದು ಕೇವಲ ಒಬ್ಬ ವ್ಯಕ್ತಿಗೆ ಸಂಬಂಧಿಸಿದೆ.ಇನ್ನು ವಾರ್ನ್ ಅವರ ಹೇಳಿಕೆ ಅವರ ಮನ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ' ಎಂದು ಹೇಳಿದರು.