ರಾಜ್‌ಕೋಟ್: ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಭಾರತದ 649 ರನ್ ಗಳ ಸವಾಲಿಗೆ ವೆಸ್ಟ್‌ಇಂಡೀಸ್ ತಂಡ ಕೇವಲ 181 ರನ್‌ಗಳಿಗೆ ಸರ್ವಪತನ ಕಂಡಿದೆ.
ಆ ಮೂಲಕ ಭಾರತ ತಂಡವು ಈಗ ವೆಸ್ಟ್ ಇಂಡಿಸ್ ನ್ನು ಪಾಲೋ ಆನ್ ಖೆಡ್ಡಾಗೆ ಕೆಡವಿದ್ದಲ್ಲದೆ 468 ರನ್ ಗಳ ಮುನ್ನಡೆಯನ್ನು ಕಾಯ್ದುಕೊಂಡಿದೆ. ಭಾರತದ ಪರ ಆರ್.ಅಶ್ವಿನ್ ಮತ್ತು ಮೊಹಮ್ಮದ ಶಮಿ ಕ್ರಮವಾಗಿ 4 ಮತ್ತು 2 ವಿಕೆಟ್ ಗಳನ್ನು ಪಡೆಯುವ ಮೂಲಕ ವೆಸ್ಟ್ ಇಂಡಿಸ್ ತಂಡದ ಸರ್ವಪತನಕ್ಕೆ ಕಾರಣವಾದರು.
INDIA CONTINUE TO DOMINATE
Ravichandran Ashwin picks up three wickets in the first session of day three to spin the Windies out for 181 in their first innings in Rajkot.
Follow #INDvWI live 👇https://t.co/bOSqME405O pic.twitter.com/QskWAJL4mh
— ICC (@ICC) October 6, 2018
ಕೆರಬಿಯನ್ನರ ಪರ ರೋಸ್ತನ್ ಚೇಸ್ ಮತ್ತು ಕೀಮೋ ಪಾಲ್ ರವನ್ನು ಹೊರತು ಪಡಿಸಿದರೆ ಉಳಿದವರ್ಯಾರು ಕೂಡ 40 ರ ಗಡಿ ದಾಟಲು ಪರದಾಡಿದರು.ಈಗ ಫಾಲೋ ಆನ್ ನೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿರುವ ವೆಸ್ಟ್ ಇಂಡಿಸ್ ತಂಡ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿದೆ.
ಭಾರತ ಮೊದಲ ಇನಿಂಗ್ಸ್ ನಲ್ಲಿ ನಾಯಕ ಕೊಹ್ಲಿ ,ಪೃಥ್ವಿ ಶಾ,ಮತ್ತು ರವಿಂದ್ರ ಜಡೇಜಾ ರವರ ಶತಕದ ನೆರವಿನಿಂದ 649 ರನ್ ಗಳಿಸಿತ್ತು.