Virat Kohli Statue in Jaipur: ಇದೀಗ ಭಾರತದಲ್ಲಿ ಐಪಿಎಲ್ ಕ್ರಿಕೆಟ್ ಹಬ್ಬ ನಡೆಯುತ್ತಿದ್ದು, ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ತಂಡದಲ್ಲಿ ಆಡುತ್ತಿದ್ದಾರೆ. ಇದುವರೆಗೆ ಆರ್‌ಸಿಬಿ ಆಡಿದ 6 ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆರ್‌ಸಿಬಿಗೆ 8 ಪಂದ್ಯಗಳು ಬಾಕಿಯಿದ್ದು, ಐಪಿಎಲ್ ಪ್ಲೇ ಆಫ್‌ಗೆ ಅರ್ಹತೆ ಪಡೆಯಲು ಅವರು ಈ 8 ಪಂದ್ಯಗಳಲ್ಲಿ ಕನಿಷ್ಠ 6 ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಇಲ್ಲದಿದ್ದರೆ ಈ ಬಾರಿ ಆರ್‌ಸಿಬಿ ಪ್ಲೇ-ಆಫ್‌ನಿಂದ ಹೊರಗುಳಿಯಲಿದೆ.
ಇದೇ ವೇಳೆ ಜೈಪುರದಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ ಸ್ಥಾಪನೆಯಾಗಲಿದೆ. ಕ್ರಿಕೆಟ್ ತಾರೆಯನ್ನು ಮೆಚ್ಚುವ ಅಭಿಮಾನಿಗಳು, ಯುವಕರು, ವಿಶೇಷವಾಗಿ ಮಕ್ಕಳ ಕೋರಿಕೆಯ ಮೇರೆಗೆ ವಿರಾಟ್ ಕೊಹ್ಲಿಯ ಮೇಣದ ಪ್ರತಿಮೆಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ನಹರ್‌ಗಢ ಜೈಪುರ ವ್ಯಾಕ್ಸ್ ಮ್ಯೂಸಿಯಂ ಸಂಸ್ಥಾಪಕ ಮತ್ತು ನಿರ್ದೇಶಕ ಅನುಪ್ ಶ್ರೀವಾಸ್ತವ ಹೇಳಿದ್ದಾರೆ.
VIRAT KOHLI'S STATUE AT JAIPUR WAX MUSEUM...!!!! 🐐
- The statue will be installed on April 18th, the face of cricket. [ETV Bharat]. pic.twitter.com/5z6aFrVw3b
— Johns. (@CricCrazyJohns) April 13, 2024
ಇದನ್ನೂ ಓದಿ-KKR vs LSG : KKR ವಿರುದ್ಧದ ಪಂದ್ಯಕ್ಕೆ ನ್ಯೂ ಜೆರ್ಸಿಯಲ್ಲಿ ಲಕ್ನೋ ಎಂಟ್ರಿ... ಗ್ರೀನ್, ಮೆರೂನ್ ಗುಟ್ಟೇನು?
ಈ ಬಗ್ಗೆ ಇನ್ನಷ್ಟು ಮಾತನಾಡಿದ ಅವರು "ಕಳೆದ ವರ್ಷ ವಿರಾಟ್ ಕೊಹ್ಲಿ ಅವರ ಪ್ರತಿಮೆಯನ್ನು ಮಾಡಲು ಪ್ರವಾಸಿಗರಿಂದ ಮನವಿ ಮಾಡಲಾಗಿತ್ತು. ಅದರಲ್ಲೂ ಮಕ್ಕಳು ಮತ್ತು ಯುವಕರು ವಿರಾಟ್ ಕೊಹ್ಲಿ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ.. ವಿಶ್ವ ಕ್ರಿಕೆಟ್‌ನಲ್ಲಿ ಅತ್ಯುನ್ನತ ಮಟ್ಟವನ್ನು ತಲುಪಿದ ಅವರು, ಸಚಿನ್ ತೆಂಡೂಲ್ಕರ್ ಮತ್ತು ಎಂಎಸ್ ಧೋನಿ ನಂತರ ನಾವು ವಿರಾಟ್ ಕೊಹ್ಲಿಯ ಮೇಣದ ಪ್ರತಿಮೆಯನ್ನು ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು. ಕುಶಲಕರ್ಮಿಗಳಾದ ಗಣೇಶ್ ಮತ್ತು ಲಕ್ಷ್ಮಿ ಅವರು ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆಯನ್ನು ನಿಖರವಾಗಿ ರೂಪಿಸಲು ಸುಮಾರು 2 ತಿಂಗಳ ಕಾಲ ಒಟ್ಟಾಗಿ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ-IPL 2024: ವ್ಯರ್ಥವಾದ ರೋಹಿತ್ ಶತಕದ ಹೋರಾಟ, ಚೆನ್ನೈ ಸೂಪರ್ ಕಿಂಗ್ಸ್ ಗೆ 20 ರನ್ ಗಳ ಗೆಲುವು
ವಿರಾಟ್ ಕೊಹ್ಲಿ ಅವರ ಮೇಣದ ಆಕೃತಿಯನ್ನು 5.9 ಅಡಿ ಎತ್ತರ ಮತ್ತು 35 ಕೆಜಿ ತೂಕದ ವಿನ್ಯಾಸ ಮಾಡಲಾಗಿದೆ. ಮೇಣದ ಪ್ರತಿಮೆಯಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟ್ ಕೂಡ ಇದೆ. ಮೇಣದ ಆಕೃತಿ ಮತ್ತು ಉಡುಪನ್ನು ವಿಶೇಷವಾಗಿ ಬಾಲಿವುಡ್ ಡಿಸೈನರ್ ಬೋಧ್ ಸಿಂಗ್ ವಿನ್ಯಾಸಗೊಳಿಸಿದ್ದಾರೆ.
ವಿರಾಟ್ ಕೊಹ್ಲಿ ಅವರ ಮೇಣದ ಆಕೃತಿಯು ಸುಮಾರು 300 ವರ್ಷಗಳಷ್ಟು ಹಳೆಯದಾದ ಮ್ಯೂಸಿಯಂನ ಅಮೂಲ್ಯ ಸಂಗ್ರಹಕ್ಕೆ 44 ನೇ ಸೇರ್ಪಡೆಯಾಗಿದೆ. ವಿಶ್ವ ಪರಂಪರೆಯ ದಿನವಾದ ಏಪ್ರಿಲ್ 18 ರಂದು ಜೈಪುರ ವಸ್ತುಸಂಗ್ರಹಾಲಯದಲ್ಲಿ ಮೇಣದ ಪ್ರತಿಮೆಯನ್ನು ಸ್ಥಾಪಿಸಲಾಗುವುದು. ಅದಕ್ಕೂ ಮುನ್ನ ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆಯ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.