Virat Kohli Biggest Rival: ಟೀಂ ಇಂಡಿಯಾದ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಗೆ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ದೊಡ್ಡ ಶತ್ರು ಇದ್ದಾರೆ. ಅಂದೊಮ್ಮೆ ನಿವೃತ್ತಿ ಘೋಷಿಸಿದ್ದ ಆ ಆಟಗಾರ, ಇದೀಗ ಮತ್ತೆ ಟೆಸ್ಟ್ ಕ್ರಿಕೆಟ್ ಗೆ ಮರಳಲು ಸಿದ್ಧತೆ ನಡೆಸಿದ್ದಾರೆ. ಈ ಸುದ್ದಿ ಬಂದ ತಕ್ಷಣ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ದಿಢೀರ್ ತಲ್ಲಣ ಮೂಡಿದೆ.
ಇದನ್ನೂ ಓದಿ: ಸಾರಾಗೆ ಕೈಕೊಟ್ಟ ಶುಭ್ಮನ್ ಗಿಲ್ ಬೇರೊಬ್ಬಳ ಜೊತೆ ರೊಮ್ಯಾನ್ಸ್! Team India ಆಟಗಾರನ ವಿಡಿಯೋ ಲೀಕ್…
ಇಂಗ್ಲೆಂಡ್ ನ ಆಲ್ ರೌಂಡರ್ ಮೊಯಿನ್ ಅಲಿ ಕ್ರಿಕೆಟ್ ಮೈದಾನದಲ್ಲಿ ವಿರಾಟ್ ಕೊಹ್ಲಿಗೆ ಯಾವಾಗಲೂ ದೊಡ್ಡ ಶತ್ರು ಎಂದು ಸಾಬೀತುಪಡಿಸಿದ್ದಾರೆ. ಮೊಯಿನ್ ಅಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ವಿರುದ್ಧ ಅತ್ಯುತ್ತಮ ದಾಖಲೆ ಹೊಂದಿದ್ದಾರೆ.
ಮೊಯಿನ್ ಅಲಿ ತಮ್ಮ ನಿವೃತ್ತಿಯನ್ನು ಕೊನೆಗೊಳಿಸಿ ಮತ್ತೆ ಟೆಸ್ಟ್ ಕ್ರಿಕೆಟ್ ಗೆ ಮರಳಲು ತಯಾರಿ ನಡೆಸಿದ್ದಾರೆ. ಈ ತಿಂಗಳಿನಿಂದ ಪ್ರಾರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಆಶಸ್ ಸರಣಿಯ ಮೊದಲು ಇಂಗ್ಲೆಂಡ್ ನ ಮಾರಕ ಸ್ಪಿನ್ನರ್ ಜ್ಯಾಕ್ ಲೀಚ್ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ಸರಣಿಯಿಂದ ಹೊರಗುಳಿದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಜಾಕ್ ಲೀಚ್ ಬದಲಿಗೆ ಮೊಯಿನ್ ಅಲಿ ತಂಡಕ್ಕೆ ಮರಳಬಹುದು. ಮೊಯಿನ್ ಅಲಿ ಕೂಡ ಟೆಸ್ಟ್ ಕ್ರಿಕೆಟ್ ಗೆ ಮರಳಲು ಸಿದ್ಧರಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು 10 ಬಾರಿ ಔಟ್ ಮಾಡಿರುವ ದಾಖಲೆ ಅಲಿ ಹೆಸರಿನಲ್ಲಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕೊಹ್ಲಿಯನ್ನು ಅತಿ ಹೆಚ್ಚು ಬಾರಿ ಔಟ್ ಮಾಡಿದ ಸ್ಪಿನ್ನರ್ ಗಳು:
10 - ಮೊಯಿನ್ ಅಲಿ
9 - ಆದಿಲ್ ರಶೀದ್
8 - ಗ್ರೇಮ್ ಸ್ವಾನ್
7 - ಆಡಮ್ ಝಂಪಾ
7 - ನಾಥನ್ ಲಿಯಾನ್
ಟೆಲಿಗ್ರಾಫ್ ವರದಿಯ ಪ್ರಕಾರ, ಮೊಯಿನ್ ಅಲಿ ಮುಂದಿನ 48 ಗಂಟೆಗಳಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಮರಳುವ ಬಗ್ಗೆ ದೊಡ್ಡ ಘೋಷಣೆ ಮಾಡಲಿದ್ದಾರೆ. ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್ ನಲ್ಲಿ 2,914 ರನ್ ಗಳಿಸಿದ್ದಲ್ಲದೆ, 195 ವಿಕೆಟ್ ಗಳನ್ನು ಪಡೆದಿದ್ದಾರೆ. 2014ರಲ್ಲಿ ಲಾರ್ಡ್ಸ್‌ನ ಐತಿಹಾಸಿಕ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದರು. 2014 ರಿಂದ ಇಲ್ಲಿಯವರೆಗೆ, ಮೊಯಿನ್ ಇಂಗ್ಲೆಂಡ್ ಪರ ಒಟ್ಟು 64 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.
ಇದನ್ನೂ ಓದಿ: “ಅಂದಿನಂತಿಲ್ಲ ಇಂದು..” ಆಸ್ಟ್ರೇಲಿಯಾಗೆ ಪಬ್ಲಿಕ್’ನಲ್ಲಿಯೇ ಸವಾಲೆಸೆದ Team Indiaದ ಈ ಬ್ಯಾಟ್ಸ್’ಮನ್!
111 ಇನ್ನಿಂಗ್ಸ್‌ಗಳಲ್ಲಿ 28.29 ಸರಾಸರಿಯಲ್ಲಿ 2914 ರನ್ ಗಳಿಸಿದ್ದಾರೆ, ಇದರಲ್ಲಿ 5 ಶತಕಗಳು ಮತ್ತು 14 ಅರ್ಧ ಶತಕಗಳು ಸೇರಿವೆ. ಇದಲ್ಲದೇ 36.66ರ ಸರಾಸರಿಯಲ್ಲಿ ಒಟ್ಟು 195 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಮೊಯಿನ್ 13 ಬಾರಿ ನಾಲ್ಕು ವಿಕೆಟ್ ಹಾಗೂ ಐದು ಬಾರಿ ಐದು ವಿಕೆಟ್ ಪಡೆದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.