T20 World Cup: Ind vs Pak ಪಂದ್ಯಕ್ಕಾಗಿ ಲಕ್ಷಗಳಲ್ಲಿ ಮಾರಾಟವಾಗುತ್ತಿದೆ ಟಿಕೆಟ್

T20 World Cup: ವಿಶ್ವಕಪ್ ಮಾತ್ರವಲ್ಲ ಸಾಮಾನ್ಯವಾಗಿ ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯದ ಬಗ್ಗೆ ಇಡೀ ವಿಶ್ವದಾದ್ಯಂತ ಹೆಚ್ಚು ಕ್ರೇಜ್ ಇದೆ. ಟಿ 20 ವಿಶ್ವಕಪ್ ಬಗ್ಗೆ ಹೇಳುವುದಾದರೆ ಪಾಕಿಸ್ತಾನದ ವಿರುದ್ಧ ಭಾರತದ ದಾಖಲೆ ತುಂಬಾ ಚೆನ್ನಾಗಿದೆ. ಟಿ 20 ವಿಶ್ವಕಪ್‌ನಲ್ಲಿ ಇದುವರೆಗೆ ಭಾರತ ಮತ್ತು ಪಾಕಿಸ್ತಾನ ನಡುವೆ 5 ಪಂದ್ಯಗಳು ನಡೆದಿದ್ದು, ಅದರಲ್ಲಿ ಐದು ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದಿದೆ. 2016 ರ ವಿಶ್ವಕಪ್ ಪಂದ್ಯದಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾ 6 ವಿಕೆಟ್ ಗಳಿಂದ ಪಾಕಿಸ್ತಾನವನ್ನು ಸೋಲಿಸಿತ್ತು.

Written by - Yashaswini V | Last Updated : Oct 7, 2021, 11:09 AM IST
  • ಹೈವೋಲ್ಟೇಜ್ ಪಂದ್ಯಕ್ಕೆ ಲಕ್ಷಗಳಲ್ಲಿ ಮಾರಾಟವಾಗುತ್ತಿದೆ ಟಿಕೆಟ್
  • ನವೆಂಬರ್ 14 ರಂದು ಅಂತಿಮ ನಡೆಯಲಿರುವ ಅಂತಿಮ ಪಂದ್ಯ
  • ಟಿ 20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧ ಸೋತಿಲ್ಲ
T20 World Cup: Ind vs Pak ಪಂದ್ಯಕ್ಕಾಗಿ ಲಕ್ಷಗಳಲ್ಲಿ ಮಾರಾಟವಾಗುತ್ತಿದೆ ಟಿಕೆಟ್ title=
Ind vs Pak T20 World Cup

ನವದೆಹಲಿ: T20 World Cup- ಬಹುನಿರೀಕ್ಷಿತ ಟಿ 20 ವಿಶ್ವಕಪ್ 2021 ಅಕ್ಟೋಬರ್ 17 ರಿಂದ ಆರಂಭವಾಗಲಿದೆ. ಕುತೂಹಲಕಾರಿಯಾಗಿ, ಭಾರತ ಮತ್ತು ಪಾಕಿಸ್ತಾನ (IND vs PAK) ಒಂದೇ ಗುಂಪಿನಲ್ಲಿವೆ. ಭಾರತ ಮತ್ತು ಪಾಕಿಸ್ತಾನ ನಡುವೆ  ಅಕ್ಟೋಬರ್ 24 ರಂದು ಟಿ 20 ವಿಶ್ವಕಪ್ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಭಾರತವು ಈ ವರ್ಷ ಟಿ 20 ವಿಶ್ವಕಪ್ ಗೆಲ್ಲಲು ಮತ್ತು ಪಾಕಿಸ್ತಾನದ ವಿರುದ್ಧ ಗೆಲ್ಲಲು ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ಪಂದ್ಯದ ಬಗ್ಗೆ ಪ್ರೇಕ್ಷಕರು ತುಂಬಾ ಉತ್ಸುಕರಾಗಿದ್ದಾರೆ. 70 ರಷ್ಟು ಪ್ರೇಕ್ಷಕರಿಗೆ ಕ್ರೀಡಾಂಗಣಕ್ಕೆ ಹೋಗಲು ಐಸಿಸಿ ಅವಕಾಶ ನೀಡಿದೆ. 

ಹೈವೋಲ್ಟೇಜ್ ಪಂದ್ಯಕ್ಕೆ ಲಕ್ಷಗಳಲ್ಲಿ ಮಾರಾಟವಾಗುತ್ತಿದೆ ಟಿಕೆಟ್:
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕಾಗಿ ಅಭಿಮಾನಿಗಳು ಲಕ್ಷ ಲಕ್ಷ ನೀಡಿ ಟಿಕೆಟ್ ಕೊಳ್ಳುತ್ತಿದ್ದಾರೆ. ಪಂದ್ಯದ ಟಿಕೆಟ್‌ಗಳನ್ನು 333 ಪಟ್ಟು ಹೆಚ್ಚು ದುಬಾರಿಯಾಗಿ ಮಾರಾಟ ಮಾಡಲಾಗುತ್ತಿದೆ. ಭಾರತ ಮತ್ತು ಪಾಕಿಸ್ತಾನ (IND vs PAK) ನಡುವಿನ ಪಂದ್ಯದ ಟಿಕೆಟ್‌ಗಳ ಬೆಲೆ 2 ಲಕ್ಷ ರೂ. ಇದು ಅತ್ಯಂತ ದುಬಾರಿ ಟಿಕೆಟ್ ಬೆಲೆ ಆಗಿದ್ದು, ಈ ದರ ಸಾಮಾನ್ಯಕ್ಕಿಂತ ಸುಮಾರು 333 ಪಟ್ಟು ಹೆಚ್ಚು ದುಬಾರಿಯಾಗಿದೆ. ವಿಭಿನ್ನ ಸ್ಟ್ಯಾಂಡ್‌ಗಳು ವಿಭಿನ್ನ ಬೆಲೆಗಳನ್ನು ಹೊಂದಿವೆ. ಆರಂಭಿಕ ಟಿಕೆಟ್‌ಗಳು ರೂ. 12,500 ಕ್ಕೆ ಲಭ್ಯವಿದೆ. ಇದರ ಹೊರತಾಗಿ, ಅಭಿಮಾನಿಗಳು ಪ್ರೀಮಿಯಂ ಮತ್ತು ಪ್ಲಾಟಿನಂ ಸ್ಟ್ಯಾಂಡ್‌ಗಳಿಗಾಗಿ 31,200 ಮತ್ತು 54,100 ರೂ.ಗಳಿಗೆ ಟಿಕೆಟ್ ಖರೀದಿಸಬಹುದು. ಈ ಮೂರು ವಿಭಾಗಗಳ ಟಿಕೆಟ್ ಬಹುತೇಕ ಮುಗಿದಿದೆ. 

