ತೆಂಡೂಲ್ಕರ್ ನ ಈ ದಾಖಲೆ ಮುರಿಯಲಿಕ್ಕೆ ಕೊಹ್ಲಿಗೆ ಬೇಕು ಕೇವಲ 187 ರನ್..!

 ವಿರಾಟ್ ಕೊಹ್ಲಿ ಈಗ ಮುಟ್ಟಿದ್ದೆಲ್ಲವೂ ಚಿನ್ನ ಎನ್ನುವ ಹಾಗೆ ಆಗಿದೆ. ಅಷ್ಟಕ್ಕೂ ಕೊಹ್ಲಿ ನಿರ್ಮಿಸುತ್ತಿರುವ ಹೊಸ ದಾಖಲೆ ಏನು ಗೊತ್ತೇ? ಇನ್ನು ಕೇವಲ 187 ರನ್ ಗಳಿಸಿದರೆ ಸಾಕು ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ.

Last Updated : Oct 17, 2018, 06:58 PM IST
ತೆಂಡೂಲ್ಕರ್ ನ ಈ ದಾಖಲೆ ಮುರಿಯಲಿಕ್ಕೆ ಕೊಹ್ಲಿಗೆ ಬೇಕು ಕೇವಲ 187 ರನ್..! title=

ನವದೆಹಲಿ: ವಿರಾಟ್ ಕೊಹ್ಲಿ ಈಗ ಮುಟ್ಟಿದ್ದೆಲ್ಲವೂ ಚಿನ್ನ ಎನ್ನುವ ಹಾಗೆ ಆಗಿದೆ. ಅಷ್ಟಕ್ಕೂ ಕೊಹ್ಲಿ ನಿರ್ಮಿಸುತ್ತಿರುವ ಹೊಸ ದಾಖಲೆ ಏನು ಗೊತ್ತೇ? ಇನ್ನು ಕೇವಲ 187 ರನ್ ಗಳಿಸಿದರೆ ಸಾಕು ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ.

ಮುಂಬರುವ ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಯಲ್ಲಿ 187 ರನ್ ಗಳಿಸಿದರೆ ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಹಿಂದಿಕ್ಕಲಿದ್ದಾರೆ. ಸಚಿನ್ ತೆಂಡೂಲ್ಕರ್ ಇದುವರೆಗೂ ವಿಂಡಿಸ್ ವಿರುದ್ದ  39 ಏಕದಿನ ಪಂದ್ಯಗಳಲ್ಲಿ ಒಟ್ಟು 52.43 ಸರಾಸರಿಯಲ್ಲಿ 1573 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕ 11 ಅರ್ಧಶತಕ ಸೇರಿವೆ.

ಆದರೆ ಅದೇ ಕೊಹ್ಲಿ ಈಗ ಕೇವಲ 27 ಏಕದಿನ ಪಂದ್ಯದಲ್ಲಿ 60.30 ರ ಸರಾಸರಿಯಲ್ಲಿ 1387 ರನ್ ಗಳಿಸಿದ್ದಾರೆ.ಇದರಲ್ಲಿ ಒಟ್ಟು 4 ಶತಕ 9 ಅರ್ಧಶತಕ ಗಳು ಸೇರಿವೆ.ಈಗ ಸಚಿನ್ ದಾಖಲೆ ಮುರಿಯಲು ಕೇವಲ 187 ರನ್ ಗಳಷ್ಟೇ ಬಾಕಿ ಇದೆ.ರಾಹುಲ್ ದ್ರಾವಿಡ್ ಅವರು 1348 ರನ್  ಮತ್ತು ಸೌರವ್ ಗಂಗೂಲಿ 1142 ರನ್ ಗಳಿಸುವ ಮೂಲಕ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.
 

Trending News