ಇದನ್ನೂ ಓದಿ- T20 World Cup: ಟಿ 20 ವಿಶ್ವಕಪ್‌ಗೂ ಮೊದಲು ಟೀಂ ಇಂಡಿಯಾಕ್ಕೆ ಆಘಾತ

ನವೆಂಬರ್ 14 ರಂದು ಅಂತಿಮ ಪಂದ್ಯ:
ಪಂದ್ಯಾವಳಿಯು ಅಕ್ಟೋಬರ್ 17 ರಿಂದ ಆರಂಭವಾಗಲಿದ್ದು, ಅದರ ಅಂತಿಮ ಪಂದ್ಯ ನವೆಂಬರ್ 14 ರಂದು ನಡೆಯಲಿದೆ. ಸ್ಕೈ ಬಾಕ್ಸ್ ಮತ್ತು ವಿಐಪಿ ಬಾಕ್ಸ್ ಬೆಲೆಗಳನ್ನು ಇನ್ನೂ ಅಧಿಕೃತ ವೆಬ್‌ಸೈಟ್‌ನಲ್ಲಿ ತೋರಿಸಲಾಗುತ್ತಿಲ್ಲ, ಆದರೆ ಅಕ್ಟೋಬರ್ 31 ರಂದು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದ ವಿಐಪಿ ಸೂಟ್‌ನ ಬೆಲೆ ರೂ .1 ಲಕ್ಷ 96 ಸಾವಿರ ಎಂದು ಹೇಳಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯಗಳ ಟಿಕೆಟ್ ಹೆಚ್ಚು ದುಬಾರಿಯಾಗುವ ಸಾಧ್ಯತೆಯಿದೆ. ಏಕೆಂದರೆ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಪಂದ್ಯದ ಕಡಿಮೆ ಬೆಲೆಯ ಟಿಕೆಟ್ ಗಳು 10,400 ರೂ.

ಇದನ್ನೂ ಓದಿ- T20 ವಿಶ್ವ ಕಪ್ ಟೀಂನಲ್ಲಿ ಅಕ್ಟೋಬರ್ 10 ರೊಳಗೆ ಆಗಲಿದೆ ಭಾರೀ ಬದಲಾವಣೆ , ಈ ಮೂವರು ಆಟಗಾರರ ಮೇಲೆ ತೂಗುಗತ್ತಿ

ಟಿ 20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧ ಸೋತಿಲ್ಲ:
ಟಿ 20 ವಿಶ್ವಕಪ್ (T20 World Cup) ಬಗ್ಗೆ ಹೇಳುವುದಾದರೆ, ಪಾಕಿಸ್ತಾನದ ವಿರುದ್ಧ ಭಾರತದ ದಾಖಲೆ ತುಂಬಾ ಚೆನ್ನಾಗಿದೆ. ಟಿ 20 ವಿಶ್ವಕಪ್‌ನಲ್ಲಿ ಇದುವರೆಗೆ ಭಾರತ ಮತ್ತು ಪಾಕಿಸ್ತಾನ ನಡುವೆ 5 ಪಂದ್ಯಗಳು ನಡೆದಿದ್ದು, ಅದರಲ್ಲಿ ಐದು ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದಿದೆ. 2016 ರ ವಿಶ್ವಕಪ್ ಪಂದ್ಯದಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾ 6 ವಿಕೆಟ್ ಗಳಿಂದ ಪಾಕಿಸ್ತಾನವನ್ನು ಸೋಲಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 5 ವಿಕೆಟ್ ಗೆ 118 ರನ್ ಗಳಿಸಿತು. ಉತ್ತರವಾಗಿ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು. 

ಇದೀಗ 2021 ರ ಟಿ 20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಅಕ್ಟೋಬರ್ 24 ರಂದು ಮುಖಾಮುಖಿಯಾಗಲಿವೆ. ಟಿ 20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನವನ್ನು ಒಂದೇ ಗುಂಪಿನಲ್ಲಿ ಸೇರಿಸಲಾಗಿದೆ. ಟಿ 20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಗೆಲುವಿನ ದಾಖಲೆ 5-0. ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿರುವುದರಿಂದ ಮತ್ತೊಮ್ಮೆ ಉಭಯ ದೇಶಗಳ ನಡುವೆ ರೋಚಕ ಪಂದ್ಯ ಕಂಡುಬರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News